Advertisment

ಅಪ್ಪ ತೀರಿ ಹೋದರು, ಅಮ್ಮ ಬಿಟ್ಟು ಹೋದಳು.. ಕೊನೆಗೂ 10 ವರ್ಷದ ಬಾಲಕನ ಬದುಕಿಗೆ ಬಂತು ಹೊಸ ಬೆಳಕು..!

author-image
Ganesh
Updated On
ಅಪ್ಪ ತೀರಿ ಹೋದರು, ಅಮ್ಮ ಬಿಟ್ಟು ಹೋದಳು.. ಕೊನೆಗೂ 10 ವರ್ಷದ ಬಾಲಕನ ಬದುಕಿಗೆ ಬಂತು ಹೊಸ ಬೆಳಕು..!
Advertisment
  • ನೋಡಿಕೊಳ್ಳಬೇಕಿದ್ದ ಅಮ್ಮನೂ ಕೂಡ ಬಿಟ್ಟು ಹೋದಳು!
  • 14 ವರ್ಷದ ಸಹೋದರಿ ಜೊತೆ ತಮ್ಮನ ಜೀವನ
  • ನಿತ್ಯವೂ ಶಾಲೆಗೆ ಹಾಜರ್, ಸಂಜೆ ರೋಲ್​ಗಳ ಮಾರಾಟ..!

10 ವರ್ಷದ ಬಾಲಕನ ಶ್ರಮಕ್ಕೆ ಉದ್ಯಮಿ ಆನಂದ್ ಮಹೀಂದ್ರಾ ಫಿದಾ ಆಗಿದ್ದು, ಆತನ ಮುಂದಿನ ಓದಿಗೆ ಸಹಾಯ ಮಾಡೋದಾಗಿ ಭರವಸೆ ನೀಡಿದ್ದಾರೆ. ದೆಹಲಿಯ ತಿಲಕ್ ನಗರದ ಬೀದಿಯಲ್ಲಿ ​​ರೋಲ್​​ಗಳ ಮಾರುತ್ತಿರುವ ಬಾಲಕ ಜಸ್​ಪ್ರೀತ್​​, ಆನಂದ್ ಮಹೀಂದ್ರಾ ಅವರ ಹೃದಯಕ್ಕೆ ಟಚ್ ಮಾಡಿದ್ದಾರೆ.

Advertisment

ತಮ್ಮ (ಜಸ್​ಪ್ರೀತ್) ತಂದೆ ಮೆದುಳು ಜ್ವರಕ್ಕೆ ಸಾವನ್ನಪ್ಪಿದ ಬಳಿಕ, ಅಪ್ಪ ನಡೆಸುತ್ತಿದ್ದ ಅಂಗಡಿಗೆ ಹೋಗಿ ಗ್ರಾಹಕರಿಗೆ ಬೇಕಾದ ಪದಾರ್ಥಗಳನ್ನು ಮಾಡಿಕೊಡುತ್ತಿದ್ದಾನೆ. ಈತನ ಸ್ಫೂರ್ತಿಯ ಕತೆ ಆನಂದ್ ಮಹೀಂದ್ರಾ ಭಾವುಕರಾಗಿದ್ದು, ಸಹಾಯ ಮಾಡೋದಾಗಿ ಹೇಳಿದ್ದಾರೆ. ಅಂದ್ಹಾಗೆ ಜಸ್​ಪ್ರೀತ್ ಅವರು ಬೆಳಗ್ಗೆ ಸ್ಕೂಲ್​ಗೆ ತಪ್ಪದೇ ಹೋಗುತ್ತಾರೆ. ಸಂಜೆ ವೇಳೆ ಟಿಫನ್ ಸ್ಟಾಲ್​ ನಡೆಸುತ್ತಿದ್ದಾನೆ. ಅಮ್ಮನು ಕೂಡ ಮಕ್ಕಳನ್ನು ಅನಾಥರನ್ನಾಗಿ ಮಾಡಿ ಪಂಜಾಬ್​ಗೆ ಹೋಗಿದ್ದು, ಜಸ್​ಪ್ರೀತ್, 14 ವರ್ಷದ ಅಕ್ಕನ ಜೊತೆ ವಾಸವಿದ್ದಾನೆ.

ಇದನ್ನೂ ಓದಿ:ರಾಜಸ್ಥಾನ ಸೋಲಿನಿಂದ ಆರ್​ಸಿಬಿಗೆ ದೊಡ್ಡ ಆಘಾತ.. ಕೊಹ್ಲಿ, ಫಾಫ್ ನಿದ್ರೆಗೆ ಭಂಗ..!

ಬಾಲಕ ರೋಲ್​ಗಳನ್ನು ಮಾಡಿ ಕೊಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಬಾಲಕನಿಗೆ ಗ್ರಾಹಕರೊಬ್ಬರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವೇಳೆ ಬಾಲಕ ತಾನು ದಿನನಿತ್ಯ ಮಾಡುತ್ತಿದ್ದ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದ್ದಾನೆ. ಈ ವಿಡಿಯೋ ಆನಂದ್ ಮಹೀಂದ್ರಾ ಅವರ ಕಣ್ಣಿಗೆ ಬಿದ್ದಿದೆ. ಇದೀಗ ಬಾಲಕನಿಗೆ ಓದಲು ಆರ್ಥಿಕ ಸಹಾಯ ಮಾಡೋದಾಗಿ ಹೇಳಿದ್ದಾರೆ. ಆತನ ಓದಿಗೆ ಯಾವತ್ತೂ ತೊಂದರೆ ಆಗಬಾರದು. ಆತನಿಗೆ ಬೇಕಾದ ಸಹಾಯವನ್ನು ನಾನು ಮಾಡುತ್ತೇನೆ. ದೆಹಲಿಯ ತಿಲಕ್ ನಗರದಲ್ಲಿರೋದು ಎಂದು ತಿಳಿದುಬಂದಿದೆ. ಯಾರಾದರೂ ಆತನ ನಂಬರ್ ಹೊಂದಿದ್ದರೆ ನಮಗೆ ನೀಡಿ ಎಂದು ಆನಂದ್ ಮಹೀಂದ್ರಾ ಮನವಿ ಮಾಡಿಕೊಂಡಿದ್ದಾರೆ.

Advertisment

ಇದನ್ನೂ ಓದಿ:ಸುನಿಲ್ ಗವಾಸ್ಕರ್​​ ಟೀಕೆಗೆ ಕೊಹ್ಲಿ ಕೌಂಟರ್​.. ವಿರಾಟ್​​ಗೆ ಮತ್ತೆ ಮಾತಲ್ಲೇ ತಿವಿದ ಮಾಜಿ ಆಟಗಾರ..!

ವಿಡಿಯೋದಲ್ಲಿ ಬಾಲಕ ಹೇಳ್ತಿರೋದೇನು?
ನಾನು ಚಿಕನ್ ಎಗ್​ರೋಲ್ ಮಾಡುತ್ತಿದ್ದೇನೆ. ನನ್ನ ವಯಸ್ಸು 10. ಎಗ್​ರೋಲ್ ಮಾಡೋದನ್ನು ನಾನು ಅಪ್ಪನಿಂದ ಕಲಿತೆ. ಅಪ್ಪ ತೀರಿಕೊಂಡಿದ್ದಾರೆ. ಅವರಿಗೆ ಮೆದುಳು ಜ್ವರ ಆಗಿತ್ತು. ನಂತರ ಮನೆಯಲ್ಲಿ ಯಾರೂ ಇಲ್ಲ. ನಾನು ಮತ್ತು ಅಕ್ಕ ಇಬ್ಬರು ಇದ್ದೇವೆ. ಅವಳಿಗೆ 14 ವರ್ಷ. ಅಮ್ಮ ಇದ್ದಾಳೆ, ಆದರೆ ಅವಳು ಇಲ್ಲಿ ಇಲ್ಲ, ನಮ್ಮನ್ನು ಬಿಟ್ಟು ಹೋಗಿದ್ದಾಳೆ. ಪಂಜಾಬ್​ನಲ್ಲಿ ನ್ಯಾನಿ ಜೊತೆ ಇದ್ದಾಳೆ. ನನಗೆ ಓದಲು ಅವಕಾಶ ಸಿಕ್ಕರೆ ಓದುತ್ತೇನೆ. ಚಿಕನ್ ರೋಲ್, ಕಬಾಬ್ ರೋಲ್, ಪನ್ನೀರ್ ರೋಲ್, ಚೌಮನ್ ರೋಲ್ ಮಾಡುತ್ತೇನೆ ಎಂದು ಹೇಳಿದ್ದಾನೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment