Advertisment

ಅಭಿಷೇಕ್​​ ಬಚ್ಚನ್​ಗಿಂತಲೂ ಐಶ್ವರ್ಯ ರೈ ಶ್ರೀಮಂತೆ; ಇವರ ಬಳಿ ಇರೋ ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರಾ!

author-image
Gopal Kulkarni
Updated On
ಅಭಿಷೇಕ್​​ ಬಚ್ಚನ್​ಗಿಂತಲೂ ಐಶ್ವರ್ಯ ರೈ ಶ್ರೀಮಂತೆ; ಇವರ ಬಳಿ ಇರೋ ಆಸ್ತಿ ಕೇಳಿದ್ರೆ ಶಾಕ್​ ಆಗ್ತೀರಾ!
Advertisment
  • ಅಭಿಷೇಕ್ ಮತ್ತು ಐಶ್ವರ್ಯ ಬಚ್ಚನ್ ಬಳಿ ಇರುವ ಒಟ್ಟು ಆಸ್ತಿ ಎಷ್ಟು
  • ಅಭಿಷೇಕ್ ಬಚ್ಚನ್​ಗಿಂತ ನಾಲ್ಕು ಪಟ್ಟು ಹೆಚ್ಚು ಆಸ್ತಿ ಹೊಂದಿದ್ದಾರೆ ಐಶು
  • ಈ ಜೋಡಿ ಸೇರಿ ಖರೀದಿಸಿದ ಒಟ್ಟು ಐಷಾರಾಮಿ ಬಂಗಲೆಗಳೆಷ್ಟು ಗೊತ್ತಾ?

ಬಾಲಿವುಡ್ ಜಗತ್ತು ಇತ್ತೀಚೆಗೆ ಕಂಡ ಅತ್ಯಂತ ಸುಂದರ ಜೋಡಿ ಅಂದ್ರೆ ಅದು ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್. 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ 2011ರಲ್ಲಿ ತಂದೆ ತಾಯಿಯಾದರು. ಈ ದೇಶ ಕಂಡ ಅತ್ಯಂತ ಶ್ರೀಮಂತ ದಂಪತಿಗಳಲ್ಲಿ ಐಶ್ವರ್ಯ ಹಾಗೂ ಅಭಿಷೇಕ್ ಕೂಡ ಒಬ್ಬರು. ಇದೊಂದು ಪರ್ಫೆಕ್ಟ್ ಜೋಡಿ ಅಂತ ಖ್ಯಾತಿ ಗಳಿಸಿದ ಜೋಡಿಗಳಲ್ಲೂ ಕೂಡ ಅಭಿಷೇಕ್ ಐಶ್​ ಕೂಡ ಬರ್ತಾರೆ. ಕಳೆದ ಕೆಲವು ತಿಂಗಳಿಂದ ಈ ಜೋಡಿಯ ವಿಚಾರವಾಗಿ ಅನೇಕ ಗಾಳಿ ಸುದ್ದಿಗಳು ಹಬ್ಬಿದ್ದವು. ಇಬ್ಬರ ನಡುವೆ ದೊಡ್ಡ ಭಿನ್ನಾಭಿಪ್ರಾಯಗಳ ಮೊಳಕೆ ಒಡೆದಿವೆ. ಸದ್ಯದಲ್ಲಿಯೇ ಈ ಜೋಡಿ ದೂರವಾಗಲಿ ಎಂದೆಲ್ಲಾ ಗಾಳಿ ಮಾತುಗಳು ತೇಲಿ ಬಂದಿದ್ದವು.ಆದ್ರೆ ಅದ್ಯಾವುದಕ್ಕೂ ರೆಕ್ಕೆ ಪುಕ್ಕಗಳಿಲ್ಲ ಎಂದು ಇತ್ತೀಚೆಗೆ ಆ ಜೋಡಿಯ ಮೌನವೇ ಉತ್ತರ ನೀಡಿದೆ. ಐಶ್ವರ್ಯ ರೈ ಸಿನಿ ಜರ್ನಿಯೇ ಒಂದು ಅದ್ಭುತ ಅದರ ಮೇಲೆ ಒಂದು ಪಕ್ಷಿನೋಟವನ್ನು ಬೀರುವುದಾದ್ರೆ.

Advertisment

ಇದನ್ನೂ ಓದಿ: ‘ಮದುವೆ ನಂತರ ಆ ವಿಚಾರ ಗೊತ್ತಾಯ್ತು’- ನಾಗಚೈತನ್ಯ ದಾಂಪತ್ಯದ ಬಗ್ಗೆ ನಟಿ ಸಮಂತಾ ಏನಂದ್ರು?

ಐಶ್ವರ್ಯ ರೈ 1994ರಲ್ಲಿ ಮಿಸ್ ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡವರು 1997ರಲ್ಲಿ ಔರ್ ಪ್ಯಾರ್ ಹೋಗಯಾ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಟ್ಟ ಐಶ್ವರ್ಯ ಹಿಂದೆ ತಿರುಗಿ ನೋಡಲೇ ಇಲ್ಲ ದೇವದಾಸ್ ಹಮ್ ದಿಲ್ ದೇ ಚುಕೆ ಸನಮ್ ಗುರು ಧೂಮ್ 2 ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾ ಕೊಟ್ಟ ಐಶ್ವರ್ಯ ರೈ ಬಹುಬೇಡಿಕೆಯ ನಟಿಯಾಗಿ ತೆರೆಯ ಮೇಲೆ ಮೆರೆದವರು. ಸಿನಿಮಾ ಹಾಗೂ ಜಾಹಿರಾತುಗಳಿಂದಲೇ ಹೆಸರಿಗೆ ತಕ್ಕಂತೆ ಐಶ್ವರ್ಯ ಅಷ್ಟೈಶ್ವರ್ಯವನ್ನು ಹೊಂದಿದರು ಅವರ ಬಳಿ ಇರುವ ಆಸ್ತಿ ಸುಮಾರು 862 ಕೋಟಿ ರೂಪಾಯಿಯಷ್ಟಿದೆ. ಇದು ಅಭಿಷೇಕ್ ಬಚ್ಚನ್ ಗಳಿಸಿದ ಆಸ್ತಿಗಿಂತ ನಾಲ್ಕು ಪಟ್ಟು ಹೆಚ್ಚು.

publive-image

ಇತ್ತೀಚೆಗೆ ಬಂದ ವರದಿಯ ಪ್ರಕಾರ ಅಭಿಷೇಕ್ ಬಚ್ಚನ್ ಬಳಿ ಇರುವ ಒಟ್ಟು ಆಸ್ತಿ 280 ಕೋಟಿ ರೂಪಾಯಿ ಮೌಲ್ಯದಷ್ಟು. ಈ ಇಬ್ಬರ ಜೋಡಿಯ ಒಟ್ಟು ಆಸ್ತಿ ಎಲ್ಲೆಲ್ಲಿದೆ ಎಷ್ಟಿದೇ ಅಂತ ಇತ್ತೀಚೆಗೆ ಒಂದು ವರದಿ ಪ್ರಕಟವಾಗಿತ್ತು ಅದರ ಪ್ರಕಾರ. ಐಶ್ವರ್ಯ ರೈ ತನ್ನ ಜನಪ್ರಿಯತೆ ತುತ್ತತುದಿಯಲ್ಲಿದ್ದ ಸಮಯದಲ್ಲಿ ದೇಶ ವಿದೇಶ ಸೇರಿ ಹಲವು ಪ್ರಾಡಕ್ಟ್​ಗಳಿಗೆ ರಾಯಭಾರಿಯಾಗಿದ್ದರು. ದಿನಕ್ಕೆ 5 ರಿಂದ 7 ಕೋಟಿ ರೂಪಾಯಿ ಸಂಬಾವನೆ ಪಡೆಯುತ್ತಿದ್ದರು. ಇದೇ ವೇಳೆ ಐಶ್ವರ್ಯ ರೈ ಅನೇಕ ಕಡೆ ತಮ್ಮ ಹಣವನ್ನು ಹೂಡಿಕೆ ಮಾಡಿದ್ದರು. ಅಂದಿನ ದಿನಗಳಲ್ಲಿ 5 ಕೋಟಿ ರೂಪಾಯಿ ಹೆಲ್ತ್​ಕೇರ್​ ಸ್ಟಾರ್ಟ್​ಅಪ್​ನಲ್ಲಿ ಹೂಡಿಕೆ ಮಾಡಿದ್ದ ಐಶ್ವರ್ಯ ರೈ.

Advertisment

publive-image

ಇದನ್ನೂ ಓದಿ:ತಿಮ್ಮಪ್ಪನ ಲಡ್ಡುವಿನಲ್ಲಿ ಕಲಬೆರಕೆ; ಪ್ರಾಯಶ್ಚಿತ್ತ ದೀಕ್ಷಾ ಕೈಗೊಂಡ ಪವನ್ ಕಲ್ಯಾಣ್

ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದುಬೈನ ಜುಮೈಹ್ರಾ ಗಲ್ಫ್​ ಎಸ್ಟೇಟ್​ನಲ್ಲಿ ಇಬ್ಬರೂ ತಲಾ ಒಂದೊಂದು ಗಲ್ಫ್​ ಎಸ್ಟೇಟ್​ನ್ನು ಅಕ್ಕಪಕ್ಕದಲ್ಲಿಯೇ ಖರೀದಿ ಮಾಡಿದ್ದಾರೆ. ಇದರಲ್ಲಿ ಪ್ರವೈಟ್ ಗಲ್ಪ್ ಕಾರ್ಟ್ ಔಟ್​ಡೋರ್ ಪೂಲ್ ಸೇರಿದಂತೆ ಅನೇಕ ಐಷಾರಾಮಿ ಸವಲತ್ತುಗಳಿವೆ. ಇನ್ನು ಬಚ್ಚನ್ ಫ್ಯಾಮಿಲಿಯ ಹೆಸರಲ್ಲಿ ಒಟ್ಟು ಐದು ಐಷಾರಿಮಿ ಬಂಗಲೆಗಳಿವೆ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್​ನಲ್ಲಿ ಈ ಜೋಡಿ ಇತ್ತೀಚೆಗಷ್ಟೇ ಈ ಜೋಡಿ ಹೊಸ ಐಷಾರಾಮಿ ಅಪಾರ್ಟ್​ಮೆಂಟ್ ಖರೀದಿಸಿದೆ. 2015ರಲ್ಲಿಯೇ ಬಚ್ಚನ್ ಕುಟುಂಬ 21 ಕೋಟಿ ರೂಪಾಯಿ ಮೌಲ್ಯದ 5 ಬೆಡ್​ರೂಮ್​ಗಳ ಐಷಾರಾಮಿ ಬಂಗಲೆಯನ್ನು ಖರೀದಿ ಮಾಡಿತ್ತು.

publive-image

ಇದನ್ನೂ ಓದಿ:ಇದೇ ನನ್ನ ಲಾಸ್ಟ್ ಸಿನಿಮಾ.. ರಾಧಿಕಾ ಕುಮಾರಸ್ವಾಮಿ ಕಣ್ಣೀರು; ಶಾಕಿಂಗ್ ನಿರ್ಧಾರಕ್ಕೆ ಕಾರಣವೇನು?

Advertisment

ಪತ್ರಿಕೆಯೊಂದು ವರದಿ ಮಾಡಿದ ಪ್ರಕಾರ ಐಶ್ವರ್ಯ ಹಾಗೂ ಅಭಿಷೇಕ್ ವೊರ್ಲಿಯ ಸ್ಕೈಲಾಕ್ ಟವರ್ಸ್​ನಲ್ಲಿ ಲ್ಯಾವಿಶ್​ ಬಂಗಲೆಯೊಂದನ್ನು ಖರೀದಿ ಮಾಡಿದ ಬಗ್ಗೆಯೂ ವರದಿಯಾಗಿತ್ತು. ಇದೆಲ್ಲದರ ಮಧ್ಯೆಯೂ ಇಂದಿಗೂ ಐಶ್ವರ್ಯ ಅಭಿಷೇಕ್ ಬಚ್ಚನ್​ಗಿಂತ 4 ಪಟ್ಟು ಸಿರಿವಂತರು.. 862 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಐಶ್ವರ್ಯ ಹೊಂದಿದ್ದರೆ 280 ಕೋಟಿ ರೂಪಾಯಿ ಮೌಲ್ಯದಷ್ಟು ಆಸ್ತಿಯನ್ನ ಅಭಿಷೇಕ್ ಬಚ್ಚನ್ ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment