newsfirstkannada.com

ಕೇವಲ 132 ದಿನದಲ್ಲಿ ಅಟಲ್ ಸೇತುವೆಯಿಂದ ಕೋಟಿ, ಕೋಟಿ ಟೋಲ್ ಸಂಗ್ರಹ

Share :

Published May 4, 2024 at 6:20pm

Update May 4, 2024 at 8:00pm

    ಈ ಬ್ರಿಡ್ಜ್​ ಮೇಲೆ ಒಂದು ತಿಂಗಳ ಪಾಸ್ ಎಷ್ಟು ಸಾವಿರ ರೂಪಾಯಿ.?

    ಅಟಲ್ ಸೇತು ಸಂಗ್ರಹಿಸಿದ್ದ ಹಣ, RTI ಮೂಲಕ ಮಾಹಿತಿ ಬಹಿರಂಗ

    ಇಲ್ಲಿವರೆಗೆ ಎಷ್ಟು ಕೋಟಿ ರೂಪಾಯಿಗಳನ್ನ ಸಂಗ್ರಹ ಮಾಡಿದೆ ಗೊತ್ತಾ?

ಮುಂಬೈ: 2024ರ ಜನವರಿ 12 ರಂದು ಉದ್ಘಾಟನೆಗೊಂಡಿದ್ದ ಅಟಲ್​ ಸೇತುವಿನಿಂದ 22.57 ಕೋಟಿ ರೂಪಾಯಿಗಳ ಟೋಲ್ ಸಂಗ್ರಹ ಮಾಡಲಾಗಿದೆ ಎಂದು ಹೇಳಲಾಗಿದೆ. 11ಲಕ್ಷಕ್ಕೂ ಹೆಚ್ಚಿನ ವಾಹನಗಳಿಂದ ಇಷ್ಟೊಂದು ಟೋಲ್ ಸಂಗ್ರಹ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅಥವಾ ಅಟಲ್​ ಸೇತು ಎಂದೇ ಖ್ಯಾತಿ ಪಡೆದ ಈ ಬ್ರಿಡ್ಜ್​ ಇದೇ ವರ್ಷದ ಆರಂಭದಲ್ಲಿ ಅದ್ಧೂರಿಯಾಗಿ ಉದ್ಘಾಟನೆ ಮಾಡಲಾಗಿತ್ತು. ಇದು 2024ರ ಜನವರಿ 12 ರಿಂದ ಏಪ್ರಿಲ್ 23ರ ವರೆಗೆ ಅಂದರೆ ಕೇವಲ 132 ದಿನಗಳಲ್ಲಿ 11,07,606 ವಾಹನಗಳು ಇದರ ಮೇಲೆ ಓಡಾಡಿದ್ದು ಅವುಗಳಿಂದ 22.57 ಕೋಟಿ ರೂ.ಗಳನ್ನ ಟೋಲ್ ಸಂಗ್ರಹವನ್ನು ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ಮಾಡಿದೆ. ಅಮರಾವತಿ ನಿವಾಸಿ ಅಜಯ್ ಬಸು ಅವರು ಆರ್​ಟಿಐ ಮೂಲಕ MMRDAಯಿಂದ ಈ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಯಶ್​ ಟಾಕ್ಸಿಕ್​​ನಿಂದ ಬಾಲಿವುಡ್​ ಬ್ಯೂಟಿ ಔಟ್​.. ಕರೀನಾ ಹೊರ ಬರಲು ಕಾರಣ?

ಇದನ್ನೂ ಓದಿ: ಸಿಲಿಕಾನ್​ ಸಿಟಿಯಲ್ಲಿ ಟಾಕ್ಸಿಕ್ ಶೂಟಿಂಗ್.. ಯಶ್​ ಅಕ್ಕನ ಪಾತ್ರದಲ್ಲಿ ಬಹುಭಾಷಾ ಸುಂದರಿ ನಯನಾ ತಾರಾ?

ಅಟಲ್​ ಸೇತುವೆ ಮೂಲಕ 10.80 ಲಕ್ಷ ಕಾರು, ಜೀಪ್‌, ವ್ಯಾನ್‌ಗಳು ಹಾದು ಹೋಗಿದ್ದು ಕೇವಲ ಇವುಗಳಿಂದಲೇ ಒಟ್ಟು 20.15 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗಿದೆ. 5,663 LCVಗಳಿಂದ 20.62 ಲಕ್ಷ ರೂಪಾಯಿ. ಅದೇ ರೀತಿ, ಆರ್ಟಿರಿಯಲ್ ರಸ್ತೆ ಬಳಸಿದ 7,842 ಬಸ್‌ಗಳು ಮತ್ತು ಟ್ರಕ್‌ಗಳಿಂದ 59.70 ಲಕ್ಷ ರೂಪಾಯಿ ಟೋಲ್ ಸಂಗ್ರಹವಾಗಿದೆ. ಇನ್ನು ಬೇರೆ ಬೇರೆ ವಾಹನಗಳಿಂದ ಹಣ ಸಂಗ್ರಹ ಮಾಡಲಾಗಿದೆ. ಒಟ್ಟು ಸೇರಿ 22.57 ಕೋಟಿ ರೂಪಾಯಿ ಎಂದು ಹೇಳಲಾಗಿದೆ.

ಇದನ್ನೂ ಓದಿ: HD ರೇವಣ್ಣ ನಿವಾಸಕ್ಕೆ ಸಂತ್ರಸ್ತೆ ಜೊತೆ ಎಂಟ್ರಿ ಕೊಟ್ಟ SIT ತಂಡ.. ಏನೇನು ಮಾಡ್ತಾರೆ ಗೊತ್ತಾ?

ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾದ ಅಟಲ್​ ಸೇತುವೆ 21.8 ಕಿಮೀ ಇದೆ. ನವಿ ಮುಂಬೈಯ ವಿಮಾನ ನಿಲ್ದಾಣ, JNPT ಪೋರ್ಟ್, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಮುಂಬೈ-ಗೋವಾ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಹೋಗುವ ವಾಹನಗಳಿಗೆ 200 ರಿಂದ 250 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಕಾರುಗಳಿಗೆ ಹೋಗಿ ಬರಲು 300 ರೂಪಾಯಿ. ದೈನಂದಿನ ಪಾಸ್ ಬೇಕೆಂದರೆ 500 ರೂಪಾಯಿ ಇದೆ. ಅದೇ ರೀತಿ ತಿಂಗಳ ಪಾಸ್ 10,000 ರೂಪಾಯಿಗಳು ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 132 ದಿನದಲ್ಲಿ ಅಟಲ್ ಸೇತುವೆಯಿಂದ ಕೋಟಿ, ಕೋಟಿ ಟೋಲ್ ಸಂಗ್ರಹ

https://newsfirstlive.com/wp-content/uploads/2024/05/ATAL_SETU.jpg

Load More