newsfirstkannada.com

ಮದ್ಯಪ್ರಿಯರಿಗೆ ಎಣ್ಣೆ ಆಘಾತ..! ಬೆಂಗಳೂರಲ್ಲೇ ಯಾಕೆ ಹೀಗೆ ಆಗ್ತಿದೆ..!

Share :

Published May 6, 2024 at 2:11pm

Update May 6, 2024 at 2:32pm

    ಬೆಂಗಳೂರು ಎಣ್ಣೆ ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್

    ಬೇಸಿಗೆ‌ ಮುನ್ನ ನಿತ್ಯ 8 ಲಕ್ಷ ಲೀಟರ್ ಬಿಯರ್ ಮಾರಾಟ

    ಬಿಯರ್ ಅಬಕಾರಿ‌ ಇಲಾಖೆ ಕೊಟ್ಟ ಮಾಹಿತಿ ಏನು?

ಬಿಸಿಲ ಬೇಗೆಯ ನಡುವೆ ಮದ್ಯಪ್ರಿಯರು ಬೆವರುವಂತಹ ಸುದ್ದಿಯೊಂದು ಹೊರ ಬಂದಿದೆ. ಸುಡು ಬಿಸಿಲಿನಲ್ಲಿ ತಣ್ಣಗಾಗಲು ಒಂದು ಕಡೆ ಮದ್ಯಪ್ರಿಯರು ಬಿಯರ್ ಮೊರೆ ಹೋಗ್ತಿದ್ರೆ, ಅತ್ತ ಪೂರೈಕೆ ಕಡ್ಮೆಯಾಗಿರೋದು ಮದ್ಯಪ್ರಿಯರಲ್ಲಿ ಅಭಾವದ ಆತಂಕ ಆವರಿಸೋಕೆ ಕಾರಣವಾಗಿದೆ. ಈ ಕುರಿತ ವರದಿ ಇಲ್ಲಿದೆ.

ಬೆಂಗಳೂರಿನಲ್ಲಿ ಬಿಯರ್​ಗೆ ಎದುರಾಗುತ್ತಾ ಅಭಾವ?
ಬೆಂಗಳೂರು ಬೆಂದಕಾಳೂರಾಗಿದೆ. ರಣಬಿಸಿಲಿಗೆ ರಾಜಧಾನಿಯ ಮಂದಿ ಹೈರಣಾಗಿದ್ದಾರೆ. ಈ ಬಾರಿಯ ಬಿಸಿಲಿನ ಬೇಗೆಗೆ ಮದ್ಯಪ್ರಿಯರು ಚಿಲ್ಡ್ ಬಿಯರ್ ಮೊರೆ‌ ಹೋಗಿದ್ದು, ಪರಿಣಾಮ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂಗೆ ಬಿಯರ್​ಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಬೇಸಿಗೆಯಲ್ಲಿ ಮದ್ಯಪ್ರಿಯರು ಹಾಟ್​ ಡ್ರಿಂಕ್ಸ್​ ಬಿಟ್ಟು ಕೋಲ್ಡ್​ ಬಿಯರ್​ನತ್ತ ವಾಲಿದ್ದ ಪರಿಣಾಮ, ಬಿಯರ್​ಗೆ ಭರ್ಜರಿ ಡಿಮ್ಯಾಂಡ್ ಉಂಟಾಗಿದೆ.

ಇದನ್ನೂ ಓದಿ:ನಿಮಗೆ ಯಾರಿಗೂ ಗೊತ್ತಿಲ್ಲ.. ಈ ಐಪಿಎಲ್​ನಲ್ಲಿ ಕೊಹ್ಲಿ, ಜಡೇಜಾ ಮಧ್ಯೆ ಭಾರೀ ಫೈಟ್..!

ಬೇಸಿಗೆಯ ‘ಕಿಕ್’

  • ಬೇಸಿಗೆ‌ ಮುನ್ನ ನಿತ್ಯ 8 ಲಕ್ಷ ಲೀಟರ್ ಬಿಯರ್ ಮಾರಾಟ
  • ನಿತ್ಯ 11 ಲಕ್ಷದ 50 ಸಾವಿರ ಲೀಟರ್ ಬಿಯರ್ ಸೇಲ್
  • ಬೇಸಿಗೆ ಹಿನ್ನೆಲೆ ನಿತ್ಯ ಹೆಚ್ಚುವರಿಯಾಗಿ 2 ಲಕ್ಷ ಲೀಟರ್ ಬಿಯರ್ ಬೇಡಿಕೆ
  • ಬಿಯರ್ ಅಭಾವ ಇರುವ ಬಗ್ಗೆ ಅಬಕಾರಿ‌ ಇಲಾಖೆ ಮಾಹಿತಿ
  • ಮುಂದಿನ 2 ತಿಂಗಳ ಕಾಲ ಬಿಯರ್ ಅಭಾವ ಎದುರೋ ಸಾಧ್ಯತೆ

ಬೇಡಿಕೆಗೆ ತಕ್ಕಂತೆ ಸಿಗ್ತಿಲ್ಲ ಬಿಯರ್
ಬಿಯರ್ ಗೆ ಬೇಡಿಕೆ ಹೆಚ್ಚಾಗಿದ್ಹೇನೋ ನಿಜ. ಬಟ್ ಬೇಡಿಕೆಗೆ ತಕ್ಕಂತೆ ಬಿಯರ್ ಪೂರೈಕೆಯಾಗ್ತಿಲ್ಲ. ಬಿಯರ್ ತಯಾರಿಕೆಯಲ್ಲಿ ಕುಂಠಿತವಾಗಿದ್ದು, ಪರಿಣಾಮ ಮಾಲೀಕರು 100 ಬಿಯರ್ ಬಾಕ್ಸ್ ಕೇಳಿದ್ರೆ, ಕೇವಲ 40 ಮಾತ್ರ ಸಿಗ್ತಾ ಇದ್ದು, ಇದರಿಂದ ವ್ಯಾಪರಕ್ಕೂ ತೊಂದ್ರೆಯಾಗ್ತಿದೆಂದು ಬಾರ್ ಅಂಡ್ ರೆಸ್ಟೋರೆಂಟ್ ನವರು ಅಳಲು ತೊಡ್ಕೊಂಡಿದ್ದಾರೆ.

ಇದನ್ನೂ ಓದಿ:ರೋಹಿತ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ವಾಚ್​​ಗಳು.. ಮೊನ್ನೆ ಕಟ್ಟಿದ್ದ ವಾಚ್​ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!

ಒಟ್ಟಿನಲ್ಲಿ ಒಂದು ಕಡೆ ಬೇಸಿಗೆಯಲ್ಲಿ ತಣ್ಣಗಾಗಲು ಬಿಯರ್ ಮೊರೆ ಹೋಗ್ತಿರೋರ ಸಂಖ್ಯೆ ಹೆಚ್ಚಾಗಿದ್ರೆ, ಮತ್ತೊಂದು ಕಡೆಯಲ್ಲಿ ಉತ್ಪಾದನೆ ಕುಂಠಿತವಾಗಿದೆ. ಪರಿಸ್ಥಿತಿ ಹೀಗೆ ಮುಂದೆವರೆದರೆ ಮುಂದಿನ ದಿನದಲ್ಲಿ ಬಿಯರ್ ಗೂ ಅಭಾವ ಎದುರಾಗಲಿದ್ದು, ಮದ್ಯಪ್ರಿಯರಿಗೆ ಶಾಕ್ ಎದುರಾಗೋದು ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದ್ಯಪ್ರಿಯರಿಗೆ ಎಣ್ಣೆ ಆಘಾತ..! ಬೆಂಗಳೂರಲ್ಲೇ ಯಾಕೆ ಹೀಗೆ ಆಗ್ತಿದೆ..!

https://newsfirstlive.com/wp-content/uploads/2024/05/beer-1.jpg

Load More