ಸದ್ಯ ನಡೆಯುತ್ತಿರೋ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ
ಐಪಿಎಲ್ನಲ್ಲಿ 38 ವರ್ಷದ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಅಬ್ಬರ!
ಟಿ20 ವಿಶ್ವಕಪ್ಗೆ ಮುನ್ನವೇ ರಾಹುಲ್, ಪಂತ್, ಸ್ಯಾಮ್ಸನ್ಗೆ ಬಿಗ್ ಶಾಕ್
ಸದ್ಯ ನಡೆಯುತ್ತಿರೋ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 38 ವರ್ಷದ ಸ್ಟಾರ್ ಫಿನಿಶರ್ ದಿನೇಶ್ ಕಾರ್ತಿಕ್ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅದ್ಭುತ ಶಾಟ್ಗಳ ಬಾರಿಸೋ ಮುನ್ನ ಸಖತ್ ಎಂಟರ್ಟೈನ್ ಮಾಡುತ್ತಿದ್ದಾರೆ. ಅದರಲ್ಲೂ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೇವಲ 23 ಬಾಲ್ನಲ್ಲಿ 4 ಸಿಕ್ಸರ್, 5 ಫೋರ್ ಸಮೇತ 53 ರನ್ ಸಿಡಿಸಿದ್ರು. ಇದಾದ ಬೆನ್ನಲ್ಲೇ ನಡೆದ ಹೈದರಾಬಾದ್ ವಿರುದ್ಧ ಪಂದ್ಯದಲ್ಲೂ ತಾನು ಆಡಿದ ಕೇವಲ 35 ಬಾಲ್ನಲ್ಲಿ ದಿನೇಶ್ ಕಾರ್ತಿಕ್ ಬರೋಬ್ಬರಿ 7 ಸಿಕ್ಸರ್, 3 ಫೋರ್ ಸಮೇತ 83 ರನ್ ಸಿಡಿಸಿದ್ರು. ಹೀಗಾಗಿ ದಿನೇಶ್ ಕಾರ್ತಿಕ್ ಈ ಬಾರಿ ನಡೆಯಲಿರೋ 2024ರ ಟಿ20 ವಿಶ್ವಕಪ್ ಆಡ್ತಾರಾ? ಅನ್ನೋ ಚರ್ಚೆ ಶುರುವಾಗಿದೆ.
38 ವರ್ಷದ ದಿನೇಶ್ ಕಾರ್ತಿಕ್ ಈ ಸೀಸನ್ನಲ್ಲಿ ಇದುವರೆಗೂ ಆಡಿರೋ 6 ಪಂದ್ಯಗಳಲ್ಲಿ 226 ರನ್ ಗಳಿಸಿದ್ದಾರೆ. 75ಕ್ಕೂ ಹೆಚ್ಚು ಬ್ಯಾಟಿಂಗ್ ಆವರೇಜ್ ಇದ್ದು, ಸ್ಟ್ರೈಕ್ ರೇಟ್ ಮಾತ್ರ 200ರ ಗಡಿ ದಾಟಿದೆ. ಈ ಮಧ್ಯೆ ದಿನೇಶ್ ಅವರನ್ನು ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.
ಈ ಹಿಂದೆ ಆರ್ಸಿಬಿ ಪರ ಅದ್ಭುತ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್ಗೆ ಆಯ್ಕೆಯಾಗಿದ್ದರು. ಈಗ 2024ರ ಟಿ20 ವಿಶ್ವಕಪ್ ಸದ್ಯದಲ್ಲೇ ನಡೆಯಲಿದ್ದು, ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಸ್ಥಾನ ಪಡೆಯೋದು ಗ್ಯಾರಂಟಿ ಅನ್ನೋ ಮಾತುಗಳು ಕೇಳಿ ಬಂದಿವೆ.
ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರು ಟಿ20 ವಿಶ್ವಕಪ್ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪ್ರಸ್ತುತ ರೇಸ್ನಲ್ಲಿದ್ದಾರೆ. ಈ ಮಧ್ಯೆ ದಿನೇಶ್ ಕಾರ್ತಿಕ್ ಕೂಡ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಲು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಗೆ ಖಡಕ್ ಎಚ್ಚರಿಕೆ ನೀಡಿದ್ದು, ಇತ್ತ ಕೆ.ಎಲ್ ರಾಹುಲ್, ರಿಷಬ್ ಪಂತ್ಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಇದನ್ನೂ ಓದಿ: T20 ವಿಶ್ವಕಪ್ನಿಂದ ಸ್ಟಾರ್ ಪ್ಲೇಯರ್ ಶುಭ್ಮನ್ ಗಿಲ್ ಔಟ್; ಅಸಲಿ ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್