ಮುಸ್ಲಿಂ ಯುವತಿಯನ್ನ ಪ್ರೀತಿಸಿ ಮದ್ವೆ, ಹೈಡ್ರಾಮಾ.. ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಲಾಠಿ ಚಾರ್ಜ್..!

author-image
Ganesh
Updated On
ಮುಸ್ಲಿಂ ಯುವತಿಯನ್ನ ಪ್ರೀತಿಸಿ ಮದ್ವೆ, ಹೈಡ್ರಾಮಾ.. ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಲಾಠಿ ಚಾರ್ಜ್..!
Advertisment
  • ಸಿಪಿಐ ವಿರುದ್ಧ ಕಾರ್ಯಕರ್ತರು ಪ್ರತಿಭಟಿಸಿದ್ದಕ್ಕೆ ಲಾಠಿ ಏಟು
  • ಬಾಗಲಕೋಟೆಯ ನವನಗರದ ನಗರಸಭೆ ಮುಂದೆ ಘಟನೆ
  • ಸಿಪಿಐ ವಿರುದ್ಧ ಅವಾಚ್ಯವಾಗಿ ನಿಂದಿಸಿದ್ದಾರೆ ಅಂತ ಆರೋಪ

ಪ್ರೀತಿ ಕಣ್ಣು.. ವರ್ಣ.. ಜಾತಿ.. ಧರ್ಮ ಇದೇನನ್ನು ನೋಡಲ್ಲ.. ಅಂತರ್ಜಾತಿಯಾಗಿದ್ರೂ ಪ್ರೀತಿ ಮಾಡಿ ಮದ್ವೆಯಾಗೋದು.. ಮದುವೆಯಾದ ಮೇಲೆ ಎಲ್ಲರನ್ನೂ ಎದುರು ಹಾಕಿಕೊಂಡು ಜೀವನ ಮಾಡೋದು.. ಒಂದು ಯುದ್ಧ ಮಾಡಿದಕ್ಕೆ ಸಮ.. ಹಾಗೆ ಯುದ್ಧವನ್ನ ಶುರು ಮಾಡಿದ ನವ ಜೋಡಿಗೆ ಸಹಾಯಕ್ಕೆ ಬಂದವರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ.

ಬಾದಾಮಿ ಮೂಲದ ಅನ್ಯಕೋಮಿನ ಯುವತಿ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿದ್ದರು. ಬಳಿಕ ರಕ್ಷಣೆ ಕೋರಿ ನವದಂಪತಿ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದರು. ಆದ್ರೆ, ಸಿಪಿಐ ಅವರಿಗೆ ರಕ್ಷಣೆ ಕೊಡಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

publive-image

ಇದರ ಬೆನ್ನಲ್ಲೇ ಪ್ರೇಮಿಗಳ ಪ್ರಕರಣದ ವಿಚಾರವಾಗಿ ಹಿಂದೂ ಕಾರ್ಯಕರ್ತರನ್ನು ಸಿಪಿಐ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೇ ಪೊಲೀಸರು ಅನ್ಯ ಸಮುದಾಯದ ಪರ ಇದ್ದಾರೆ ಎಂದು ಆರೋಪಿಸಿ ಬಾಗಲಕೋಟೆಯ ನವನಗರ ಠಾಣೆ ಸಿಪಿಐ ರಾಮಣ್ಣ ಬಿರಾದಾರ ವಿರುದ್ಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

ಇದನ್ನೂ ಓದಿ:ವಿರಾಟ್ ಕೊಹ್ಲಿಗೆ ಹೊಸ ಬಿರುದು.. ರೈನಾರನ್ನು ಓವರ್​ ಟೇಕ್ ಮಾಡಿದ ವಿರಾಟ್..!

publive-image

ಲಾಠಿ ಚಾರ್ಜ್ ಮಾಡ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತಷ್ಚು ಉದ್ರಿಕ್ತರಾಗಿ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಹಿಂದೂ ಪರ ಸಂಘಟನೆ ಕಾರ್ಯಕರ್ತರಾದ ಮನೋಜ್, ಕುಮಾರಸ್ವಾಮಿ ಮತ್ತು ವಿಕ್ರಮ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಪೊಲೀಸ್​​ ವರಿಷ್ಠಾಧಿಕಾರಿ ಅಮರನಾಥ್​ ರೆಡ್ಡಿ ಭೇಟಿ ನೀಡಿದ್ದು, ಎಸ್​ಪಿ ಜೊತೆ ಮಾತುಕತೆ ನಡೆಸಿದ್ರು. ಅಲ್ಲದೇ ಸಿಪಿಐ ರಾಮಣ್ಣ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

publive-image

ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾದ ಹಿನ್ನಲೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅದೇನೆ ಇರ್ಲಿ, ಒಂದು ಪ್ರೇಮ ವಿವಾಹ ಪೊಲೀಸರು ಮತ್ತು ಹಿಂದೂ ಕಾರ್ಯಕರ್ತರ ಮಧ್ಯೆ ಹೊಡೆದಾಟಕ್ಕೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ.

ಇದನ್ನೂ ಓದಿ‘ಕೋವಿಶೀಲ್ಡ್​ ಲಸಿಕೆ ಪಡೆದ್ರೆ ಡ್ಯಾನ್ಸ್ ಮಾಡುವಂತಿಲ್ಲ’ ಏನಿದು ಹೊಸ ಆತಂಕ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment