/newsfirstlive-kannada/media/post_attachments/wp-content/uploads/2024/09/Bee.jpg)
Cancer: ಜೇನುಹುಳ, ಅದು ಹೂವಿನಿಂದ ಹೂವಿಗೆ ಹಾರಿ ಮಕರಂದ ಹೀರಿ ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ಸಿಹಿಯಾದ ಜೇನನ್ನು ತಯಾರು ಮಾಡುತ್ತದೆ. ಜೇನು ಹೀರುವ ಮಕರಂದವನ್ನು ನಲ್ಲ ನಲ್ಲೆಯರ ಮುತ್ತಿಗೂ ಕೂಡ ಹೋಲಿಸುತ್ತಾರೆ. ಅದೇ ಜೇನು ತನ್ನ ಗೂಡಿಗೆ ಹಾನಿಮಾಡಿದ್ದೇ ಆದಲ್ಲಿ ರೌದ್ರರೂಪ ತಾಳಿ ತನ್ನ ಗೂಡಿಗೆ ಕಲ್ಲೆಸೆದವರ ಅಟ್ಟಾಡಿಸಿ ಕಡಿದು ಸೇಡು ತೀರಿಸಿಕೊಳ್ಳುತ್ತೆ. ಸಿಹಿ ತಯಾರಿಸುವ ಅದೇ ಜೇನು ತನ್ನ ಗೂಡಿಗೆ ಕಲ್ಲಿಟ್ಟವರ ಮೈಗೆ ವಿಷವನ್ನುಣಿಸುವ ಕಲೆಯನ್ನು ಕಲಿತಿದೆ. ಜೇನುಹುಳದ ಆ ವಿಷವೇ ಈಗ ಮಾನವ ಸಂಕುಲಕ್ಕೆ ಒಂದು ವರವಾಗಿ ಪರಿಣಮಿಸಿದೆ.
ಇದನ್ನೂ ಓದಿ:ನಿತ್ಯ 2 ನಿಮಿಷ ಧ್ಯಾನದಲ್ಲಿ ಹೇಗೆ ಕಳೆದುಹೋಗಬಹುದು ಗೊತ್ತಾ? ಈ ಒಂದು ರೂಢಿ ಬದುಕಲ್ಲಿ ಪವಾಡವನ್ನೇ ಸೃಷ್ಟಿಸಬಲ್ಲದು
ಕ್ಯಾನ್ಸರ್ ಅನ್ನುವುದು ಮನುಕುಲಕ್ಕೆ ಎಂತಹ ಪೀಡೆ ಅನ್ನೋದನ್ನ ಗೊತ್ತೆ ಇದೆ. ಇದನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯುತ್ತಾರೆ. ಈ ಸೈಲೆಂಟ್ ಕಿಲ್ಲರ್ ವರ್ಷಕ್ಕೆ ಲಕ್ಷಾಂತರ ಜನರ ಜೀವವನ್ನೇ ತೆಗೆದುಕೊಳ್ಳುತ್ತಿದೆ. ಆರಂಭಿಕ ಹಂತದಲ್ಲಿ ಪತ್ತೆಯಾಗದ ಈ ಮಹಾಮಾರಿ ದೇಹವೆಲ್ಲಾ ವ್ಯಾಪಿಸಿದ ಮೇಲೆಯೇ ಗೊತ್ತಾಗುತ್ತದೆ. ದೇಹದ ಜೀವಕೋಶಗಳನ್ನು ಒಂದೊಂದಾಗಿ ತಿನ್ನುತ್ತ ಬರುವ ಈ ಕ್ಯಾನ್ಸರ್ ಜಾಗತಿಕ ಕಂಟಕವಾಗಿ ಸಾವಿರಾರು ವರ್ಷಗಳಿಂದ ಕಾಡುತ್ತಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ. ದೇಹದಲ್ಲಿ ಹರಡುವ ಈ ವಿಷವನ್ನು ವಿಷದಿಂದಲೇ ನಿರ್ನಾಮ ಮಾಡುವ ಕಾಲ ಹತ್ತಿರ ಬರುತ್ತಿರುವ ಸುದ್ದಿಯನ್ನು ಕೊಡುತ್ತಿದೆ ವೈದ್ಯಲೋಕ
ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಹ್ಯಾರಿ ಪಾರ್ಕಿನ್ಸ್ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಜೇನುಹುಳದ ವಿಷದಿಂದ ದೇಹದಲ್ಲಿ ಹರಡಿಕೊಂಡಿರುವ ಕ್ಯಾನ್ಸರ್ ಸೆಲ್ಗಳನ್ನು ನಾಶಪಡಿಸಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: Hydrated; ಅತಿಯಾಗಿ ನೀರು ಕುಡಿದರೂ ಅಪಾಯ.. ಆರೋಗ್ಯಕ್ಕೆ ಹೇಗೆ ಹಾನಿಯಾಗುತ್ತೆ?
2020ರಲ್ಲಿ ನಡೆಸಲಾಗಿರುವ ಈ ಅಧ್ಯಯನದಲ್ಲಿ ಜೇನುಹುಳಗಳ ವಿಷದಲ್ಲಿ ಕ್ಯಾನ್ಸರ್ ಕೊಲ್ಲುವ ಅದರಲ್ಲೂ ಪ್ರಮುಖವಾಗಿ ಸ್ಥನ ಕ್ಯಾನ್ಸರ್ ಕೊಲ್ಲುವ ಶಕ್ತಿಯಿದೆ ಎಂದು ಸಾಬೀತಾಗಿದೆ. ಅಧ್ಯಯನ ಹೇಳುವ ಪ್ರಕಾರ ಅವರು ಎರಡು ರೀತಿಯ ಜೀವಕೋಶಗಳ ಮೇಲೆ ಪ್ರಯೋಗ ಮಾಡಲಾಗಿದೆ. ಒಂದು ಸಾಮಾನ್ಯ ಸ್ತನದ ಸೆಲ್ ಮೇಲೆ ಹಾಗೂ ಮತ್ತೊಂದು ಕ್ಯಾನ್ಸರ್ಗೆ ಒಳಗಾದ ಸ್ತನ ಜೀವಕೋಶದ ಮೇಲೆ. ಪ್ರಯೋಗದ ಬಳಿಕ ಸ್ತನ ಕ್ಯಾನ್ಸರ್ ಇರುವ ಸೆಲ್ನ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಅಧ್ಯಯನವು ವರದಿ ಮಾಡಿರುವ ಪ್ರಕಾರ ಜೇನುಹುಳದ ವಿಷದಲ್ಲಿರುವ ಮೆಲ್ಲಟಿನ್ ಎಂಬ ಅಂಶ ಕ್ಯಾನ್ಸರ್ ಸೆಲ್ಗಳನ್ನು 60 ನಿಮಿಷ ಅಂದ್ರೆ ಜಸ್ಟ್ ಒಂದೇ ಗಂಟೆಯಲ್ಲಿ ಸರ್ವನಾಶಗೊಳಿಸುತ್ತವೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಪೋಷಕರೇ ಹುಷಾರ್.. ನಿಮ್ಮ ಮಕ್ಕಳು ದಿಢೀರ್ ದಪ್ಪ ಆದ್ರೆ ಅಪಾಯ; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!
ಮೆಲ್ಲಟೆನ್ ಅನ್ನುವುದು ಜೇನುಹುಳದ ವಿಷದಲ್ಲಿರುವ ಪ್ರಾಥಮಿಕ ಅಂಶ ಇದು ಅನೇಕ ಸಂಶೋಧನೆಗಳಿಗೆ ಮೂಲವಾಗಿದೆ. ಇದು ಆ್ಯಂಟಿ ಇನ್ಫ್ಲೆಮೆಟರಿ, ಆ್ಯಂಟಿ ವೈರಲ್ ರೀತಿಯಾಗಿ ಮನುಷ್ಯನ ದೇಹದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಜೇನುಹುಳದ ವಿಷದ ಬಗ್ಗೆ ಇನ್ನೂ ಹೆಚ್ಚಿನ ಪ್ರಯೋಜನಳನ್ನು ತಿಳಿಯಲು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ