/newsfirstlive-kannada/media/post_attachments/wp-content/uploads/2024/06/OT.jpg)
ಸಾಂದರ್ಭಿಕ ಚಿತ್ರ
ದಾವಣಗೆರೆ: ವೈದ್ಯರ ಯಡವಟ್ಟಿನಿಂದ ಮಗುವಿನ ಮರ್ಮಾಂಗವೇ ಕತ್ತರಿಸಿದ ಹೋದ ಆರೋಪವೊಂದು ದಾವಣಗೆರೆಯಲ್ಲಿ ನಡೆದಿದೆ. ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರೊಬ್ಬರಿಂದ ಹೆರಿಗೆ ಮಾಡಿಸುವ ವೇಳೆ ಈ ದುರ್ಘಟನೆ ನಡೆದಿದೆ.
ದಾವಣಗೆರೆ ಕೊಂಡಜ್ಜಿ ರಸ್ತೆಯಲ್ಲಿರೋ ಮಹಿಳೆಯೊಬ್ಬರು ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಹೆರಿಗೆ ವೇಳೆ ಮಹಿಳೆಗೆ ಸಿಸರಿನ್ ಮಾಡಿಸಲು ಮುಂದಾದರು. ಆದರೆ ಈ ವೇಳೆ ಅವಘಡ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದು: ಎಮ್ಮೆ ನಿನಗೆ ಸಾಟಿಯಿಲ್ಲ.. ತಲೆ ಕೆಡಿಸಿದ್ದ ಪ್ರಕರಣದ ನಿರ್ಧಾರವನ್ನು ಕೊನೆಗೆ ಎಮ್ಮೆಗೆ ಬಿಟ್ಟ ಪೊಲೀಸರು!
ಜೂನ್ 27 ರಂದು ಈ ಘಟನೆ ನಡೆದಿದೆ. ವೈದ್ಯ ನಿಜಾಮುದ್ದೀನ್ ಎಂಬವರು ಮಹಿಳೆಗೆ ಸಿಸರಿನ್ ಮಾಡಿಸುವ ವೇಳೆ ಮಗುವಿನ ಮರ್ಮಾಂಗ ಕತ್ತರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬಳಿಕ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ಕೊನೆಗೆ ಮಗುವನ್ನ ಬಾಪುಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಆದರೆ ಬೇಸರದ ಸಂಗತಿ ಎಂದರೆ ಸತತ ಚಿಕಿತ್ಸೆ ನಂತರ ಮಗು ಸಾವನ್ನಪ್ಪಿದೆ.
ಇದನ್ನೂ ಓದು: ಕಬಿನಿ ಭರ್ತಿಯಾಗಲು 3 ಅಡಿ ಬಾಕಿ! ಆಲಮಟ್ಟಿಗೆ ಬಂತು ನೀರೇ ನೀರೂ; ಜಲಾಶಯಗಳ ನೀರಿನ ಮಟ್ಟ ಹೀಗಿದೆ
ಸದ್ಯ ಮಗುವಿನ ಸಾವಿಗೆ ವೈದ್ಯರು ಕಾರಣ ಅಂತ ಪೋಷಕರ ಆರೋಪಿಸಿದ್ದಾರೆ. ಜೊತೆಗೆ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಸ್ಪತ್ರೆ ಮುಂದೆ ಪೋಷಕರ ಪ್ರತಿಭಟನೆ ಮಾಡಿದ್ದಾರೆ. ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನ ಅಮಾನತು ಮಾಡುವಂತೆ ಪೋಷಕರು ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ