Advertisment

ಐಶ್ವರ್ಯ ರೈ ಮತ್ತೊಂದು ವಿಡಿಯೋ ವೈರಲ್, ಐಫಾ ಅವಾರ್ಡ್ ಪಡೆದುಕೊಂಡ ಐಶ್ ಮಾಡಿದ್ದೇನು?

author-image
Gopal Kulkarni
Updated On
ಐಶ್ವರ್ಯ ರೈ ಮತ್ತೊಂದು ವಿಡಿಯೋ ವೈರಲ್, ಐಫಾ ಅವಾರ್ಡ್ ಪಡೆದುಕೊಂಡ ಐಶ್ ಮಾಡಿದ್ದೇನು?
Advertisment
  • ಐಫಾ ಅವಾರ್ಡ್​ 2024ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಐಶ್​
  • ಐಶ್ವರ್ಯಗೆ ಪ್ರಶಸ್ತಿ ನೀಡಿದ ತೆಲುಗು ನಟ ನಂದಮೂರಿ ಬಾಲಕೃಷ್ಣ
  • ಪ್ರಶಸ್ತಿ ಪಡೆದಯುವಾಗ ನಂದಮೂರಿ ಬಾಲಕೃಷ್ಣಗೆ ನಮಸ್ಕರಿಸಿದ ಐಶ್

ಇತ್ತೀಚೆಗಷ್ಟೆ ಐಶ್ವರ್ಯ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಕನ್ನಡದ ಸೂಪರ್​ಸ್ಟಾರ್ ಶಿವರಾಜ್​ಕುಮಾರ್ ಅವರನ್ನು ಭೇಟಿಯಾದ ಐಶ್ವರ್ಯ ರೈ ಬಚ್ಚನ್, ತಮ್ಮ ಪುತ್ರಿಯನ್ನು ಶಿವಣ್ಣರಿಗೆ ಪರಿಚಯ ಮಾಡಿಸಿಕೊಟ್ಟರು. ಈ ವೇಳೆ ಐಶ್​ ಪುತ್ರಿ ಆರಾಧ್ಯ ಬಚ್ಚನ್ ಶಿವಣ್ಣನ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ವಿಡಿಯೋ ಇಂಟರ್​ನೆಟ್​ನಲ್ಲಿ ಸಖತ್ ವೈರಲ್ ಆಗಿತ್ತು. ಈಗ ಇದೇ ರೀತಿ ಐಫಾ ಅವಾರ್ಡ್​​ನಲ್ಲಿ ಐಶ್ವರ್ಯ ರೈ, ತೆಲುಗು ಸೂಪರ್​​ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ಪಾದ ಮುಟ್ಟಿ ನಮಸ್ಕರಿಸಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Advertisment

ಇದನ್ನೂ ಓದಿ:BBK11: ಅತಿ ಹೆಚ್ಚು ವೋಟ್ ಪಡೆದ್ರು ಚೈತ್ರಾ ಕುಂದಾಪುರ ನರಕಕ್ಕೆ ಯಾಕೆ? ಕಾದಿದ್ಯಾ ಬಿಗ್​ ಟ್ವಿಸ್ಟ್! 


">September 28, 2024

ಐಫಾ ಅವಾರ್ಡ್​ 2024ರಲ್ಲಿ ಐಶ್ವರ್ಯ ರೈ ಬಚ್ಚನ್​ಗೆ ಪೊನ್ನಿಯಿನಿ ಸೆಲ್ವಂ ಸಿನಿಮಾಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಅರಸಿ ಬಂದಿತ್ತು. ಈ ಒಂದು ಪ್ರಶಸ್ತಿಯನ್ನು ಪ್ರಧಾನ ಮಾಡಲು ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ವೇದಿಕೆಯ ಮೇಲೆ ಬಂದಿದ್ದರು. ಬಾಲಕೃಷ್ಣ ಅವರಿಂದ ಅವಾರ್ಡ್ ಪಡೆದುಕೊಂಡ ನಟಿ ಐಶು, ಅವರ ಪಾದ ಮುಟ್ಟಿ ನಮಸ್ಕರಿಸಿದರು. ಬಾಲಕೃಷ್ಣ ಅವರಿಗೆ ಆಶೀರ್ವಾದ ಕೂಡ ಮಾಡಿದರು.

Advertisment

ಇದನ್ನೂ ಓದಿ:ಸುಬ್ಬ-ಸುಬ್ಬಿಗೆ ಬೇಲಾ? ಜೈಲಾ? ಇಂದು ನಟ ದರ್ಶನ್‌ಗೆ ನಿರ್ಣಾಯಕ ದಿನ; ಜಾಮೀನು ಸಿಗುತ್ತಾ?

ಐಶ್ವರ್ಯ ರೈ ಬಚ್ಚನ್ ಅವರು ಅವಾರ್ಡ್ ಪಡೆದು ಬಾಲಕೃಷ್ಣ ಅವರ ಪಾದ ಮುಟ್ಟಿ ನಮಸ್ಕರಿಸಿದ ವಿಡಿಯೋ ಈಗ ದೊಡ್ಡ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಐಶ್ವರ್ಯ ರೈ ಬಚ್ಚನ್ ಅವರ ಸಂಸ್ಕಾರ ಹಾಗೂ ನಯ ವಿನಯದ ಬಗ್ಗೆ ಜನರು ಹಾಡಿ ಹೊಗಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment