newsfirstkannada.com

ರೋಡ್​ ರೇಜ್​ ಪ್ರಕರಣ; ಆರೋಪಿಯ ಬಂಧನ; ಇಷ್ಟೆಲ್ಲಾ ದರ್ಪ ತೋರಲು ಕಾರಣವೇನು ಗೊತ್ತಾ?

Share :

Published August 20, 2024 at 1:26pm

    ಕಾರಿನ ಗಾಜು ಪುಡಿ ಮಾಡಿ ದರ್ಪ ತೋರಿದ ಯುವಕ

    ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಡೆದ ಘಟನೆ.. ದೃಶ್ಯ ವೈರಲ್

    ಯುವಕನ ಮೇಲೆ ದೂರು ದಾಖಲಿಸಿದ್ದ ಕಾರಿನ ಚಾಲಕ

ಬೆಂಗಳೂರು: ಯುವಕನೋರ್ವ ಕಾರಿನ ಗಾಜು ಪುಡಿ ಮಾಡಿ ದರ್ಪ ತೋರಿದ ದೃಶ್ಯ ಸಮೇತ ಘಟನೆ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಬೆಳಕಿಗೆ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲೂ ದೃಶ್ಯ ವೈರಲ್​ ಆಗಿತ್ತು. ಆದರೀಗ ಬೆಳ್ಳಂದೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅನಿಲ್ ರೆಡ್ಡಿ ಎಂದು ಗುರುತಿಸಲಾಗಿದೆ. ಬಂಧಿತನು ಕಾರಿನ ಗಾಜು ಪುಡಿ ಪುಡಿ​ ಮಾಡಿ ಅಟ್ಟಹಾಸ ಮೆರೆದಿದ್ದನು. ಮಾತ್ರವಲ್ಲದೆ ವೈಪರ್​ ತುಂಡು ಮಾಡಿ ಕಾರಿನ ಗಾಜಿನ ಮೇಲೆ ಹೊಡೆದಿದ್ದನು. ಆದರೀಗ ಪೊಲೀಸರು ಅನಿಲ್​ನನ್ನು ಅರೆಸ್ಟ್​ ಮಾಡಿದ್ದಾರೆ.

ಏನಿದು ಘಟನೆ?

ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದ ಘಟನೆ ಇದಾಗಿದೆ. ಸರ್ಜಾಪುರ ಮುಖ್ಯ ರಸ್ತೆಯ ದೊಡ್ಡ ಕನ್ನಹಳ್ಳಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬರೀ 7 ಗಂಟೆ ನಡೆದರೆ ಸಾಕು.. ದಿನಕ್ಕೆ 28 ಸಾವಿರ ರೂಪಾಯಿ ಸ್ಯಾಲರಿ ನೀಡುತ್ತೆ ಟೆಸ್ಲಾ! ಈ ಅವಕಾಶ ಮಿಸ್​ ಮಾಡ್ಬೇಡಿ

ಕಾರಿನ ಚಾಲಕ ಗುಂಡಿ ಇದೆ ಎಂದು ಬಲ ತಿರುವ ಪಡೆಯಲು ಇಂಡಿಕೇಟರ್ ಬಳಸದೆ ಏಕಾಏಕಿ ನುಗ್ಗಿದ್ದಾನೆ. ಈ ವೇಳೆ ಬೈಕ್ ಸವಾರನಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಅನಿಲ್​ ರೆಡ್ಡಿ ಕೆಳಗೆ ಬಿದ್ದಿದ್ದಾನೆ.

ಇದನ್ನೂ ಓದಿ: ಆಸನವೂ ಇಲ್ಲ, ಬಾತ್​ ರೂಂ ಇಲ್ಲ! 2025ರ ಚಾಂಪಿಯನ್​ ಟ್ರೋಫಿಯನ್ನು ನಡೆಸಲು ಮುಂದಾದ ಪಾಕ್​!

ಬಳಿಕ ಸಾವರಿಸಿಕೊಂಡು ಮೇಲೆ ಎದ್ದ ಅನಿಲ್ ರೆಡ್ಡಿ ಕಾರಿನಿಂದ ಕೆಲಗಿಳಿಯುವಂತೆ ಚಾಲಕನಿಗೆ ಹೇಳಿದ್ದಾನೆ. ಕಾರಿನಿಂದ ಚಾಲಕ ಕೆಳಗೆ ಇಳಿಯದೆ ಕುಳಿತಿದ್ದರಿಂದ ಕೋಪಗೊಂಡು ಕಲ್ಲಿನಿಂದ ಗ್ಲಾಸ್ ಪುಡಿ ಮಾಡಿದ್ದಾನೆ.

ಇದನ್ನೂ ಓದಿ: ಮಕ್ಕಳ ಹಾಲಿನ ಪೌಡರ್​ ಮೇಲೂ ಕನ್ನ.. 10 ಪ್ಯಾಕೆಟ್ ಕದ್ದೊಯ್ಯುವಾಗ ಸಿಕ್ಕಿಬಿದ್ದ ಶಾಲಾ ಮುಖ್ಯ ಶಿಕ್ಷಕ

ಘಟನೆ ಸಂಬಂಧ ಕಾರು ಚಾಲಕನಿಂದ ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ಎಫ್ಐಆರ್ ದಾಖಲಿಸಿದ ಬೆಳ್ಳಂದೂರು ಪೊಲೀಸರು ಅನಿಲ್ ರೆಡ್ಡಿಯನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಡ್​ ರೇಜ್​ ಪ್ರಕರಣ; ಆರೋಪಿಯ ಬಂಧನ; ಇಷ್ಟೆಲ್ಲಾ ದರ್ಪ ತೋರಲು ಕಾರಣವೇನು ಗೊತ್ತಾ?

https://newsfirstlive.com/wp-content/uploads/2024/08/anil-reddy.jpg

Load More