newsfirstkannada.com

ಭವಾನಿ ರೇವಣ್ಣ ಎಲ್ಲಿದ್ದಾರೆ? ಪ್ರಜ್ವಲ್ ಅರೆಸ್ಟ್ ಬೆನ್ನಲ್ಲೇ SITಯಿಂದ ಬಂಧನದ ಭೀತಿ

Share :

Published May 31, 2024 at 12:56pm

  ಹಾಸನದ ಹೊಳೆನರಸೀಪುರದಲ್ಲೂ ಇಲ್ಲ, ಇತ್ತ ಮೈಸೂರಲ್ಲೂ ಇಲ್ಲ!

  ಭವಾನಿ ರೇವಣ್ಣ ಅವರನ್ನು ವಿಚಾರಣೆ ನಡೆಸಲು SIT ತೀರ್ಮಾನ

  ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ಭವಾನಿ ರೇವಣ್ಣ?

ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಆದ ಪೆನ್‌ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಗಿದೆ. ಪ್ರಜ್ವಲ್ ಅರೆಸ್ಟ್ ಬೆನ್ನಲ್ಲೇ SIT ಅಧಿಕಾರಿಗಳು ಭವಾನಿ ರೇವಣ್ಣ ಅವರಿಗೂ ಬಿಗ್ ಶಾಕ್ ಕೊಟ್ಟಿದ್ದಾರೆ. SIT ಸಮನ್ಸ್ ನೀಡಿದ್ದು ಬಂಧನದ ಭೀತಿಯಲ್ಲಿ ಭವಾನಿ ರೇವಣ್ಣ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಮೈಸೂರು ಕೆ.ಆರ್. ನಗರ ಠಾಣೆಯಲ್ಲಿ ಮಹಿಳೆಯ ಕಿಡ್ನಾಪ್ ಕೇಸ್‌ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ನಾಳೆ ಭವಾನಿ ರೇವಣ್ಣ ಅವರನ್ನು ವಿಚಾರಣೆ ನಡೆಸಲು SIT ತೀರ್ಮಾನಿಸಿದೆ. ಅಲ್ಲದೇ ವಿಶೇಷ ತನಿಖಾ ತಂಡದಿಂದ ಭವಾನಿ ರೇವಣ್ಣಗೆ ಮತ್ತೊಂದು ನೋಟಿಸ್ ಜಾರಿ ಮಾಡಲಾಗಿದೆ. ಈ ಹಿಂದೆ ನೀಡಿದ್ದ ನೋಟಿಸ್‌ಗೆ ನೀವು ಉತ್ತರಿಸಿಲ್ಲ. ಈ ಪ್ರಕರಣದಲ್ಲಿ ನಿಮ್ಮ ವಿಚಾರಣೆಗೆ ಒಳಪಡುವ ಅವಶ್ಯಕತೆ ಇದೆ. ಆದ್ದರಿಂದ 01-06-24 ರಂದು ಖುದ್ದು ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: ಪ್ರಜ್ವಲ್​ ರೇವಣ್ಣ ಅರೆಸ್ಟ್​.. ಹಾಸನದಲ್ಲಿ ಪೆನ್​ಡ್ರೈವ್ ಹಂಚಿಕೆಯಿಂದ ಈವರೆಗೆ ಏನೆಲ್ಲ ಆಯ್ತು? ಹೈಲೈಟ್ಸ್..! 

ಕೆ.ಆರ್ ನಗರದ ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ 15-05-24ರಂದು ಸಮನ್ಸ್ ನೀಡಿದ್ದ ಎಸ್‌ಐಟಿ ಜೂನ್ 1ರಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿತ್ತು. ಎಸ್‌ಐಟಿಗೆ ಪತ್ರ ಬರೆದಿದ್ದ ಭವಾನಿ ರೇವಣ್ಣ ಅವರು ಅವಶ್ಯವಿದ್ದರೆ ತನಿಖೆಗೆ ತಮ್ಮ ಚೆನ್ನಾಂಬಿಕಾ ಮನೆಯಲ್ಲಿ ಲಭ್ಯವಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಾಳೆಯೇ ಭವಾನಿ ರೇವಣ್ಣ ಅವರು ವಿಚಾರಣೆಗೆ ಹಾಜರಾಗಬೇಕಿದೆ.

ಎಲ್ಲಿದ್ದಾರೆ ಭವಾನಿ ರೇವಣ್ಣ?
ವಿಶೇಷ ತನಿಖಾ ತಂಡದಿಂದ ನೋಟಿಸ್ ಜಾರಿಯಾದ ಬಳಿಕ ಭವಾನಿ ರೇವಣ್ಣ ಅವರು ಎಲ್ಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಅತ್ತ ಹಾಸನದಲ್ಲೂ ಇಲ್ಲ, ಇತ್ತ ಮೈಸೂರಲ್ಲೂ ಇಲ್ಲ. ಪ್ರಜ್ವಲ್‌ ಪ್ರಕರಣ‌ ಬೆಳಕಿಗೆ ಬಂದಾಗ ಭವಾನಿ ರೇವಣ್ಣ ಅವರು ಹಾಸನದ ಹೊಳೆನರಸೀಪುರದಲ್ಲೇ ವಾಸ್ತವ್ಯ ಹೂಡಿದ್ದರು. ಕೆ.ಆರ್‌ ನಗರ ಮಹಿಳೆ ಕಿಡ್ನಾಪ್‌ ಪ್ರಕರಣ ಬೆಳಕಿಗೆ ಬಂದ ಬಳಿಕ ಹೊಳೆನರಸೀಪುರದಲ್ಲಿ ಇಲ್ಲ ಎನ್ನಲಾಗಿದೆ.

ಭವಾನಿ ರೇವಣ್ಣ ಅವರ ತವರು ಮನೆ ಮೈಸೂರು ಜಿಲ್ಲೆ ಕೆ.ಆರ್ ನಗರದ ಸಾಲಿಗ್ರಾಮದಲ್ಲಿದೆ. ಇದೀಗ ಈ ಮನೆಗೂ ಬೀಗ ಹಾಕಲಾಗಿದೆ. ಯಾರೂ ಮನೆಯಲ್ಲಿರದೆ ಬೃಹತ್ ಬಂಗಲೆ ಖಾಲಿ ಖಾಲಿಯಾಗಿದೆ. ಸಾಲಿಗ್ರಾಮದ ತವರು ಮನೆ ಕೂಡ ಖಾಲಿ, ಖಾಲಿಯಾಗಿದೆ.

ಇದನ್ನೂ ಓದಿ: VIDEO: ಮಹಿಳಾ SIT ಅಧಿಕಾರಿಗಳಿಂದ ಪ್ರಜ್ವಲ್ ರೇವಣ್ಣ​ ಅರೆಸ್ಟ್​.. ಇದರ ಹಿಂದೆ ಮತ್ತೊಂದು ಕಾರಣ 

ಭವಾನಿ ರೇವಣ್ಣ ಅವರು ಇದ್ದಕ್ಕಿದ್ದಂತೆ ಸಾಲಿಗ್ರಾಮದ ಮನೆಯಿಂದಲೂ ನಾಪತ್ತೆಯಾಗಿದ್ದಾರೆ. ಕಳೆದ ಒಂದು ವಾರದಿಂದ ಈ ಮನೆ ಖಾಲಿಯಾಗಿದೆ. ಒಂದು ವಾರಕ್ಕೆ ಮುಂಚೆ ಸಾಲಿಗ್ರಾಮಕ್ಕೆ ಬಂದಿದ್ದ ಭವಾನಿ ರೇವಣ್ಣ ಅವರು ಬಂಧನದ ಭೀತಿಯಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭವಾನಿ ರೇವಣ್ಣ ಎಲ್ಲಿದ್ದಾರೆ? ಪ್ರಜ್ವಲ್ ಅರೆಸ್ಟ್ ಬೆನ್ನಲ್ಲೇ SITಯಿಂದ ಬಂಧನದ ಭೀತಿ

https://newsfirstlive.com/wp-content/uploads/2024/05/Bhavani-Revanna.jpg

Load More