Advertisment

ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತವೇ ಗತಿ; ನಿಲ್ಲದ ಹಿಂಸಾಚಾರ.. ಬಾಂಗ್ಲಾದಲ್ಲಿ ಏನೆಲ್ಲ ಆಗೋಯ್ತು..

author-image
Ganesh
Updated On
ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತವೇ ಗತಿ; ನಿಲ್ಲದ ಹಿಂಸಾಚಾರ.. ಬಾಂಗ್ಲಾದಲ್ಲಿ ಏನೆಲ್ಲ ಆಗೋಯ್ತು..
Advertisment
  • ಇಂಗ್ಲೆಂಡ್ ಆಶ್ರಯ ನೀಡುವವರೆಗೂ ಭಾರತದಲ್ಲೇ ವಾಸ್ತವ್ಯ
  • ಶೇಖ್ ಹಸೀನಾಗೆ ತಾತ್ಕಾಲಿಕ ಆಶ್ರಯ ನೀಡಿರುವ ಭಾರತ
  • ಶೇಖ್ ಹಸೀನಾ ಪುತ್ರಿ ಇಂಗ್ಲೆಂಡ್​ನ ಲೇಬರ್ ಪಾರ್ಟಿ ಸಂಸದೆ

ಬಾಂಗ್ಲಾದೇಶದಲ್ಲಿ ಮೀಸಲಾತಿಯ ಕಿಚ್ಚು ಧಗಧಗಿಸುತ್ತಿದೆ. ಶಾಂತಿಯುತವಾಗಿ ಶುರುವಾದ ಹೋರಾಟವೀಗ ಉಗ್ರರೂಪ ಪಡೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ದೇಶವೇ ಹೊತ್ತಿ ಉರಿಯುತ್ತಿದ್ದು, ಇದುವರೆಗೆ ಮುನ್ನೂರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ತಲೆದೋರಿದೆ.

Advertisment

ಒಂದು ಕಾಲದಲ್ಲಿ ಬಾಂಗ್ಲಾವನ್ನು ಸೇನಾ ಆಳ್ವಿಕೆಯಿಂದ ಕಾಪಾಡಿದ್ದ ಶೇಖ್ ಹಸೀನಾ.. ಸದ್ಯ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ ಜೀವ ಭಯದಿಂದ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಬಂದಿದ್ದಾರೆ. ಹಿಂಡನ್ ವಾಯುನೆಲೆಗೆ ಬಂದಿಳಿದ ಶೇಖ್ ಹಸೀನಾ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯಾದ್ರು.. ಬಳಿಕ ಅವರನ್ನು ಸುರಕ್ಷಿತಾ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಭಾರತದಿಂದ ಅವರು ಲಂಡನ್​ಗೆ ಪ್ರಯಾಣ ಬೆಳಸುವ ಸಾಧ್ಯತೆ ಇದೆ. ಸದ್ಯ ಲಂಡನ್​​ ಸರ್ಕಾರಕ್ಕೆ ಆಶ್ರಯ ಕೋರಿದ್ದಾರೆ. ಸದ್ಯ ಲಂಡನ್​​ನಿಂದ ಯಾವುದೇ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಭಾರತದಲ್ಲೇ ಕಳೆಯುವಂತಾಗಿದೆ.

ಇದನ್ನೂ ಓದಿ:ದೊಡ್ಡ ಪ್ರಮಾದ ಮಾಡಿದ ಗಂಭೀರ.. ಮುಳುವಾದ ನಾಲ್ಕು ತಂತ್ರಗಳು.. ಕೈಸುಟ್ಟುಕೊಂಡ ಕೋಚ್..!

publive-image

ಬಾಂಗ್ಲಾದೇಶದ ಬಿಕ್ಕಟ್ಟಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮೋದಿ ಹಲವು ಸಚಿವರೊಂದಿಗೆ ಚರ್ಚಿಸಿದ್ದಾರೆ. ಹಾಗೂ ಬಾಂಗ್ಲಾದಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದಾರೆ..

Advertisment

ಭಾರತ-ಬಾಂಗ್ಲಾ ಗಡಿಭಾಗದಲ್ಲಿ ಬಿಗಿ ಭದ್ರತೆ
ಬಾಂಗ್ಲಾ ಕ್ಷಿಪ್ರ ರಾಜಕೀಯ ಬೆಳವಣಿಗೆ ಬೆನ್ನಲ್ಲೇ, ಭಾರತ-ಬಾಂಗ್ಲಾ ಗಡಿಭಾಗದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಬಿಎಸ್‍ಎಫ್ ಭದ್ರತಾ ಪಡೆಗಳನ್ನು ರವಾನಿಸಿ ಭದ್ರತೆ ಹೆಚ್ಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಭಾರತ-ಬಾಂಗ್ಲಾ ರೈಲು ಸಂಚಾರವನ್ನ ಸ್ಥಗಿತಗೊಳಿಸಿದೆ. ಇನ್ನು ಏರ್​ ಇಂಡಿಯಾ ಎರಡೂ ಕಡೆಯ ಹಾರಾಟವನ್ನು ಸ್ಥಗಿತಗೊಳಸಿದೆ. ಮೇಘಾಲಯವು ಬಾಂಗ್ಲಾ ಗಡಿಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ. ಇನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಾಂಗ್ಲಾದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

publive-image

ಬಾಂಗ್ಲಾದೇಶ ಸೇನೆಯಿಂದ ಮಧ್ಯಂತರ ಸರ್ಕಾರ ಘೋಷಣೆ?
ಶೇಖ್ ಹಸೀನಾ ಭಾರತಕ್ಕೆ ಬಂದ ಬೆನ್ನಲ್ಲೇ ಬಾಂಗ್ಲಾದೇಶ ಸೇನೆಯ ತೆಕ್ಕೆಗೆ ಜಾರಿದೆ. ದೇಶ ಉದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ ವಾಕರ್ ಉಜ್ ಜಮಾನ್ ಶೀಘ್ರದಲ್ಲೇ ಮಧ್ಯಂತರ ಸರ್ಕಾರ ರಚನೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದರ ನಡುವೆ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಜೈಲಿನಲ್ಲಿರುವ ಮಾಜಿ ಪ್ರಧಾನಿ ಮತ್ತು ಪ್ರಮುಖ ವಿರೋಧ ಪಕ್ಷದ ನಾಯಕಿ ಖಲೀದಾ ಜಿಯಾ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಹಾಗೂ ಸಂಸತ್ತನ್ನು ವಿಸರ್ಜಿಸಿದ್ದು, ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದೆ.

ಇದನ್ನೂ ಓದಿ:ಟಿವಿ ಲೈವ್​ನಲ್ಲೇ ಚಪ್ಪಲಿಯಿಂದ ಹೊಡೆದ ಸ್ಟಾರ್ ನಟಿ ಲಾವಣ್ಯ; ಅಸಲಿಗೆ ಆಗಿದ್ದೇನು..?

Advertisment

publive-image

ದೇಗುಲಗಳಿಗೂ ಹಾನಿ
ಶೇಖ್ ಹಸೀನಾ ರಾಜೀನಾಮೆ ನೀಡಿ ಪಲಾಯನ ಮಾಡಿದ ಬೆನ್ನಲ್ಲೇ ಉದ್ರಿಕ್ತ ಪ್ರತಿಭಟನಾಕಾರರು ಸಂಭ್ರಮಾಚರಣೆಗಳಲ್ಲಿ ಮುಳುಗಿದ್ದಾರೆ. ಶೇಖ್ ಹಸೀನಾ ಕಚೇರಿ, ನಿವಾಸಕ್ಕೆ ನುಗ್ಗಿ ಸಿಕ್ಕಿದೆಲ್ಲವನ್ನು ದೋಚಿದ್ದಾರೆ. ಶೇಖ್ ಹಸೀನಾ ಅವರ ದಿವಂಗತ ತಂದೆ, ಬಾಂಗ್ಲಾ ಪಿತಾಮಹ ಶೇಖ್ ಮುಜಿಬುರ್ ರೆಹಮಾನ್ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲ ಬಾಂಗ್ಲಾದಲ್ಲಿರುವ ಅನೇಕ ಹಿಂದೂ ದೇವಾಲಯಗಳ ಮೇಲೆ ಉದ್ರಿಕ್ತರು ದಾಳಿ ಮಾಡಿರುವ ವರದಿ ಲಭ್ಯವಾಗಿದೆ. ಸೋಮವಾರ ಸಂಭವಿಸಿದ ಹಿಂಸಾಚಾರದಲ್ಲಿ 56 ಮಂದಿ ಮೃತಪಟ್ಟಿದ್ದಾರೆ. ಇನ್ನು ಡಾಕಾದ ಕೆಲ ಭಾಗಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಅನ್ನು ಬಾಂಗ್ಲಾ ಸೇನೆ ಇಂದು ಬೆಳಗ್ಗೆಯಿಂದ ತೆರವುಗೊಸಿದೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು; ಮನೆಬಿಟ್ಟು ಹೋದ ಅಪ್ಪ ಇನ್ನೂ ಬರಲೇ ಇಲ್ಲ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment