/newsfirstlive-kannada/media/post_attachments/wp-content/uploads/2024/09/Samsung.jpg)
ಜನಪ್ರಿಯ ಇ-ಕಾಮರ್ಸ್​​ ಮಳಿಗೆಯಾದ ಅಮೆಜಾನ್​​ ಗ್ರೇಟ್​​ ಇಂಡಿಯನ್​​ ಫೆಸ್ಟಿವಲ್​​ 2024 ಸೇಲ್​ ನಡೆಸಲು ಮುಂದಾಗಿದೆ. ಸೆಪ್ಟೆಂಬರ್​ 20ರಿಂದ ಮಾರಾಟವನ್ನು ನಡೆಸಲಿದೆ. ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಭರ್ಜರಿ ಆಫರ್​ ಘೋಷಿಸಿದೆ.
ಗ್ರೇಟ್​​ ಇಂಡಿಯನ್​​​ ಫೆಸ್ಟಿವಲ್​ ಪ್ರಾರಂಭಕ್ಕೂ ಮುನ್ನವೇ ರಿಯಾಯಿತಿ ದರದಲ್ಲಿ ಲಭ್ಯವಿರುವ ಸ್ಮಾರ್ಟ್​​ಫೋನ್​ಗಳ ಹೆಸರುಗಳನ್ನು ಬಹಿರಂಗಪಡಿಸಿದೆ. ಅದರಲ್ಲಿ ಒನ್​ಪ್ಲಸ್​​ 12, ಪೊಕೊ ಎಕ್ಸ್​​6 ಸೇರಿ ಕೆಲವು ಸ್ಮಾರ್ಟ್​ಫೋನ್​​ಗಳ ಮೇಲೆ ರಿಯಾಯಿತಿ ನೀಡುತ್ತಿದೆ.
ಈಗಾಗಲೇ ಅಮೆಜಾನ್​​​ ಗ್ರೇಟ್​ ಇಂಡಿಯನ್​​​ ಫೆಸ್ಟಿವಲ್​​ 2024 ಮಾರಾಟದ ಟೀಸರ್​​ ಅನ್ನು ಪ್ರಕಟಿಸಿದೆ. OnePlus 11R, OnePlus 12, OnePlus 12R, OnePlus Nord CE 4 Lite, OnePlus Nord CE 4 ರಿಯಾಯಿತಿ ದರದಲ್ಲಿ ಸಿಗುವ ಬಗ್ಗೆ ಹೇಳಿದೆ. Realms Narzo, Realme GT 6T ಸ್ಮಾರ್ಟ್​ಫೋನಿನ ಕೂಡ ದರ ಕಡಿತಗೊಳಿಸಿ ಮಾರಾಟ ಮಾಡುವುದಾಗಿ ತಿಳಿಸಿದೆ.
ಇದಲ್ಲದೆ, iQOO Z9s Pro, iQOO Z9, iQOO Z9 Lite, iQOO Neo 9 Pro, iQOO 12 ಸ್ಮಾರ್ಟ್​ಫೋನ್​ಗಳು ಸಹ ಕಡಿಮೆ ಬೆಲೆಗೆ ಸಿಗಲಿದೆ ಎಂದು ಭರವಸೆ ನೀಡಿದೆ. ಸ್ಯಾಮ್​​ಸಂಗ್​ನ Galaxy S24 Ultra, Galaxy M15 ಸಾಧನಗಳು ರಿಯಾಯಿತಿ ದರದಲ್ಲಿ ಸಿಗುವ ಬಗ್ಗೆ ತಿಳಿಸಿದೆ.
ಅಮೆಜಾನ್​​ ಗ್ರೇಟ್​​ ಇಂಡಿಯನ್​​​ ಫೆಸ್ಟಿವಲ್​ನಲ್ಲಿ ಸ್ಮಾರ್ಟ್​ಫೋನ್​ಗಳ ಮೇಲೆ ಶೇ80ರಷ್ಟು ರಿಯಾಯಿತಿ ನೀಡುವ ಬಗ್ಗೆ ಭರವಸೆ ನೀಡಿದೆ. ಇದಲ್ಲದೆ, ಇಯರ್​ಫೋನ್​, ಪವರ್​ ಬ್ಯಾಂಕ್​, ಚಾರ್ಜರ್​​, ಚಾರ್ಜಿಂಗ್​ ಕೇಬಲ್​​​ ಕೂಡ ಕಡಿಮೆ ಬೆಲೆಗೆ ಸಿಗಲಿದೆ. ಲ್ಯಾಪ್​ಟಾಪ್​ಗಳ ಮೇಲೂ ಶೇ40ರಷ್ಟು ರಿಯಾಯಿತಿ ಘೋಷಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us