newsfirstkannada.com

ತಾಯಿಯಿಂದಲೇ ಮಗುವಿಗೆ ಸಿಗರೇಟ್​​ ಸೇದಿಸುವ ಪ್ರಯತ್ನ.. ಪೊಲೀಸ್ರ ಕೈಲಿ ಲಾಕ್

Share :

Published June 18, 2024 at 6:13am

    ಕೇಸ್​ ದಾಖಲಿಸಿಕೊಂಡಿರುವ ಚೈಲ್ಡ್ ಹೆಲ್ಪ್‌ ಲೈನ್ ಇಲಾಖೆ

    ಮಗುವಿಗೆ ಧೂಮಪಾನ ಮಾಡಿಸಲು ಮುಂದಾದ ಮಹಿಳೆ

    ಮಹಿಳೆಯ ನಿವಾಸಕ್ಕೆ ತೆರಳಿದ ಪೊಲೀಸರು ಏನು ಮಾಡಿದ್ರು?

ದಿಸ್ಪುರ್: ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಹಾಗೂ ಮದ್ಯಪಾನ ಮಾಡಿಸಲು ಯತ್ನಿಸಿರುವ ಆರೋಪದ ಮೇಲೆ ತಾಯಿಯೊಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಸ್ಸಾನ ಸಿಲ್ಚಾರ್‌ನ ಚೆಂಗ್‌ಕುರಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಇದನ್ನೂ ಓದಿ: ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೂ ಚಿಕ್ಕಣ್ಣನಿಗೂ ಸಂಬಂಧವೇನು.. ಕೊಲೆ ಕೇಸ್​ಗೆ ಸಿಕ್ಕ ಹೊಸ ಟ್ವಿಸ್ಟ್?

ಸಿಲ್ಚಾರ್‌ನ ಚೆಂಗ್‌ಕುರಿ ಪ್ರದೇಶದ ಮಹಿಳೆ ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು, ಮದ್ಯಪಾನ ಮಾಡಿಸಲು ಒತ್ತಾಯ ಮಾಡಿದ್ದಾಳೆ. ಈ ಸಂಬಂಧ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಆಧಾರದ ಮೇಲೆ ಸ್ಥಳೀಯ ಚೈಲ್ಡ್ ಹೆಲ್ಪ್‌ಲೈನ್ ಕೇಸ್ ದಾಖಲಿಸಿಕೊಂಡಿದೆ. ಈ ದೂರಿನ ಮೇಲೆ ಪೊಲೀಸರು ಮಹಿಳೆಯ ನಿವಾಸಕ್ಕೆ ತೆರಳಿ ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ (CWC)ಗೆ ಒಪ್ಪಿಸಿದ್ದಾರೆ. ಇನ್ನು ಮಹಿಳೆಯನ್ನು ಅರೆಸ್ಟ್ ಮಾಡಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಸೂಪರ್​​ 8ನಲ್ಲಿ ವಿರಾಟರೂಪ ಹೇಗಿರುತ್ತೆ ಗೊತ್ತಾ?

ಮಹಿಳೆಯನ್ನು ಸಂಪೂರ್ಣ ತನಿಖೆಯ ನಂತರ ವೈರಲ್ ಆಗಿರುವ ದೃಶ್ಯದ ಪುರಾವೆಗಳನ್ನು ಪರಿಶೀಲಿಸಲಾಗುತ್ತದೆ. ಬಳಿಕ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್​ಗೆ ಹಲವಾರು ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು ಮಹಿಳೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿಯಿಂದಲೇ ಮಗುವಿಗೆ ಸಿಗರೇಟ್​​ ಸೇದಿಸುವ ಪ್ರಯತ್ನ.. ಪೊಲೀಸ್ರ ಕೈಲಿ ಲಾಕ್

https://newsfirstlive.com/wp-content/uploads/2024/06/SMOKING_GIRL_1.jpg

Load More