newsfirstkannada.com

×

ಚೈತ್ರಾ ಕುಂದಾಪುರ ಎದುರಿಸುತ್ತಿರುವ ಕೇಸ್​ ಏನು? ಬಿಗ್​ ಬಾಸ್​ ಮನೆಗೆ ಬರಲು ಕಾರಣ?

Share :

Published September 30, 2024 at 3:05pm

Update October 1, 2024 at 2:21pm

    2022ರಲ್ಲಿ ನಡೆದ ವಂಚನೆ ಕೇಸ್​ನಲ್ಲಿ ಚೈತ್ರಾ ಹೆಸರು

    ಉದ್ಯಮಿಗೆ 5 ಕೋಟಿ ರೂಪಾಯಿ ವಂಚಿಸಿದ್ದ ಉದ್ಯಮಿ

    2018ರಲ್ಲೂ ಕೇಸ್​ವೊಂದರಲ್ಲಿ ಚೈತ್ರಾ ಮೇಲೆ ದಾಖಲಾಗಿತ್ತು ಕೇಸ್​

ಚೈತ್ರಾ ಕುಂದಾಪುರ ಕರಾವಳಿ ಭಾಗದವರಾಗಿದ್ದು, ಹಿಂದೂ ಪರ ಭಾಷಣಗಳ ಮೂಲಕ ಗುರುತಿಸಿಕೊಂಡವರು. ಕಳೆದ ವರ್ಷ ವಂಚನೆ ಆರೋಪದಲ್ಲಿ ಅವರ ಹೆಸರು ತಳುಕು ಹಾಕಿತ್ತು. ಇದೇ ವಿಚಾರಕ್ಕೆ ಸೆರೆಮನೆ ವಾಸವನ್ನು ಅನುಭವಿಸಿ ಹೊರಬಂದಿದ್ದಾರೆ.

ಅಂದಹಾಗೆಯೇ ಅದು 2022ರಲ್ಲಿ ನಡೆದ ವಂಚನೆ ಕೇಸ್​ ಆಗಿದ್ದು, 2023ರಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್​ ಆಗಿದ್ದರು. ಗೋವಿಂದ ಬಾಬು ಪೂಜಾರಿ ಎಂಬವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್​ ಕೊಡಿಸುವುದಾಗಿ ವಂಚನೆ ಮಾಡಿರುವ ಆರೋಪ ಅವರ ಹೆಸರಿನಲ್ಲಿ ಕೇಳಿಬಂದಿತ್ತು. ಬರೋಬ್ಬರಿ 5 ಕೋಟಿ ವಂಚಿಸಿದ್ದಾಗಿ ಗೋವಿಂದ ಪೂಜಾರಿಯವರು ಚೈತ್ರಾ ಮೇಲೆ ಕೇಸ್​ ನೀಡಿದ್ದರು.

ಇದನ್ನೂ ಓದಿ: ಒಂದು ದಿನ ನಾನು ಸಿಎಂ ಆಗ್ತೀನಿ! ಆತನ ಪಾಪದ ಕೊಡ ತುಂಬಿದೆ ಎಂದ BBK11 ಸ್ಪರ್ಧಿ ಜಗದೀಶ್​!

ವಂಚನೆ ಕೇಸ್​ ದಾಖಲಾದಂತೆ ಚೈತ್ರಾರವರು ತಲೆಮರೆಸಿಕೊಂಡಿದ್ದರು. ಕೊನೆಗೆ ಅವರನ್ನು ಪೊಲೀಸರು ಬಂಧಿಸಿದ್ದರು. 2023ರ ಸೆಪ್ಟೆಂಬರ್​ನಲ್ಲಿ ಅರೆಸ್ಟ್​ ಆದ ಚೈತ್ರಾರನ್ನು ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದರು.

ಇದನ್ನೂ ಓದಿ: BBK11: 17 ಸ್ಪರ್ಧಿಗಳಲ್ಲಿ 7 ಜನ ನರಕಕ್ಕೆ, 10 ಜನ ಸ್ವರ್ಗಕ್ಕೆ; ನರಕದಿಂದ ಸ್ವರ್ಗಕ್ಕೆ ಬರಲು ಸಜ್ಜಾದ ಸ್ಪರ್ಧಿ ಯಾರು ?

ವಂಚನೆ ಕೇಸ್​ ಸಂಬಂಧ ಚೈತ್ರಾರನ್ನು ತನಿಖೆ ನಡೆಸಿದ ಪೊಲೀಸರು 800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಬಳಿಕ ಸೆರೆಮನೆ ವಾಸವನ್ನು ಅನುಭವಿಸಿದ್ದರು. ಕೊನೆಗೆ 2 ತಿಂಗಳ ನಂತರ ಡಿಸೆಂಬರ್​ನಲ್ಲಿ ಜಾಮೀನು ಮೂಲಕ ಹೊರಬಂದರು. ಸದ್ಯ ಈ ಪ್ರಕರಣ ಕೋರ್ಟ್​ನಲ್ಲಿದ್ದು ತನಿಖೆ ನಡೆಯುತ್ತಿದೆ.

ಚೈತ್ರಾ ಮೇಲೆ ದಾಖಲಾಗಿತ್ತು ಮತ್ತೊಂದು ಕೇಸ್​

ಹಿಂದೂ ಜಾಗರಣ ವೇದಿಕೆಯ ಮುಖಂಡ ಗುರು ಪ್ರಸಾದ್​​ ಪಂಜ ಅವರ ಮೇಲೆ ನಡೆದ ಹಲ್ಲೆ ಸಂಬಂಧ ಚೈತ್ರಾ ಕುಂದಾಪುರ ಜೈಲು ಪಾಲಾಗಿದ್ದರು. 2018ರಲ್ಲಿ ನಡೆದ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಕೇಸ್​ ಸಂಬಂಧ ಸುಬ್ರಮಣ್ಯ ಪೊಲೀಸ್​ ಠಾಣೆಯಲ್ಲಿ ಕೇಸ್​​ ದಾಖಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ ಎದುರಿಸುತ್ತಿರುವ ಕೇಸ್​ ಏನು? ಬಿಗ್​ ಬಾಸ್​ ಮನೆಗೆ ಬರಲು ಕಾರಣ?

https://newsfirstlive.com/wp-content/uploads/2024/09/Chaitra-Kundapura-2.jpg

Load More