/newsfirstlive-kannada/media/post_attachments/wp-content/uploads/2024/08/ARUN-GHOSH-1-MILLION-KM.jpg)
ಒಟ್ಟಾವಾ: ಕಾರ್​ನಲ್ಲಿ ಊರು ಸುತ್ತುವುದು, ನೈಟ್ಔಟ್​ ಹೋಗುವುದು. ಹಾಡು, ಮೂಡು ಎರಡು ಸರಿಯಿದ್ದರೆ ಸರಾಗವಾಗಿ ಒಂದು ಸಾವಿರ ಕಿಲೋ ಮೀಟರ್ ಕ್ರಮಿಸಿಬಿಡಬಲ್ಲ ಕಾರ್ ಪ್ರಯಾಣ ಪ್ರಿಯರು ನಮ್ಮ ನಡುವೆ ಸಾಕಷ್ಟು ಇದ್ದಾರೆ. ಒಂದು ಲಾಂಗ್ ಡ್ರೈವ್ ಮನಸ್ಸನ್ನು ಎಷ್ಟೋ ಆಹ್ಲಾದಕರೊಗಳಿಸುತ್ತದೆ. ಮುದಗೊಳಿಸುತ್ತದೆ. ಹೀಗಾಗಿ ಕಾರ್ ಡ್ರೈವಿಂಗ್​ನ್ನು ಪ್ರೀತಿಸುವ ಲಕ್ಷ ಲಕ್ಷ ಜನರಿದ್ದಾರೆ. ಆದ್ರೆ ಅವರಾರು, ಕೆನಡಾದಲ್ಲಿರುವ ಈ ಭಾರತೀಯನನ್ನು ಸರಿಗಟ್ಟಲು ಸಾಧ್ಯವೇ ಇಲ್ಲ. ಈತ ತನ್ನ ಕಾರಿನಲ್ಲಿ ಪ್ರಯಾಣಿಸಿದ್ದು ಬರೋಬ್ಬರಿ 9,99,999 ( ಒಂಬತ್ತು ಲಕ್ಷ ತೊಂಬತ್ತೊಂಬತ್ತು ಸಾವಿರದ ಒಂಬೈನೂರಾ ತೊಂಬೊತ್ತೊಂಬತ್ತು) ಕಿಲೋ ಮೀಟರ್​.
/newsfirstlive-kannada/media/post_attachments/wp-content/uploads/2024/08/ARUN-GHOSH-1-MILLION-KM-1.jpg)
ಇದನ್ನೂ ಓದಿ:ಸರೋವರದಲ್ಲಿ ಪತನಗೊಂಡ ವಿಮಾನ.. ಪೈಲಟ್​ಗಳು ಕಣ್ಮರೆ.. ಮೀನುಗಾರರಿಗೆ ಸಿಕ್ಕಿ ಬದುಕುಳಿದ ಮಹಿಳೆ
ಅಚ್ಚರಿ ಆಯ್ತಲ್ವಾ.. ಅಚ್ಚರಿ ಆದ್ರೂ ಕೂಡ ಇದು ನಿಜವೇ, ಕೆನೆಡಾ ನಿವಾಸಿಯಾದ ಭಾರತೀಯ ಮೂಲದ ಅರುಣ್ ಘೋಷ್. ಕಾರ್ ಡ್ರೈವಿಂಗ್ ಅಂದ್ರೆ ಕೇವಲ ಒಂದು ಪ್ರಯಾಣವಲ್ಲ ಪ್ಯಾಷನ್, ಗೀಳು, ಹುಚ್ಚು. ಆತ ಬರೋಬ್ಬರಿ 10 ಲಕ್ಷ ಕಿಲೋಮೀಟರ್ ಪ್ರಯಾಣ ಮಾಡಿದ್ದಾನೆ. ಆದ್ರೆ ಕೆಲವು ತಾಂತ್ರಿಕ ಸೆಟ್ಟಿಂಗ್​ನಿಂದಾಗಿ ಆತನ ಹೊಂಡಾ ಕಾರ್​ನ ಓಡೋಮೀಟರ್ ಮಾತ್ರ ಕೇವಲ 9,99,999 ಕಿಮೀ ತೋರಿಸುತ್ತಿದೆ. ಅದರ ಮುಂದಿನ ಪ್ರಯಾಣದ ದೂರವನ್ನು ಅದು ತೋರಿಸುತ್ತಿಲ್ಲ. ಅದಕ್ಕಾಗಿಯೇ ಅರುಣ್ ಘೋಷ್ ಹೊಂಡಾ ಕಂಪನಿಗೆ ಒಂದು ಮನವಿಯನ್ನು ಕೂಡ ಮಾಡಿದ್ದಾನೆ. ದಯವಿಟ್ಟು ಮೀಟರ್​​ನ್ನು 7 ಡಿಜಿಟ್ ನಂಬರ್​ಗೆ ಏರಿಸಿ, ನನ್ನಂತಹ ಪ್ರವಾಸ ಅಥವಾ ಪ್ರಯಾಣ ಪ್ರಿಯರಿಗೆ ಇದು ತುಂಬಾ ಅನುಕೂಲ ಎಂದು ಹೇಳಿದ್ದಾನೆ.
/newsfirstlive-kannada/media/post_attachments/wp-content/uploads/2024/08/ARUN-GHOSH-1-MILLION-KM-2.jpg)
ಅರುಣ್ ಘೋಷ್ ಮೂಲತಃ ಕೇರಳದ 31 ವರ್ಷದ ಹುಡುಗ, 2017ರಲ್ಲಿ ಕೆನಡಾಗೆ ಹೋಗಿದ್ದ ನಯಾಗ್ರಾ ಕಾಲೇಜಿನಲ್ಲಿ ಸೇರಿಕೊಂಡಿದ್ದ ಈತ 2014ರ ಮಾಡೆಲ್​​ನ ಹೊಂಡಾ ಕಾರ್ ಖರೀದಿ ಮಾಡಿದ್ದ, ಅವನು ಖರೀದಿ ಮಾಡಿದಾಗ ಅದಾಗಲೇ ಕಾರ್​ 90 ಸಾವಿರ ಕಿಲೋಮೀಟರ್ ಓಡಿತ್ತು. ಅರುಣ್​ಗಿರುವ ಕಾರ್​ ಪ್ರಯಾಣದ ಗೀಳು ಈಗ ಅದನ್ನು 10 ಲಕ್ಷಕ್ಕೆ ತಲುಪಿಸುವ ಮಟ್ಟಕ್ಕೆ ಹೋಗಿದೆ. ಕಾರ್ ಐದು ಲಕ್ಷ ಕಿಲೋ ಮೀಟರ್ ಓಡಿದಾಗ, ಅವನ ಗೆಳೆಯರು ಅದನ್ನು 10 ಲಕ್ಷಕ್ಕೆ ತಲುಪಿಸುವಂತೆ ಸಲಹೆ ನೀಡಿದ್ದಾರೆ. ಮೊದಲೇ ಕಾರಿನ ಹುಚ್ಚಿರುವ ಹುಡುಗ, ಕಾರಿನ ಮೈಲೇಜ್​ನ್ನು ಗಮನದಲ್ಲಿಟ್ಟುಕೊಂಡು ಬರೋಬ್ಬರಿ 10 ಲಕ್ಷ ಕಿಲೋಮೀಟರ್ ಪ್ರಯಾಣ ಮಾಡಿದ್ದಾನೆ.
ಅವನ ಗುರಿ ತಲುಪಲು ಕೇವಲ ನೂರು ಕಿಲೋ ಮೀಟರ್ ಬಾಕಿ ಇತ್ತು. ಆವಾಗ ಅರುಣ್ ಘೋಷ್ ಯುಎಸ್​ ಬಾರ್ಡರ್​​ನ ಬಳಿ ಇರುವ ಪೀಸ್ ಬ್ರೀಡ್ಜ್​ ತಲಪುವ ಮೂಲಕ ತನ್ನ ಗುರಿಯನ್ನು ತಲುಪಿದ್ದಾನೆ. ಆದ್ರೆ ಒಂದೇ ಒಂದು ಸಮಸ್ಯೆಯಾಗಿದ್ದು ಅಂದ್ರೆ, ಕಾರ್​ನ ಪ್ರಯಾಣಿಸಿದ ದೂರ ತೋರಿಸುವ ಓಡೊಮೀಟರ್ 9,99,999ಕ್ಕೆ ನಿಂತು ಹೋಗಿದ್ದು ಅವನಿಗೆ ಬೇಸರ ತರಿಸಿದೆ. ಹೀಗಾಗಿ ಅವನು ಹೊಂಡಾ ಕಂಪನಿಗೆ ಫೋನ್ ಮಾಡಿ 7 ಡಿಜಿಟ್ ನಂಬರ್​ಗೆ ಓಡೊಮೀಟರ್​ನ್ನು ಸುಧಾರಿಸಿ ಎಂದು ಮನವಿ ಮಾಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us