Advertisment

ನಟ ದರ್ಶನ್ ಮೇಲೆ ಮತ್ತೊಂದು FIR; ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

author-image
admin
Updated On
ನಟ ದರ್ಶನ್ ಮೇಲೆ ಮತ್ತೊಂದು FIR; ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿಯಿಂದ ಸ್ಫೋಟಕ ಮಾಹಿತಿ ಬಹಿರಂಗ
Advertisment
  • ದರ್ಶನ್ ಫೋಟೋಗೆ ಸಂಬಂಧಪಟ್ಟಂತೆ 3 ಎಫ್‌ಐಆರ್ ದಾಖಲು
  • ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಂದ ಅಸಲಿ ವಿಷ್ಯ ಬಹಿರಂಗ
  • ಸಿಗರೇಟ್ ಕೊಟ್ಟಿದ್ದಕ್ಕೆ, ಜೈಲಿನಲ್ಲಿ ವಿಡಿಯೋ ಮಾಡಿದ್ದಕ್ಕೆ FIR ದಾಖಲು

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರ ಮೇಲೆ ಮತ್ತೊಂದು FIR ದಾಖಲಾಗಿದೆ. ಜೈಲಿನಲ್ಲಿ ಟೀ ಪಾರ್ಟಿ ಮಾಡಿದ ದರ್ಶನ್ ಗ್ಯಾಂಗ್ ಫೋಟೋ ಬಿಡುಗಡೆಯಾಗಿದ್ದು, ಕೈದಿಗಳಿಗೆ ಸಿಕ್ಕ ರಾಜಾತಿಥ್ಯ ತೀವ್ರ ಸಂಚಲನ ಸೃಷ್ಟಿಸಿದೆ.

Advertisment

ಜೈಲಿನಲ್ಲಿರುವ ದರ್ಶನ್ ಫೋಟೋ ರಿಲೀಸ್ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಅಧಿಕಾರಿಗಳನ್ನು ಅಮಾನತು ಮಾಡುವ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಗೃಹಸಚಿವ ಡಾ.ಜಿ ಪರಮೇಶ್ವರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ‘ಯಾರೋ ಹೇಳಿದ್ದು ಬಾಸ್ ಸಣ್ಣ ಆಗಿದ್ದಾರೆ ಅಂತ’- ದರ್ಶನ್ ಫೋಟೋಗೆ ಅಭಿಮಾನಿಗಳು ಏನಂದ್ರು? 

ಬಂಧಿಖಾನೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ದರ್ಶನ್ ಫೋಟೋಗೆ ಸಂಬಂಧಪಟ್ಟಂತೆ 3 ಎಫ್‌ಐಆರ್ ದಾಖಲಾಗಿದೆ. FIRನಲ್ಲಿ ದರ್ಶನ್ ಹೆಸರು ಕೂಡ ಇದೆ. ಈ ಘಟನೆ ಆಗಸ್ಟ್‌ 22ರ ಸಾಯಂಕಾಲ ಆಗಿದೆ ಎಂಬ ಮಾಹಿತಿಯನ್ನು ಎಡಿಜಿಪಿ ನೀಡಿದ್ದಾರೆ.

Advertisment

publive-image

ಜೈಲು ಸೂಪರಿಂಟೆಂಡೆಂಟ್ ಕೊಟ್ಟ ದೂರಿನ ಮೇಲೆ ಸದ್ಯ ಮೂರು FIRಗಳು ದಾಖಲಾಗಿದೆ. ಸಿಗರೇಟ್ ಕೊಟ್ಟಿದ್ದಕ್ಕೆ ಒಂದು FIR, ಜೈಲಿನಲ್ಲಿ ವಿಡಿಯೋ ಮಾಡ್ಕೊಂಡು ವೈರಲ್ ಮಾಡಿದ್ದಕ್ಕೆ ಮತ್ತೊಂದು ಹಾಗೂ ಸಿಸಿಬಿ ಪೊಲೀಸರ ದಾಳಿ ವೇಳೆ ಕೆಲವು ಬಾಕ್ಸ್‌ಗಳನ್ನು ತಗೊಂಡು ಹೋಗಿದ್ದಕ್ಕೆ ಒಟ್ಟು ಮೂರು ಪ್ರತ್ಯೇಕ ಕೇಸ್‌ಗಳನ್ನು ಪರಪ್ಪನ ಅಗ್ರಹಾರದಲ್ಲಿ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಕೆರಳಿದ ವಿಲ್ಸನ್ ಗಾರ್ಡನ್ ನಾಗ! ದರ್ಶನ್​ ಫೋಟೋ ಕಳುಹಿಸಿದ ರೌಡಿ ವೇಲುಗೆ ಸರಿಯಾಗಿ ಥಳಿತ? 

ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಹಾಗೂ ನಾಗರಾಜ್ ಮೇಲೆ ಕೇಸ್ ದಾಖಲಾಗಿದೆ. ಜೈಲು ಸೂಪರಿಡೆಂಟೆಂಟ್‌ ದೂರಿನ ಮೇಲೆ ಈ ಎಫ್ಐಆರ್‌ಗಳು ದಾಖಲಾಗಿವೆ. ಜೈಲಿನಲ್ಲಿ ಕುಳಿತಿರುವುದರ ಜೊತೆಗೆ ಕುರ್ಚಿಗಳನ್ನ ಯಾರು ಕೊಟ್ರು ಇದರ ಬಗ್ಗೆ ಪ್ರಕರಣ ದಾಖಲಾಗಿದೆ. ಕೈದಿಗಳನ್ನ ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ಚರ್ಚೆ ನಡೀತಾ ಇದೆ. ಅಧಿಕಾರಿಗಳ ವೈಫಲ್ಯದಿಂದ ಹೀಗೆ ಆಗಿದೆ ಎಂದು ಮಾಲಿನಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment