ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಮಹಿಳೆಗೆ ಫೈನ್
ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ
ಬೆಂಗಳೂರು: ಗಾಡಿ ಓಡಿಸುವಾಗ ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ರೋ ಎಂದು ಪೊಲೀಸರು ಪದೇ ಪದೆ ಹೇಳ್ತಾರೆ. ಸರ್ಕಾರ ಕೂಡ ಜಾಗೃತಿ ಕಾರ್ಯಕ್ರಮ ಕೂಡ ಮಾಡ್ತಿದೆ. ಹೀಗಿದ್ದೂ ಕೆಲವರು ಮಾತೇ ಕೇಳಲ್ಲ ಅಂತಾರೆ! ಅದರಂತೆ ಬೆಂಗಳೂರಲ್ಲಿ ಮಹಿಳೆಯೋರ್ವಳು ಗಾಡಿ ಓಡಿಸುವಾಗ ಫೋನ್ನಲ್ಲಿ ಮಾತನಾಡಲು ಎಕ್ಸ್ಟ್ರಾಡಿನರಿ ಪ್ಲಾನ್ ಮಾಡಿದ್ದ ಲೇಡಿ ಸಿಕ್ಕಿಬಿದ್ದಾಳೆ!
ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿತ್ತು. ಸ್ಕೂಟಿ ಓಡಿಸುತ್ತಿದ್ದ ಮಹಿಳೆ ಫೋನ್ನಲ್ಲಿ ಮಾತನಾಡುತ್ತ ಹೋಗುತ್ತಿದ್ದಳು. ತಲೆಗೆ ವೇಲ್ (ದುಪ್ಪಟ್ಟ) ಬಿಗಿದು, ಕಿವಿಯೊಳಗೆ ಮೊಬೈಲ್ ಸಿಕ್ಕಿಸಿಕೊಂಡು ಮಾತನಾಡುತ್ತ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ಸ್ಕೂಟಿ ಓಡಿಸ್ತಿದ್ದಳು.
ಇದನ್ನೂ ಓದಿ: ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್.. ಕಾರಣ ಇಲ್ಲಿದೆ
ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ವಿಡಿಯೋವನ್ನು ಸೋಶಿಯಲ್ ಮೀಡಿಯಾ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಹೆಲ್ಮೆಟ್ ಇಲ್ಲದೇ ಮೊಬೈಲ್ನಲ್ಲಿ ಮಾತನಾಡುತ್ತ ಹೋಗ್ತಿದ್ದ ಮಹಿಳೆಯನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ. ತನಿಖೆ ವೇಳೆ ಗಾಡಿಗೆ ಇನ್ಶ್ಯುರೆನ್ಸ್, ಲೈಸೆನ್ಸ್ ಕೂಡ ಇಲ್ಲದಿರೋದು ಗೊತ್ತಾಗಿದೆ. ಹೀಗಾಗಿ ಪೊಲೀಸರು 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ