Advertisment

IPL ತಂಡ ಪ್ರಕಟಿಸಿದ ರಾಯಡು.. ಆರ್​ಸಿಬಿಯ ಒಬ್ಬನೇ ಒಬ್ಬ ಆಟಗಾರನಿಗೆ ಸ್ಥಾನ

author-image
Ganesh
Updated On
IPL ತಂಡ ಪ್ರಕಟಿಸಿದ ರಾಯಡು.. ಆರ್​ಸಿಬಿಯ ಒಬ್ಬನೇ ಒಬ್ಬ ಆಟಗಾರನಿಗೆ ಸ್ಥಾನ
Advertisment
  • ಅಂಬಟಿ ರಾಯಡು ತಂಡದಲ್ಲಿರುವ RCB ಆಟಗಾರ ಯಾರು?
  • ಆರ್​ಸಿಬಿ ಗೆಲುವಿನ ಸಂಭ್ರಮವನ್ನು ಟೀಕಿಸಿದ್ದ ರಾಯಡು
  • ಮೇ 26 ರಂದು ಐಪಿಎಲ್ ಟೂರ್ನಿಗೆ ತೆರೆ ಬಿದ್ದಿದೆ

ಮೇ 26 ರಂದು 2024ರ ಐಪಿಎಲ್ ಟೂರ್ನಿಗೆ ತೆರೆ ಬಿದ್ದಿದೆ. ಸನ್​ರೈಸರ್ಸ್ ವಿರುದ್ಧ ಕೋಲ್ಕತ್ತ ನೈಟ್​ ರೈಡರ್ಸ್​ ಗೆಲುವು ದಾಖಲಿಸಿ ಮೂರನೇ ಬಾರಿಗೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

Advertisment

ಐಪಿಎಲ್ ಮುಗಿಯುತ್ತಿದ್ದಂತೆಯೇ ಕೆಲವು ಕ್ರಿಕೆಟ್ ವಿಶ್ಲೇಷಕರು, ತಜ್ಞರು, ಹಾಲಿ ಕ್ರಿಕೆಟಿಗರು ತಮ್ಮ ತಂಡವನ್ನು ಪ್ರಕಟಿಸಿದ್ದಾರೆ. ಅದರಂತೆ ಟೀಂ ಇಂಡಿಯಾದ ಮಾಜಿ ಆಟಗಾರ ಅಂಬಟಿ ರಾಯಡು ಕೂಡ ತಂಡವನ್ನು ಪ್ರಕಟಿಸಿದ್ದಾರೆ. ಐಪಿಎಲ್​ ಟೂರ್ನಿ ಪ್ಲೇ-ಆಫ್ ಹಂತ ಬರುತ್ತಿದ್ದಂತೆಯೇ ಭಾರೀ ಸುದ್ದಿಯಾದ ರಾಯಡು, ಪ್ರಕಟಿಸಿರುವ ಟೀಂ ಕೂಡ ಸದ್ದು ಮಾಡಿದೆ.

ಇದನ್ನೂ ಓದಿ: Deal done! ಗೌತಮ್ ಬೆನ್ನುಬಿದ್ದ ಬಿಸಿಸಿಐ.. ಇಷ್ಟಕ್ಕೆಲ್ಲ ಕಾರಣ ಆ ಐದು ವಿಚಾರಗಳು..!

ಅದಕ್ಕೆ ಕಾರಣ ಅವರು ತಮ್ಮ ತಂಡದಲ್ಲಿ ವಿರಾಟ್ ಕೊಹ್ಲಿಯನ್ನು ಸೇರಿಸಿಕೊಂಡಿರೋದು. ರಾಯಡು ಯಾರೆಲ್ಲ ಆಯ್ಕೆ ಮಾಡಿದ್ದಾರೆ ಎಂದು ನೋಡೋದಾದ್ರೆ ಸುನಿಲ್ ನರೈನ್ ಮತ್ತು ವಿರಾಟ್ ಕೊಹ್ಲಿಯನ್ನು ಆರಂಭಿಕ ಬ್ಯಾಟಿಂಗ್ ಜೋಡಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ನಂತರ ಕ್ರಮವಾಗಿ ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಿಷಬ್ ಪಂತ್, ಹೆನ್ರಿಚ್ ಕ್ಲಾಸೆನ್, ರಸೆಲ್, ಕುಲ್ದೀಪ್ ಯಾದವ್, ಬೂಮ್ರಾ, ಪತಿರಾಣ, ಹರ್ಷಲ್ ಪಟೇಲ್ ಅವರನ್ನು ಪ್ಲೇಯಿಂಗ್ 11ನಲ್ಲಿ ಇಟ್ಟಿದ್ದಾರೆ. ಇಂಪ್ಯಾಕ್ಟ್ ಪ್ಲೇಯರ್​ ಲಿಸ್ಟ್​ನಲ್ಲಿ ಎಂಎಸ್ ಧೋನಿ, ಚಹಾಲ್, ಶಿವಂ ದುಬೆ, ಅಭಿಷೇಕ್ ಶರ್ಮಾರನ್ನು ಆಯ್ಕೆ ಮಾಡಿದ್ದಾರೆ.

Advertisment

ಇದನ್ನೂ ಓದಿ: Pushpa 2: The Rule ಸಿನಿಮಾಗೆ ದೊಡ್ಡ ಸಂಕಷ್ಟ.. ರಿಲೀಸ್​ಗೂ ಮುನ್ನವೇ ಅನುಮಾನ ಶುರು..!

ವಿಶೇಷ ಅಂದರೆ ಎಲ್​ಎಸ್​ಜಿ, ಗುಜರಾತ್ ಟೈಟನ್ಸ್ ತಂಡದಿಂದ ಯಾವುದೇ ಆಟಗಾರರನ್ನು ಆಯ್ಕೆ ಮಾಡಿಲ್ಲ. ವಿರಾಟ್ ಕೊಹ್ಲಿಯನ್ನು ರಾಯಡು ಆಯ್ಕೆ ಮಾಡಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದಕ್ಕೆ ಕಾರಣ ಇಷ್ಟೇ, ಪ್ಲೇ-ಪ್ರವೇಶಿಸಿದ ಸಂದರ್ಭದಲ್ಲಿ ಆರ್​ಸಿಬಿ ಆಟಗಾರರು ಸಂಭ್ರಮಿಸಿದ್ದನ್ನು ರಾಯಡು ಟೀಕಿಸಿದ್ದರು. ಆರೆಂಜ್ ಕ್ಯಾಪ್​ನಿಂದ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಅನ್ನೋ ಮೂಲಕ ವಿರಾಟ್ ಕೊಹ್ಲಿಗೆ ಟಾಂಗ್ ನೀಡಿದ್ದರು.

ಇದನ್ನೂ ಓದಿ: ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment