/newsfirstlive-kannada/media/post_attachments/wp-content/uploads/2024/02/Team-India-Test.jpg)
ಬಾಂಗ್ಲಾದೇಶ ವಿರುದ್ಧದ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಶೀಘ್ರದಲ್ಲೇ ಪ್ರಕಟವಾಗಲಿದೆ. ಟೆಸ್ಟ್​ ಸರಣಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ದಿಗ್ಗಜರು ಆಡಲಿದ್ದಾರೆ. ಅದೇ ಸಮಯದಲ್ಲಿ ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್​ಗೂ ಸ್ಥಾನ ಸಿಗುವ ನಿರೀಕ್ಷೆ ಇದೆ.
ಬಾಂಗ್ಲಾದೇಶದ ನಂತರ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಟೆಸ್ಟ್ ಸರಣಿಗಳೂ ಕೂಡ ಬರಲಿವೆ. ಬಾಂಗ್ಲಾ ಸರಣಿಗೆ ಆಯ್ಕೆ ಆಗಿರುವ ತಂಡವೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್​​ ಸರಣಿಗೂ ಆಡಿಸುವ ಸಾಧ್ಯತೆ ದಟ್ಟವಾಗಿದೆ. ಬಿಸಿಸಿಐ ಭವಿಷ್ಯದ ತಂಡಕ್ಕಾಗಿ ಯುವ ಆಟಗಾರರಿಗೆ ಹೆಚ್ಚು ಒತ್ತು ನೀಡುತ್ತಿರೋದ್ರಿಂದ ಐವರು ಟೆಸ್ಟ್​​ ಸ್ಪೆಷಲಿಸ್ಟ್​​ಗಳು ತಂಡಕ್ಕೆ ಮರಳೋದು ಕಷ್ಟಸಾಧ್ಯವಾಗಿದೆ.
ಇದನ್ನೂ ಓದಿ:ಬಾಂಗ್ಲಾ ಟೆಸ್ಟ್​ ಸರಣಿಗೆ ಸಂಭಾವ್ಯ ಟೀಂ ಇಂಡಿಯಾ; 634 ದಿನಗಳ ಬಳಿಕ ಈ ಸ್ಟಾರ್ ತಂಡಕ್ಕೆ ಎಂಟ್ರಿ..!
ಚೇತೇಶ್ವರ್ ಪೂಜಾರ
ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್​ಮನ್ ಆಗಿರುವ ಅವರು, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​ ಆಡಿರೋದು ಅವರ ಕೊನೆಯ ಟೆಸ್ಟ್ ಮ್ಯಾಚ್. ಆಸ್ಟ್ರೇಲಿಯಾ ವಿರುದ್ಧ ಫೈನಲ್ ಪಂದ್ಯದಲ್ಲಿ 41 ರನ್​ ಗಳಿಸಿದ್ದರು. ನಂತರ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ಪೂಜಾರ ಅವರ ಬ್ಯಾಟಿಂಗ್ ಆರ್ಡರ್​ ನಂಬರ್ ಮೂರು ಆಗಿತ್ತು. ಅವರ ಸ್ಥಾನದಲ್ಲಿ ಗಿಲ್ ಆಡುತ್ತಿದ್ದಾರೆ.
ಅಜಿಂಕ್ಯ ರಹಾನೆ
ಸುಮಾರು ಒಂದೂವರೆ ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದ ರಹಾನೆ WTC ಫೈನಲ್​​ನಲ್ಲಿ ಕಂಬ್ಯಾಕ್ ಮಾಡಿದ್ದರು. ಆದರೆ ನಿರಸ ಪ್ರದರ್ಶನದಿಂದ ಮತ್ತೆ ಅವರನ್ನು ಕೈಬಿಡಲಾಯಿತು. ಈ ಬಾರಿಯ ಟೆಸ್ಟ್ ಸರಣಿಗೆ ಆಯ್ಕೆ ಆಗುವ ನಿರೀಕ್ಷೆ ಕಡಿಮೆ ಇದೆ. ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್ ಅವರಂತಹ ಆಟಗಾರರು ಇರುವಾಗ ರಹಾನೆಗೆ ಸ್ಥಾನ ಸಿಗೋದು ಕಷ್ಟ.
ಉಮೇಶ್ ಯಾದವ್
ಉಮೇಶ್ ಯಾದವ್ ತುಂಬಾ ತಿಂಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದಾರೆ. 2023 ಜೂನ್​​ನಲ್ಲಿ ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಆಡಿದರು. 36 ವರ್ಷದ ಯಾದವ್, ಭಾರತಕ್ಕಾಗಿ 57 ಟೆಸ್ಟ್​, 75 ಏಕದಿನ, 9 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ನಲ್ಲಿ 170, ಏಕದಿನದಲ್ಲಿ 106, ಟಿ-20ಯಲ್ಲಿ 12 ವಿಕೆಟ್ ಪಡೆದುಕೊಂಡಿದ್ದಾರೆ.
ವೃದ್ಧಿಮಾನ್ ಶಾ
ಧೋನಿ ನಿವೃತ್ತಿ ಬೆನ್ನಲ್ಲೇ ಸಾಹಾಗೆ ಸಾಕಷ್ಟು ಅವಕಾಶಗಳು ಒಲಿದು ಬಂದಿತ್ತು. ಆದರೆ ಅದನ್ನು ಅವರು ಸರಿಯಾಗಿ ಬಳಸಿಕೊಳ್ಳಲಿಲ್ಲ. 2021ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನು ಆಡಿದರು. ನಂತರ ಸಾಹಾ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ. 39 ವರ್ಷದ ಸಾಹ ಭಾರತದ ಪರ 40 ಟೆಸ್ಟ್​ ಮತ್ತು 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 1353 ರನ್​ ಬಾರಿಸಿದ್ದಾರೆ. ಇವರ ಸ್ಥಾನದ ಮೇಲೆ ಕೆಎಸ್​ ಭರತ್, ಇಶಾನ್ ಕಿಶನ್, ಧ್ರುವ ಜುರೆಲ್ ಮತ್ತು ರಿಷಬ್ ಪಂತ್ ಅವರಂತಹ ಯುವ ವಿಕೆಟ್ ಕೀಪರ್​​ಗಳು ಇದ್ದಾರೆ.
ಇಶಾಂತ್ ಶರ್ಮಾ
ಒಂದು ಕಾಲದಲ್ಲಿ ಇಶಾಂತ್ ಶರ್ಮಾ ಟೀಂ ಇಂಡಿಯಾದ ಪ್ರಮುಖ ಬೆನ್ನೆಲುಬು ಆಗಿದ್ದರು. ಇವರ ಕ್ರಿಕೆಟ್ ವೃತ್ತಿ ಬದುಕು ಬಹುತೇಕ ಮುಗಿದಿದೆ. 35 ವರ್ಷ ಇಶಾಂತ್ ಭಾರತದ ಪರ 105 ಟೆಸ್ಟ್, 80 ಏಕದಿನ ಹಾಗೂ 14 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ನಲ್ಲಿ 311, ಏಕದಿನದಲ್ಲಿ 115, ಟಿ-20ಯಲ್ಲಿ 8 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಇದೀಗ ಅವರ ಸ್ಥಾನದ ಮೇಲೆ ಸಿರಾಜ್, ಮುಕೇಶ್ ಕುಮಾರ್, ಅರ್ಷದೀಪ್, ಖಲೀಲ್ ಅಹ್ಮದ್ ಆವರಿಸಿಕೊಂಡಿದ್ದಾರೆ.
ಇದನ್ನೂ ಓದಿ:RCB ಕಣ್ಣು ಯಾರ ಮೇಲೆ.. ಮೆಗಾ ಹರಾಜಿಗೂ ಮುನ್ನ 8 ಕನ್ನಡಿಗರು ಹಾಟ್ ಟಾಪಿಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ