newsfirstkannada.com

ಹೈಕೋರ್ಟ್ ವಕೀಲೆ ಚೈತ್ರಾ ಸಾವು.. ಡೆತ್​ ನೋಟ್​ನಲ್ಲಿ ಗಂಡನ ಬಗ್ಗೆ ಏನೇನಿದೆ?

Share :

Published May 12, 2024 at 9:42am

  ಪ್ರಶ್ನೆಗಳನ್ನ ಹಾಗೇ ಉಳಿಸಿದ ಹೈಕೋರ್ಟ್ ಅಡ್ವೋಕೇಟ್‌ ಚೈತ್ರಾ ಸಾವು

  ವಕೀಲೆ ವೃತ್ತಿ. ಪ್ರವೃತ್ತಿಯಲ್ಲಿ ಮಾಡೆಲ್‌ ಜತೆಗೆ ಬ್ಯಾಡ್ಮಿಂಟನ್​​ ಪ್ಲೇಯರ್‌

  ದಂಪತಿಗೆ ಒಂದು ಮುದ್ದಾದ ಗಂಡು ಮಗು ಇದ್ರೂ ಸಾವಿನ ದಾರಿ ಯಾಕೆ?

ಆಕೆ ವೃತ್ತಿಯಲ್ಲಿ ಹೈಕೋರ್ಟ್ ಅಡ್ವೋಕೇಟ್ ಆಗಿದ್ದವರು. ಪ್ರವೃತ್ತಿಯಲ್ಲಿ ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದವರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ, ನಿನ್ನೆ ಬೆಳಗ್ಗೆ ಆಕೆಯನ್ನ ಹುಡುಕಿ ಯಮರಾಯ ಬಂದಿದ್ದಾನೆ. ನೇಣಿನ ಕುಣಿಕೆಯಲ್ಲಿ ನೇತಾಡಿಸಿ ಎಳೆದೊಯ್ದಿದ್ದಾನೆ. ಅಸಲಿಗೆ ಆಕೆ 3 ತಿಂಗಳ ಹಿಂದೆ ಬರೆದಿಟ್ಟ ಡೆತ್​ನೋಟ್​ ಬಿಚ್ಚಿಟ್ಟ ರಹಸ್ಯ ಏನು?.

ನೋಡೋದಕ್ಕೆ ಸುರದ್ರೂಪಿ, ಅಂದಕ್ಕೆ ತಕ್ಕಂತೆ ಚೆಂದ. ಹಾಗಂತ ವಿದ್ಯೆ ಏನೂ ಕಮ್ಮಿ ಇಲ್ಲ. ಅದು ಕೂಡ ಹೈ ಪ್ರೊಫೈಲೇ ವೃತ್ತಿಯಲ್ಲಿ ವಕೀಲೆ. ಪ್ರವೃತ್ತಿಯಲ್ಲಿ ಮಾಡೆಲ್‌, ಜೊತೆಗೆ ಬ್ಯಾಡ್ಮಿಂಟನ್​​ ಪ್ಲೇಯರ್‌ ಬೇರೆ. ಇಷ್ಟೆಲ್ಲ ಇದ್ದ ಮೇಲೆ ಲೈಫ್​​ ಸುಂದರ ಪಯಣ ಆಗ್ಬೇಕಿತ್ತು. ಆದ್ರೆ ಶಾಕಿಂಗ್‌ ಅನ್ನೋ ಹಾಗೆ ಇದೇ ಅಡ್ವೋಕೇಟ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಪೆನ್​ಡ್ರೈವ್​ ಕೇಸ್​ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್‌

ಮನೆಯವ್ರ ಈ ಆಕ್ರಂದನಕ್ಕೆ ಕಾರಣವಾಗಿರೋದು ಹೈಕೋರ್ಟ್ ಅಡ್ವೋಕೇಟ್‌ ಚೈತ್ರಾ ಬಿ. ಗೌಡ ಅವ್ರ ಸಾವು. ಬೆಳಗ್ಗೆ ಸಂಜಯನಗರ‌ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಯ್ಯಪ್ಪ ಲೇಔಟ್​ನ ಮನೆಯಲ್ಲಿ 35 ವರ್ಷದ ಚೈತ್ರಾ ಗೌಡ ನೇಣಿಗೆ ಶರಣಾಗಿದ್ದಾರೆ. ಚೈತ್ರಾ ಪತಿ ಶಿವಕುಮಾರ್‌, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿದ್ದು, ದಂಪತಿಗೆ ಒಂದು ಮುದ್ದಾದ ಗಂಡು ಮಗು ಇದೆ. ಈ ಸಾವು ಸಾಕಷ್ಟು ಅನುಮಾನಕ್ಕೂ ಎಡೆ ಮಾಡಿಕೊಟ್ಟಿದ್ದು ಚೈತ್ರಾ 3 ತಿಂಗಳ ಹಿಂದೆ ಅಂದ್ರೆ ಮಾರ್ಚ್ 11ಕ್ಕೆ ಬರೆದಿಟ್ಟಿದ್ದರು ಎನ್ನಲಾದ ಡೆತ್ ನೋಟ್ ಈಗ ಪತ್ತೆಯಾಗಿದೆ.

ಡೆತ್​ ನೋಟ್​ನಲ್ಲಿ ಏನಿದೆ?

ನನ್ನ ಗಂಡ ತುಂಬಾ ಒಳ್ಳೆಯವರು. ನೀವು ಜೀವನವನ್ನ ಎಂಜಾಯ್ ಮಾಡಿ. ಮಗನನ್ನ ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್​ನಿಂದ ಬಳಲುತಿದ್ದೇನೆ. ಇದ್ರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟೆ. ಆದ್ರೆ ಆಗ್ತಿಲ್ಲ. ನಾನು ತನ್ನ ಜೀವನವನ್ನ ಕೊನೆಗೊಳಿಸುತ್ತಿದ್ದೇನೆ. ಸೂಸೈಡ್ ಮಾಡಿಕೊಳ್ಳೋದು ತಪ್ಪು ಅಂತ ಗೊತ್ತಿದೆ. ಆದ್ರೂ ಸಹ ಸೂಸೈಡ್‌ ಮಾಡಿಕೊಂಡು ಜೀವನ ಎಂಡ್ ಮಾಡಿಕೊಳ್ಳುತ್ತಿದ್ದೇನೆ.

– ಚೈತ್ರಾ ಬಿ.ಗೌಡ

ಇದೇ ಅಪಾರ್ಟ್ಮೆಂಟ್​ನಲ್ಲಿ ಚೈತ್ರಾ ತಮ್ಮ ಕೂಡ ವಾಸವಿದ್ರು. ಬೆಳಗ್ಗೆ 10 ಗಂಟೆಗೆ ಚೈತ್ರಾ ತಮ್ಮ ಪತಿ ಶಿವಕುಮಾರ್ ಜೊತೆ ಫೋನ್‌ನಲ್ಲಿ ಮಾತ್ನಾಡಿದ್ರಂತೆ. ತಮ್ಮನ ಜೊತೆಗೂ ಅಪಾರ್ಟ್‌ಮೆಂಟ್‌ನಲ್ಲೇ ಮಾತನಾಡಿದ್ದಾದೆ. ಆದ್ರೆ ಹನ್ನೊಂದು ಗಂಟೆ ಸುಮಾರಿಗೆ ಕಿಟಕಿಯಿಂದ ನೋಡಿದಾಗ ಫ್ಯಾನ್​​ಗೆ ವೇಲ್​ ಹಾಕಿ ನೇಣು ಹಾಕಿಕೊಂಡು ಸಾವನಪ್ಪಿರೋದು ಕಂಡುಬಂದಿದೆ.

ಚೈತ್ರಾ ಆತ್ಮಹತ್ಯೆ ಬಗ್ಗೆ ಅನುಮಾನ.. ವಕೀಲರಿಂದ ಕಮಿಷನರ್​ಗೆ ಪತ್ರ

ಇನ್ನು, ಚೈತ್ರಾ ಸಾವು ಸಹ ವಕೀಲರನ್ನ ಶಾಕ್​ಗೆ ಒಳಗಾಗುವಂತೆ ಮಾಡಿದೆ. ಆಕೆ ಒಬ್ಬ ದಿಟ್ಟ ಮಹಿಳೆಯಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವಂತಹವರಲ್ಲ. ಆಕೆಯ ಸಾವಿಗೆ ನ್ಯಾಯ ಸಿಗಬೇಕು. ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಅಂತ ಬೆಂಗಳೂರು ವಕೀಲರ ಸಂಘ ಪೊಲೀಸ್ ಕಮಿಷನರ್ ಹಾಗೂ ಉತ್ತರ ವಿಭಾಗದ ಡಿಸಿಪಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಇವಳು ತಾಯಿಯೋ, ರಾಕ್ಷಸಿಯೋ.. ಪುಟ್ಟ ಬಾಲಕಿ ಮೇಲೆ ಯಮನಂತೆ ವರ್ತಿಸಿದ ಅಮ್ಮ

ಸದ್ಯ ಮನೆಯವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಸಂಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು, ಮೃತದೇಹವನ್ನ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನ ಹಸ್ತಾಂತರಿಸಲಾಗಿದೆ. ಆದ್ರೆ ಹೈಕೋರ್ಟ್ ಅಡ್ವೋಕೇಟ್‌ ಚೈತ್ರಾರ ಸಾವು ಹಲವು ಪ್ರಶ್ನೆಗಳನ್ನ ಹಾಗೇ ಉಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈಕೋರ್ಟ್ ವಕೀಲೆ ಚೈತ್ರಾ ಸಾವು.. ಡೆತ್​ ನೋಟ್​ನಲ್ಲಿ ಗಂಡನ ಬಗ್ಗೆ ಏನೇನಿದೆ?

https://newsfirstlive.com/wp-content/uploads/2024/05/CHAITRA_NEW.jpg

Load More