newsfirstkannada.com

‘ಕೋವಿಶೀಲ್ಡ್​ ಲಸಿಕೆ ಪಡೆದ್ರೆ ಡ್ಯಾನ್ಸ್ ಮಾಡುವಂತಿಲ್ಲ’ ಏನಿದು ಹೊಸ ಆತಂಕ..?

Share :

Published May 8, 2024 at 2:08pm

Update May 9, 2024 at 6:11am

  ಕೊರೊನಾ ಪ್ರಭಾವ ತಗ್ಗಿದರೂ ಮತ್ತೆ ಏನೋ ಆತಂಕ

  ಮದುಮಕ್ಕಳ ಆಮಂತ್ರಣ ಪತ್ರಿಕೆ ಬಗ್ಗೆ ಭಾರೀ ಚರ್ಚೆ

  ಹೌದು, ಅವರು ಯಾಕೆ ಹೀಗೆ ಪ್ರಕಟಿಸಿದ್ದಾರೆ ಗೊತ್ತಾ? ​

ಕೊರೊನಾ ಸೋಂಕಿನ ಅಲೆ ತಗ್ಗಿದರೂ ಅದರಿಂದ ಆಗುತ್ತಿರುವ ಬಾನಗಡಿ ಮಾತ್ರ ನಿಲ್ತಿಲ್ಲ. ಕೊರೊನಾ ಲಸಿಕೆ ಕೋವಿಶೀಲ್ಡ್​ ಅಭಿವೃದ್ಧಿ ಪಡಿಸಿದ್ದ ದೈತ್ಯ ಫಾರ್ಮಾ ಕಂಪನಿ ಅಸ್ಟ್ರಝೆನೆಕಾ, ಕೋರ್ಟ್​ ಮುಂದೆ ಸತ್ಯವೊಂದನ್ನು ಒಪ್ಪಿಕೊಂಡಿದೆ. ಅದು ಏನೆಂದರೆ ತಾನು ತಯಾರಿಸಿ ಪ್ರಪಂಚಕ್ಕೆ ನೀಡಿದ್ದ ಕೋವಿಶೀಲ್ಡ್ ವ್ಯಾಕ್ಸಿನ್​​ನಿಂದ ತುಂಬಾ ಅಪರೂಪದ ಪ್ರಕರಣಗಳಲ್ಲಿ ಮಾರಣಾಂತಿಕ ಅಡ್ಡ ಪರಿಣಾಮ ಉಂಟು ಮಾಡ್ತಿದೆ ಎಂದು ಲಂಡನ್​ ಕೋರ್ಟ್​ಗೆ ಹೇಳಿದೆ.

ಇದನ್ನೂ ಓದಿ:ಕೊಹ್ಲಿ ಕಂಡ್ರೆ ಟೀಕೆ.. ಟೀಕೆ.. ಟೀಕೆ..! ವಿರೋಧಿಗಳು ಓದಲೇಬೇಕಾದ ಸ್ಟೋರಿ..!

ಟಿಟಿಎಸ್​​ನಂಥ ಡೇಂಜರಸ್​ ಕಾಯಿಲೆಯನ್ನು ಕೊರೊನಾ ವ್ಯಾಕ್ಸಿನ್ ಉಂಟು ಮಾಡುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ, ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸಿದೆ. ಪರಿಣಾಮ ಆರ್ಥಿಕ ನೆಪವೊಡ್ಡಿ ಫಾರ್ಮಾ ಕಂಪನಿ, ಕೋವಿಡ್ 19 ಲಸಿಕೆಯನ್ನು ವಿಶ್ವದಾದ್ಯಂತ ಮಾರಾಟ ಮತ್ತು ಉತ್ಪಾದನೆಯನ್ನು ನಿಲ್ಲಿಸೋದಾಗಿ ಹೇಳಿದೆ.

ವಿಷಯ ಹೀಗಿರುವಾಗ ಮದುಮಕ್ಕಳ ಆಮಂತ್ರಣ ಪತ್ರಿಕೆಯೊಂದು ವೈರಲ್ ಆಗಿದೆ. ಅದರಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡವರು ಡ್ಯಾನ್ಸ್ ಮಾಡುವಂತಿಲ್ಲ ಎಂದು ಬರೆಸಲಾಗಿದೆ. ಅದನ್ನು ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಮಂಗಳ ಪತ್ರದಲ್ಲಿ ಅನೇಕ ಎಚ್ಚರಿಕೆ, ಸಲಹೆಗಳನ್ನು ನೀಡಿರೋದನ್ನು ನೋಡಿದ್ದೇವೆ. ಆದರೆ ಇವರು ಯಾಕೆ ಕೋವಿಶೀಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತಿಲ್ಲ ಎಂದು ಬರೆದಿದ್ದಾರೆ ಅನ್ನೋದ್ರ ಬಗ್ಗೆ ಚರ್ಚೆ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬಿಸಿಬಿಸಿ ಚರ್ಚೆ ಆಗ್ತಿದೆ.

ಇದನ್ನೂ ಓದಿ:ಕೊರೊನಾ ವ್ಯಾಕ್ಸಿನ್ ಹಿಂತೆಗೆದುಕೊಂಡ AstraZeneca; ಲಸಿಕೆ ಪಡೆದವರಲ್ಲಿ ಹೆಚ್ಚಿದ ಮತ್ತಷ್ಟು ಆತಂಕ..!

ಹೌದು, ಇವರು ಯಾಕೆ ಹಾಗೆ ಬರೆಸಿಕೊಂಡಿದ್ದಾರೆ..?
ಇದು ಕಾಕತಾಳಿಯವೋ, ನಿಜವೋ ಗೊತ್ತಿಲ್ಲ. ಕೋವಿಶೀಲ್ಡ್​ನಿಂದ ಅಡ್ಡ ಪರಿಣಾಮ ಬೀರುತ್ತದೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಜನ ಎಚ್ಚೆತ್ತುಕೊಂಡಿದ್ದಾರೆ. ಜನ ಹಿಂದೆ ಆಗಿರುವ ಘಟನೆಗಳನ್ನು ಸ್ಮರಿಸಿಕೊಳ್ತಿದ್ದಾರೆ. ಅಂತೆಯೇ, ಈ ಮದುವೆ ಕಾರ್ಡ್​​ನಲ್ಲಿ ಕೋವಿಶೀಲ್ಡ್​ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತಿಲ್ಲ ಅನ್ನೋದು ಕಟ್ಟಪ್ಪಣೆ. ಅದಕ್ಕೆ ಕಾರಣ ಕೂಡ ಇದೆ. ಈ ಹಿಂದೆ ನಡೆದ ಮದುವೆಗಳಲ್ಲಿ ಡ್ಯಾನ್ಸ್ ಮಾಡುವ ವೇಳೆ ಅದೆಷ್ಟೋ ಮಂದಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅದರಲ್ಲೂ ಕೊರೊನಾ ವ್ಯಾಕ್ಸಿನ್ ಪಡೆದ ನಂತರ ಇಂತಹ ಪ್ರಕರಣಗಳು ಹೆಚ್ಚಾಗಿವೆ ಅನ್ನೋದು ವಾದ. ಇದೇ ಕಾರಣಕ್ಕೆ ನಮ್ಮ ಮದುವೆಗೆ ಬರೋರು ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದರೆ ಡ್ಯಾನ್ಸ್ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ ಜೋಡಿ. ಪುನೀತ್ ರಾಜ್​ ಕುಮಾರ್​ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದುಕೊಂಡಿದ್ದ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಇದನ್ನೂ ಓದಿ:ರಾಜಸ್ಥಾನ ಸೋಲಿನಿಂದ ಆರ್​ಸಿಬಿಗೆ ದೊಡ್ಡ ಆಘಾತ.. ಕೊಹ್ಲಿ, ಫಾಫ್ ನಿದ್ರೆಗೆ ಭಂಗ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕೋವಿಶೀಲ್ಡ್​ ಲಸಿಕೆ ಪಡೆದ್ರೆ ಡ್ಯಾನ್ಸ್ ಮಾಡುವಂತಿಲ್ಲ’ ಏನಿದು ಹೊಸ ಆತಂಕ..?

https://newsfirstlive.com/wp-content/uploads/2024/05/CORONA-VACCINE.jpg

Load More