Advertisment

ಬೆಂಗಳೂರು: ಬಾತ್ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ PUC ವಿದ್ಯಾರ್ಥಿನಿ ಮೃತದೇಹ.. ಸಾವಿನ ಸುತ್ತ ಅನುಮಾನದ ಹುತ್ತ

author-image
AS Harshith
Updated On
ಪ್ರಬುದ್ಧ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​; ಎಲ್ಲರ ಕಣ್ಣು ತಪ್ಪಿಸಲು ಅಪ್ರಾಪ್ತ ಬಾಲಕ ಮಾಡಿದ್ದ ಸಖತ್​ ಪ್ಲಾನ್
Advertisment
  • ಬೆಂಗಳೂರಲ್ಲೊಂದು ಬೆಚ್ಚಿ ಬೀಳಿಸಿದ ಪ್ರಕರಣ
  • ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ 21 ವರ್ಷದ ವಿದ್ಯಾರ್ಥಿನಿ ಮೃತದೇಹ
  • ಮನೆಯ ಬಾತ್​ ರೂಂನಲ್ಲಿ ಹೆಣವಾಗಿ ಬಿದ್ದಿದ್ದ ಪಿಯುಸಿ ವಿದ್ಯಾರ್ಥಿನಿ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಪ್ರಕರಣ ಎಲ್ಲರನ್ನು ಕಣ್ಣೀರ ಕಡಲಲ್ಲಿ ತೇಲಿಸಿದ ಬೆನ್ನಲ್ಲೇ, ಇದೀಗ ಬೆಂಗಳೂರಿನಲ್ಲಿ​ ಯುವತಿಯೊಬ್ಬಳ ಅನುಮಾನಾಸ್ಪದ ಸಾವು ಎಲ್ಲರನ್ನು ಬೆಚ್ಚಿ ಬೀಳಿಸಿದೆ. 21 ವರ್ಷ ವಯಸ್ಸಿನ ಪ್ರಭುದ್ಧ ಎಂಬ ಯುವತಿ ಸಾವನ್ನಪ್ಪಿದ್ದಾಳೆ.

Advertisment

ಪ್ರಭುದ್ಧ  ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಈಕೆಯ ಶವ ಪತ್ತೆಯಾಗಿದೆ. ನಿನ್ನೆ ಸಂಜೆ ನಡೆದಿರುವ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ

ಪ್ರಭುದ್ಧ ಈ ಹಿಂದೆ ಎರಡು-ಮೂರು ಬಾರಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದೀಗ ಮನೆಯಲ್ಲಿ ಯಾರು ಇಲ್ಲದ ವೇಳೆ ಚಾಕುವಿನಿಂದ ಕುತ್ತಿಗೆ ಹಾಗೂ ಕೈಯನ್ನ ಕೊಯ್ದುಕೊಂಡಿದ್ದಾಳೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ಸಾವು.. ಮರಳು ತುಂಬಿದ್ದ ಲಾರಿಗೆ ಗುದ್ದಿದ ಬೊಲೆರೊ ಸಂಪೂರ್ಣ ನಜ್ಜುಗುಜ್ಜು

Advertisment

ಘಟನೆ ನಡೆದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ತಾಯಿ ಹೊರಗೆ ಕೆಲಸಕ್ಕೆ ಹೋಗಿದ್ರು. ಮೃತಳ ತಮ್ಮ ಮನೆಗೆ ಬಂದು ನೋಡಿದಾಗ ಸಹೋದರಿ ಪ್ರಭುದ್ಧ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸರಿಂದ ಅನುಮಾನಾಸ್ಪದ ಸಾವು ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಸೇದಲು ಬೀಡಿ ಕೇಳಿದ್ದಕ್ಕೆ ಕೊಟ್ಟಿಲ್ಲ.. ಕೋಪದಲ್ಲಿ ಥಳಿಸಿ ಕೊಂದೇ ಬಿಟ್ಟ

ಸದ್ಯ ಪೊಲೀಸರು ಮೃತ ಯುವತಿಯ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ವಿದ್ಯಾಭ್ಯಾಸದ ವಿಚಾರಕ್ಕೆ ಸಾವನ್ನಪ್ಪಿದ್ದಾಳಾ ಅಥವಾ ಬೇರೆ ಕಾರಣ ಇದೆಯಾ? ಅನ್ನೋ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment