newsfirstkannada.com

ಅಂಬಾನಿ ಫ್ಯಾಮಿಲಿ ಭರ್ಜರಿ ಡ್ಯಾನ್ಸ್‌.. ಮೊಮ್ಮಕ್ಕಳ ಜೊತೆ ಅಜ್ಜ-ಅಜ್ಜಿ ಜಾಲಿ ರೈಡ್; ಸ್ಪೆಷಲ್‌ ವಿಡಿಯೋ ಇಲ್ಲಿದೆ!

Share :

Published July 6, 2024 at 2:44pm

Update July 6, 2024 at 2:48pm

  ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಮಾಜಿ ಕ್ರಿಕೆಟರ್ ಧೋನಿ ದಂಪತಿ

  ಅಂಬಾನಿ ಫ್ಯಾಮಿಲಿ ಡ್ಯಾನ್ಸ್ ಮಾಡಿದ್ದು ಯಾವ ಸಿನಿಮಾದ ಹಾಡಿಗೆ?

  ಮೊಮ್ಮಕ್ಕಳನ್ನ ಕರೆದುಕೊಂಡು ಮುಖೇಶ್-ನೀತಾ ಕಾರಲ್ಲಿ ಜಾಲಿ ರೈಡ್‌

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬದಲ್ಲಿ ಮದುವೆ ಸಡಗರ ಜೋರಾಗಿದೆ. ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ. ಮುಂಬೈನ ಜಿಯೋ ವರ್ಲ್ಡ್​​ ಸೆಂಟರ್​ನಲ್ಲಿ ನಡೆದ ಸಂಗೀತ ಸಮಾರಂಭದಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ಸೇರಿ ಇಡೀ ಫ್ಯಾಮಿಲಿಯೇ ಶಾರುಕ್​ ಖಾನ್ ಅವರ ಓಂ ಶಾಂತಿ ಓಂ ಸಿನಿಮಾದ ಸಾಂಗ್​ಗೆ ಕುಣಿದು ಸಂತಸ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್ ಸ್ಥಾನ ತುಂಬುವ ಯಂಗ್ ಪ್ಲೇಯರ್ಸ್ ಇವರೇ​.. ಈ ಯುವ ಬ್ಯಾಟ್ಸ್​​ಮನ್ಸ್​ಗೆ ಇದೆ ಆ ಖದರ್

‘ದೀವಾಂಗಿ ದೀವಾಂಗಿ’ ಸಾಂಗ್​ನ ಪ್ರಾರಂಭದಲ್ಲಿ ಮೊದಲು ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಮತ್ತು ಅಳಿಯ ಆನಂದ್ ಪಿರಾಮಲ್ ಕಾಣಿಸಿಕೊಳ್ಳುತ್ತಾರೆ. ಇವರ ನಂತರ ಆನಂದ್ ಪಿರಾಮಲ್ ಹೆಂಡತಿ ಹಾಗೂ ಮುಖೇಶ್ ಅಂಬಾನಿ ಪುತ್ರಿ ನಿಶಾ ಅಂಬಾನಿ ಕೈ ಬೀಸುತ್ತಾ ಹಾಡಿನಲ್ಲಿ ಎಂಟ್ರಿಯಾಗ್ತಾರೆ. ನಿಶಾ ಬಳಿಕ ಶ್ಲೋಕಾ ಮೆಹ್ತಾ ಅದ್ಭುತವಾಗಿ ಡ್ಯಾನ್ಸ್​ ಮಾಡುತ್ತಾ ಸ್ಟೇಜ್​ಗೆ ಬರುತ್ತಾರೆ.

ಇದನ್ನೂ ಓದಿ: ಮೊಬೈಲ್​ ಚಾರ್ಜಿಂಗ್​​ ಹಾಕುವಾಗ ಹುಷಾರ್​​.. ಪಿಜಿಯಲ್ಲಿ ವಿದ್ಯಾರ್ಥಿ ಸಾವು

ಭಾರತದ ಸಂಪ್ರದಾಯಕ ಉಡುಗೆಯಲ್ಲಿ ಪಿಂಕ್ ಕಲರ್ ಡ್ರೆಸ್​ನಲ್ಲಿ ನೀತಾ ಅಂಬಾನಿ ಭರತ್ಯನಾಟ್ಯ ಮಾಡುತ್ತಾ ಆಗಮಿಸಿದ್ದಾರೆ. ಪತ್ನಿ ಆಗಮನದ ಬಳಿಕ ಮುಖೇಶ್ ಅಂಬಾನಿ ಎರಡು ಕೈಗಳನ್ನ ಚಾಚಿ ಸಾಂಗ್​ಗೆ ಎಂಟ್ರಿ ಕೊಡುತ್ತಾರೆ. ಈ ಎಲ್ಲರು ಬಂದ ಬಳಿಕ ಕೊನೆಗೆ ನವ ವರ, ವಧು ಅನಂತ್ ಹಾಗೂ ರಾಧಿಕಾ ಸ್ಟೆಪ್ಸ್​ ಹಾಕುತ್ತಾ ಸ್ಟೇಜ್​ಗೆ ಬರುತ್ತಾರೆ. ಬಳಿಕ ಎಲ್ಲರೂ ಸೇರಿ ವೇದಿಕೆ ಮೇಲೆ ವಿವಿಧ ಸ್ಟೆಪ್ಸ್​ ಹಾಕಿ, ಶರ್ಟ್​ ಕಾಲರ್ ಮೇಲೆತ್ತಿ ಕುಣಿದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಹಲವಾರು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಾಲ್ವರು ಮೊಮ್ಮಕ್ಕಳ ಜೊತೆ ಜಾಲಿ ರೈಡ್

ಇನ್ನು ವೈರಲ್ ಆಗಿರುವ ಇನ್ನೊಂದು ವಿಡಿಯೋದಲ್ಲಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಹಿಂದಿಯ ಹಳೆಯ ಸಾಂಗ್​ಗೆ ಜೋಡಿಯಾಗಿದ್ದಾರೆ. ಮುಖೇಶ್ ಅಂಬಾನಿಯವರು ಕಾರು ಡ್ರೈವ್ ಮಾಡುತ್ತಿದ್ದು ಪಕ್ಕದಲ್ಲಿ ಪತ್ನಿ ನೀತಾ ಅಂಬಾನಿ ಕುಳಿತ್ತಿದ್ದಾರೆ. ತಮ್ಮ ನಾಲ್ವರು ಮೊಮ್ಮಕ್ಕಳನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಾ, ಹಾಡು ಹಾಡುತ್ತಾ ಮೊಮ್ಮಕ್ಕಳನ್ನು ಮುದ್ದು ಮಾಡುತ್ತಾ ಖುಷಿ, ಖುಷಿಯಲ್ಲಿ ಹೋಗುತ್ತಿರುವ ವಿಡಿಯೋ ನೋಡಿಗರನ್ನು ಬೆರಗುಗೊಳಿಸಿದೆ.

ಇದನ್ನೂ ಓದಿ: ಡಿವೈಡರ್​ಗೆ ಬೈಕ್​ ಡಿಕ್ಕಿ; ರಾಜಕಾಲುವೆಗೆ ಬಿದ್ನಾ ಡೆಲಿವರಿ ಬಾಯ್? ನಿಗೂಢ!

ಸಂಗೀತ ಸಮಾರಂಭಕ್ಕೆ ಯಾರು, ಯಾರು ಬಂದಿದ್ದರು?

ಮುಂಬೈನ ಜಿಯೋ ವರ್ಲ್ಡ್​​ ಸೆಂಟರ್​ನಲ್ಲಿ ನಡೆದ ಈ ಸಂಗೀತ ಸಮಾರಂಭಕ್ಕೆ ಕೆನಾಡದ ಜಸ್ಟಿನ್ ಬೈಬರ್ ನಡೆಸಿಕೊಟ್ಟರು. ಬಾಲಿವುಡ್​ ಸ್ಟಾರ್ಸ್​ ಹಾಗೂ ಕ್ರಿಕೆಟ್​ ಸ್ಟಾರ್ಸ್ ಇದರಲ್ಲಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ದೀಪಿಕಾ ಪಡುಕೋಣೆ, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಎಂ.ಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮುಂತಾದ ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಕೊನೆಗೆ ಎಲ್ಲರು ಫೋಟೋಗೆ ಪೋಸ್ ಕೊಟ್ಟು ಆನಂದಿಸಿದರು.

ಇದನ್ನೂ ಓದಿ: KRS, ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಈ ಜಲಾಶಯದಿಂದ ಶೀಘ್ರದಲ್ಲೇ ಶುಭಸುದ್ದಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಾನಿ ಫ್ಯಾಮಿಲಿ ಭರ್ಜರಿ ಡ್ಯಾನ್ಸ್‌.. ಮೊಮ್ಮಕ್ಕಳ ಜೊತೆ ಅಜ್ಜ-ಅಜ್ಜಿ ಜಾಲಿ ರೈಡ್; ಸ್ಪೆಷಲ್‌ ವಿಡಿಯೋ ಇಲ್ಲಿದೆ!

https://newsfirstlive.com/wp-content/uploads/2024/07/AMBANI_FAMILY_1.jpg

Load More