newsfirstkannada.com

ಶ್ರೀದೇವಿ ಮೇಲೆ ಯುವ ಪರ ಲಾಯರ್​ ಸುಳ್ಳು ಆರೋಪ ಮಾಡಿದ್ರಾ? ಈ ಬಗ್ಗೆ ವಕೀಲೆ ಹೇಳಿದ್ದೇನು?

Share :

Published June 12, 2024 at 6:24am

    ದೊಡ್ಮನೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರೋ ಡಿವೋರ್ಸ್ ಬಿರುಗಾಳಿ

    ಜೂನಿಯರ್ ಪವರ್​ಸ್ಟಾರ್ ಎಂದೇ ಕರೆಸಿಕೊಳ್ತಿದ್ದ ಯುವರಾಜ್​ಕುಮಾರ್​

    ದೊಡ್ಮನೆಯಲ್ಲಿರೋ ಜೋಡಿಯ ದಾಂಪತ್ಯ ಜೀವನದಲ್ಲಿ ಮೂಡಿದ ಬಿರುಕು

ದೊಡ್ಮನೆಯಲ್ಲಿ ಬೀಸಿರೋ ಡಿವೋರ್ಸ್ ಬಿರುಗಾಳಿ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿದೆ. ಶ್ರೀದೇವಿ ಬೈರಪ್ಪ ವಿರುದ್ಧ ಯುವ ಮಾನಸಿಕ ಟಾರ್ಚರ್ ಅಂತಾ ಆರೋಪಿಸಿದ್ರೆ. ಶ್ರೀದೇವಿಯವ್ರು ಆ ಸಹ ನಟಿಯೇ ಕಾರಣ ಅಂತಿದ್ದಾರೆ. ಶ್ರೀದೇವಿ ವಿರುದ್ಧ ಮಾಡ್ತಿರೋ ಆರೋಪಕ್ಕೆ ಅವರ ಪರ ವಕೀಲರು ನ್ಯೂಸ್​ ಫಸ್ಟ್​ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ದೊಡ್ಮನೆ ಅಂದ್ರನೇ ಚಿತ್ರರಂಗಕ್ಕೂ ಅಭಿಮಾನಿಗಳೂ ಒಂದು ಹೆಮ್ಮೆ.

ಆದ್ರೀಗ ಅದೇ ದೊಡ್ಮನೆಯಲ್ಲಿರೋ ಜೋಡಿಯಲ್ಲಿಯೇ ಬಿರುಕು ಮೂಡಿದೆ. ಪ್ರೀತಿಸಿ ಮದುವೆಯಾಗಿದ್ದ ಯುವ ಹಾಗೂ ಶ್ರೀದೇವಿ ದಾಂಪತ್ಯ ಮುರಿದು ಬೀಳೋ ಸ್ಥಿತಿಯಲ್ಲಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ಆರೋಪ ಪ್ರತ್ಯಾರೋಪ ಮಾಡ್ತಿದ್ದಾರೆ. ಶ್ರೀದೇವಿ ಬೇಡಾ ಅಂತಾ ಯುವರಾಜ್‌ಕುಮಾರ್ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ, ಮೊನ್ನೆ ಯುವ ಪರ ವಕೀಲರು ಶ್ರೀದೇವಿ ವಿರುದ್ಧ ಮಾಡಿರೋ ಆರೋಪ ಅಂತಿಹದ್ದಲ್ಲ. ವಕೀಲರ ಆರೋಪಕ್ಕೆ ಶ್ರೀದೇವಿ ಪರ ವಕೀಲೆ ದೀಪ್ತಿ ಕೌಂಟರ್ ಕೊಟ್ಟಿದ್ದು, ಮಾನನಷ್ಟ ಮೊಕದ್ದಮೆ ಹಾಕೋದಾಗಿ ವಾರ್ನ್‌ ಮಾಡಿದ್ದಾರೆ.

ಇದನ್ನೂ ಓದಿ: ‘ದರ್ಶನ್​​ಗೂ ಕೊಲೆಗೂ ಸಂಬಂಧ ಇಲ್ಲ ಎಂದ ವಕೀಲರು; ಕೋರ್ಟ್​ನಲ್ಲಿ ಮಂಡಿಸಿದ್ದೇನು..?

ಇದನ್ನೂ ಓದಿ: ‘ಯವ ರಾಜ್​ಕುಮಾರ್​​ಗೆ ಸಹನಟಿ ಜತೆ ಅಫೇರ್​’- ದೊಡ್ಮನೆ ಕುಡಿ ವಿರುದ್ಧ ಶ್ರೀದೇವಿ ಆರೋಪ

ಇನ್ನು, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಶ್ರೀದೇವಿ ಪರ ವಕೀಲರಾಗಿರುವಂತಹ ದೀಪ್ತಿ ಅಯಾಥಾನ್ ಅವರು, ಒಬ್ಬ ಪ್ರೊಫೆಷನಲ್ ಲಾಯರ್ ಆಗಿ ಹುಡುಗಿಯ ಚಾರಿತ್ರ್ಯವಧೆ ಮಾಡಿರುವುದು ದುರಾದೃಷ್ಟಕರ. ಅದರಲ್ಲೂ ಕೋರ್ಟ್‌ನಿಂದ ಇನ್ನೂ ನೋಟಿಸ್‌ ಸಿಕ್ಕಿಲ್ಲ. ಕೋರ್ಟ್ ಇವತ್ತು ನೋಟಿಸ್ ಕೊಟ್ಟಿದೆ. ಅದಕ್ಕೆ ಇನ್ನೂ ಪ್ರತಿಕ್ರಿಯೆ ಕೊಡುವುದು ಇದೆ. ಅವರು ಮಾಡಿರುವ ಆರೋಪಗಳನ್ನೆಲ್ಲವನ್ನೂ ಅವರು ಕೋರ್ಟ್‌ನಲ್ಲಿ ಪ್ರೂವ್ ಮಾಡಬೇಕು ಎಂದಿದ್ದಾರೆ.

ಮಾತನ್ನು ಮುಂದುವರೆಸಿದ ಅವರು..  ಆ ಮೇಲೆ ಇಂತಹ ಆರೋಪಗಳು ಮಾಡುತ್ತಿರುವುದರ ಬಗ್ಗೆ ತೀರ್ಮಾನ ಆಗುತ್ತೆ. ಆದರೆ ಕೋರ್ಟ್‌ನಿಂದ ನೋಟಿಸ್ ಬರುವುದಕ್ಕೂ ಮುನ್ನವೇ ಯುವ ಪರ ವಕೀಲರು ಮೀಡಿಯಾ ಮುಂದೆ ಬಹಿರಂಗ ಪಡಿಸಿದ್ದು ಸರಿಯಲ್ಲ ಎಂದಿದ್ದಾರೆ. ನನಗೆ ಇನ್ನೂ ಕೋರ್ಟ್‌ನಿಂದ ನೋಟಿಸ್ ಬಂದಿಲ್ಲ. ಅಷ್ಟರೊಳಗೆ ಅವರ ಕಡೆಯ ಲಾಯರ್ ಮೀಡಿಯಾದ ಮುಂದೆ ಸಂಪೂರ್ಣವಾಗಿ ಓದಿ ಬಿಟ್ಟಿದ್ದಾರೆ. ಲೀಗಲ್ ಪ್ರೋಫೆಷನ್‌ನಲ್ಲಿ ಇದು ನಿಜಕ್ಕೂ ದುರಾದೃಷ್ಟಕರ. ಫ್ಯಾಮಿಲಿ ಕೋರ್ಟ್‌ನಲ್ಲಿ ಕೆಲವೊಂದು ವಿಷಯಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲಿ ಹುಡುಕಿದರೂ ಪಾರ್ಟಿ ಹೆಸರು ಬರೋದಿಲ್ಲ. ನಮಗೆ ಬಂದ ಕೂಡಲೇ ನಾವು ಕಾನೂನನ್ನು ಫಾಲೋ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀದೇವಿ ಮೇಲೆ ಯುವ ಪರ ಲಾಯರ್​ ಸುಳ್ಳು ಆರೋಪ ಮಾಡಿದ್ರಾ? ಈ ಬಗ್ಗೆ ವಕೀಲೆ ಹೇಳಿದ್ದೇನು?

https://newsfirstlive.com/wp-content/uploads/2024/06/yuv-raj.jpg

Load More