HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?

author-image
admin
Updated On
HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?
Advertisment
  • ‘ಹೇ ಕುಮಾರಸ್ವಾಮಿ.. ದರ್ಶನ್ ವಿರುದ್ದ ಧಿಕ್ಕಾರ ಕೂಗಿಸ್ತೀಯಾ’
  • ಸುಮಲತಾ‌ರಿಂದ ಭಿಕ್ಷೆ ಹಾಕಿಸಿಕೊ‌ಂಡವರು ನೀವು ಎಂದಿದ್ದ ಅಭಿಮಾನಿ
  • ಡಿಬಾಸ್‌ ಫ್ಯಾನ್‌ ನಿಂದನೆಗೆ ರೊಚ್ಚಿಗೆದ್ದ JDS ನಾಯಕರ ಡಿಮ್ಯಾಂಡ್ ಏನು?

ಮಂಡ್ಯ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ದರ್ಶನ್ ಬಂಧನದ ಪ್ರಕರಣ ಸಾಕಷ್ಟು ತಿರುವುಗಳನ್ನ ಪಡೆದುಕೊಂಡಿದ್ದು, ರಾಜ್ಯ ರಾಜಕೀಯದಲ್ಲೂ ಸಂಚಲನ ಸೃಷ್ಟಿಸಿದೆ. ಜೆಡಿಎಸ್ ನಾಯಕರು ಇದೀಗ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ಕಾನೂನು ಸಮರ ಸಾರಿದ್ದಾರೆ.

ಹೌದು.. ಮಂಡ್ಯ ಜೆಡಿಎಸ್ ನಾಯಕರು ನಟ ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ. ಮಂಗಳ ಎಂಬ ಮಹಿಳೆ ವಿರುದ್ಧ ಜೆಡಿಎಸ್ ನಾಯಕರು ಕೆ.ಆರ್ ಪೇಟೆ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದರು. ಇದಾದ ಬಳಿಕ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲೂ ಮತ್ತೊಂದು ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ದರ್ಶನ್​​ ವಿರುದ್ಧ ನಾಲ್ಕು.. ​ಕಪ್ಪೆ, ರಘು, ಮೂರ್ತಿ ವಿರುದ್ಧವೂ ಕೇಸ್.. ಬೆಚ್ಚಿ ಬೀಳುವಂತಿವೆ ಕ್ರಿಮಿನಲ್ ಬ್ಯಾ​ಗ್ರೌಂಡ್..!  

ವಕೀಲ ಹಾಗೂ ಜೆಡಿಎಸ್ ವಕ್ತಾರ ರಘುನಂದನ್ ಅವರು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ವಿರುದ್ದ ಮಂಗಳ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಇದರಿಂದ ಹೆಚ್ಡಿಕೆ ಅಭಿಮಾನಿಗಳಿಗೆ, ಜೆಡಿಎಸ್ ಕಾರ್ಯಕರ್ತರಿಗೆ ಅಪಮಾನವಾಗಿದೆ. ಆದ್ದರಿಂದ ಮಂಗಳಗೆ ಸೇರಿದ ಎಲ್ಲಾ ಸೋಷಿಯಲ್ ಮೀಡಿಯಾ ಖಾತೆ ಮೇಲೆ ಕ್ರಮವಹಿಸಿ. ಆಕೆಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿ‌ನಲ್ಲಿ ಉಲ್ಲೇಖ ಮಾಡಿದ್ದಾರೆ.

publive-image

ಮಂಗಳ ಹೇಳಿದ್ದೇನು?
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಮಂಗಳಾ ಅವರು ನಮ್ಮ ಡಿಬಾಸ್‌, ದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಹೆಚ್‌.ಡಿ ಕುಮಾರಸ್ವಾಮಿ ಅವರೇ ಮಾಡಿದ್ದಾರೆ. ದುಡ್ಡು ಕೊಟ್ಟು ಮಂಡ್ಯದಲ್ಲಿ ದರ್ಶನ್ ವಿರುದ್ದ ಧಿಕ್ಕಾರ ಕೂಗಿಸ್ತೀಯ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲ ಸುಮಲತಾ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸೋಕೆ ಚಾನ್ಸ್ ಕೊಟ್ಟಿರೋದಕ್ಕೆ ಡಿ ಬಾಸ್ ವಿರುದ್ದ ಸ್ಕೆಚ್ ಆಗ್ತೀಯಾ. ಸುಮಲತಾ‌ರಿಂದ ಭಿಕ್ಷೆ ಹಾಕಿಸಿಕೊ‌ಂಡವರು ನೀವು ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು.

ಇದನ್ನೂ ಓದಿ: ದರ್ಶನ್​ ಮೇಲೆ ಹಳೇ ಕ್ರಿಮಿನಲ್ ಕೇಸ್​ಗಳೆಷ್ಟಿವೆ ಗೊತ್ತಾ? ವಿಜಯ ನಗರ, RR ನಗರ ಸೇರಿ ಎಲ್ಲೆಲ್ಲಿವೆ? 

ಮಂಗಳಾ ಅವರು ಮಾಡಿದ್ದಾರೆ ಎನ್ನಲಾಗಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಸಿಡಿದೆದ್ದ ಜೆಡಿಎಸ್ ಕಾರ್ಯಕರ್ತರು ದರ್ಶನ್ ಮಹಿಳಾ ಅಭಿಮಾನಿ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment