/newsfirstlive-kannada/media/post_attachments/wp-content/uploads/2024/09/ANUPAM-KHER.jpg)
ಗುಜರಾತ್ನ ಅಹ್ಮದಾಬಾದ್ ಪೊಲೀಸರು 1.6 ಕೋಟಿ ರೂಪಾಯಿಯ ಫೇಕ್ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಅಚ್ಚರಿಯೆಂದರೆ ಐನೂರು ರೂಪಾಯಿಯ ನೋಟ್ಗಳನ್ನು ಹೋಲುವ ಈ ನೋಟ್ಗಳಲ್ಲಿ ಮಹಾತ್ಮಾ ಗಾಂಧಿ ಫೋಟೋ ಬದಲಾಗಿ ಬಾಲಿವುಡ್ ನಟ ಅನುಪಮ್ ಖೇರ್ ಫೋಟೋ ಹಾಕಲಾಗಿದೆ.
ಇದನ್ನೂ ಓದಿ:ಕಟ್ಟಡ ಧ್ವಂಸಗೊಳಿಸುವಾಗ ವ್ಯಕ್ತಿಯ ನೆತ್ತಿ ಸೀಳಿತು ತೂರಿ ಬಂದ ಕಲ್ಲು; ವಿಡಿಯೋ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲು ರಿಸೋಲ್ ಬ್ಯಾಂಕ್ ಆಫ್ ಇಂಡಿಯಾದ ಎಂದು ಮುದ್ರಿಸಲಾಗಿದೆ. ಈ ಖೋಟಾ ನೋಟುಗಳ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅದನ್ನು ಖುದ್ದು ಅನುಪಮ್ ಖೇರ್ ಕೂಡ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅನುಪಮ್ ಖೇರ್. ನೋಡಿ ಸ್ವಾಮಿ ಮಾತಾಡಿ, ಐನೂರು ರೂಪಾಯಿ ನೋಟುಗಳಲ್ಲಿ ಮಹಾತ್ಮಾ ಗಾಂಧಿ ಫೋಟೋ ಬದಲು ನನ್ನ ಫೋಟೋ, ಏನ್ ಬೇಕಾದ್ರೂ ಆಗುತ್ತೆ ಇಲ್ಲಿ ಎಂದು ಬರೆದುಕೊಂಡಿದ್ದಾರೆ.
लो जी कर लो बात! ???
पाँच सौ के नोट पर गांधी जी की फ़ोटो की जगह मेरी फ़ोटो???? कुछ भी हो सकता है! ??? pic.twitter.com/zZtnzFz34I— Anupam Kher (@AnupamPKher)
लो जी कर लो बात! 😳😳😳
पाँच सौ के नोट पर गांधी जी की फ़ोटो की जगह मेरी फ़ोटो???? कुछ भी हो सकता है! 😳😳😳 pic.twitter.com/zZtnzFz34I— Anupam Kher (@AnupamPKher) September 29, 2024
">September 29, 2024
ಇದನ್ನೂ ಓದಿ:ಬಾಹ್ಯಾಕಾಶ ತಲುಪಿದ ‘ಡ್ರ್ಯಾಗನ್’.. ಆಪತ್ಭಾಂದವರನ್ನ ಸ್ವಾಗತಿಸಿ ಅಪ್ಪುಗೆ ನೀಡಿದ ಸುನೀತಾ ಮತ್ತು ವಿಲ್ಮೋರ್
ಈ ಖೋಟಾ ನೋಟುಗಳನ್ನು ಚಿನ್ನದ ಅಂಗಡಿ ಮಾಲೀಕ ಮೆಹೂಲ್ ಠಾಕೂರ್ರಿಂದ ಈ ಒಂದು ನೋಟುಗಳನ್ನು ರಿಕವರಿ ಮಾಡಲಾಗಿದ್ದು. ಅನಾಮಿಕನ ಮೇಲೆ ಪ್ರಕರಣ ದಾಖಲಾಗಿದೆ. ಸದ್ಯ ಅನುಪಮ್ ಖೇರ್ ಎಮೆರ್ಜೆನ್ಸಿ ಸಿನಿಮಾದ ರಿಲೀಸ್ ಗಡಿಬಿಡಿಯಲ್ಲಿದ್ದು, ಈಗ ಅವರ ಭಾವಚಿತ್ರ ಇರುವ ನೋಟುಗಳನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ