newsfirstkannada.com

ಕೊಹ್ಲಿ, ರೋಹಿತ್​​ಗೆ ಎಚ್ಚರಿಕೆ ಕೊಟ್ಟ ಬಾಂಗ್ಲಾದೇಶದ ತ್ರಿಮೂರ್ತಿಗಳು..!

Share :

Published August 27, 2024 at 11:24am

Update August 28, 2024 at 9:38am

    ದುಲೀಪ್ ಟ್ರೋಫಿಯಿಂದ ದೂರ.. ಭವಿಷ್ಯ ಏನು?

    ಭಾರತದಲ್ಲಿ ಚಮಕ್ ಕೊಡ್ತಾರಾ ತ್ರಿವಳಿಗಳು..?

    ಟೀಮ್ ಇಂಡಿಯಾಗೆ ಶುರುವಾಯ್ತು ಢವಢವ

ಪಾಕಿಸ್ತಾನ ಎದುರು ಬಾಂಗ್ಲಾದೇಶ ತಂಡ ಟೆಸ್ಟ್​ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ರಾವಲ್ಪಿಂಡಿಯಲ್ಲೇ ಪಾಕ್​​ಗೆ ಮಣ್ಣು ಮುಕ್ಕಿಸಿದೆ. ಈ ಗೆಲುವು ಬಾಂಗ್ಲಾದೇಶ ಸಂಭ್ರಮಕ್ಕೆ ಕಾರಣವಾಗಿದ್ರೆ, ಟೀಮ್ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಮುಖ್ಯವಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗೆ ಬಾಂಗ್ಲಾ ಟೈಗರ್ಸ್​​ ಡೈರೆಕ್ಟ್​ ವಾರ್ನಿಂಗ್​ ರವಾನಿಸಿದ್ದಾರೆ.

ಪಾಕಿಸ್ತಾನ ಎದುರು ಟೆಸ್ಟ್​ನಲ್ಲಿ, ಅದೂ ಪಾಕಿಸ್ತಾನದಲ್ಲಿ, ಬಾಂಗ್ಲಾದೇಶ ಗೆಲ್ಲೋದನ್ನ ಯಾವೊಬ್ಬ ಕ್ರಿಕೆಟ್ ಪಂಡಿತ ಕೂಡ ಊಹಿಸಿರಲಿಲ್ಲ. ಬಾಂಗ್ಲಾ ತಂಡದ ಬೊಂಬಾಟ್ ಪ್ರದರ್ಶನಕ್ಕೆ ಪತರಗುಟ್ಟಿದ ಪಾಕ್, ತವರಿನಲ್ಲೇ ಮುಖಭಂಗ ಅನುಭವಿಸಿದೆ. ಅದು ಅಂತಿಂಥಾ ಸೋಲಲ್ಲ.. 10 ವಿಕೆಟ್​ಗಳ ಸೋಲು.. ತವರಿನಲ್ಲೇ ಇದುವರೆಗೆ 10 ವಿಕೆಟ್​ಗಳ ಸೋಲನ್ನೇ ಕಾಣದ ಪಾಕ್​​ಗೆ ಇದು ಅಕ್ಷರಶಃ ಅಪಮಾನ.
ಪಾಕಿಸ್ತಾನಕ್ಕೆ ಇದು ಅವಮಾನ. ಆದ್ರೆ, ಪಾಕ್​​ಗೆ ಎದುರಾದ ಈ ಸೋಲು ಟೀಮ್ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಪಾಕ್ ಪ್ರವಾಸದಲ್ಲಿರುವ ಬಾಂಗ್ಲಾ, ಈ ಸರಣಿ ಮುಕ್ತಾಯದ ಬೆನಲ್ಲೇ ಭಾರತ ಪ್ರವಾಸ ಕೈಗೊಳ್ಳಲಿದೆ. ಭಾರತದ ನೆಲದಲ್ಲಿ 2 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲಿದೆ. ಪಾಕ್​ ಕೊಟ್ಟಂತೆ ಟೀಮ್​ ಇಂಡಿಯಾಗೆ ಶಾಕ್​ ಕೊಡೋ ಲೆಕ್ಕಾಚಾರದಲ್ಲಿದೆ.

ಇದನ್ನೂ ಓದಿ:ರೋಹಿತ್ ಮುಂದೆ ನಡೆಯದ ಕೊಹ್ಲಿ ಆಟ.. ಹಿಟ್​ಮ್ಯಾನ್ ದಶಕದ ಕನಸು ನನಸು..!

ಟೀಮ್ ಇಂಡಿಯಾಗೆ ಶುರುವಾಯ್ತು ಢವಢವ
ಪಾಕ್​ ಎದುರು ಬಾಂಗ್ಲಾ ಗೆಲುವಿಗೆ ಕಾರಣವೇ ಬಾಂಗ್ಲಾದ ಸ್ಪಿನ್ ಅಸ್ತ್ರ. ಪ್ರಮುಖ ಸ್ಪಿನ್ನರ್​ ತೇಜುಲ್ ಇಸ್ಲಾಂ ಅನುಪಸ್ಥಿತಿಯಲ್ಲಿ ಬಾಂಗ್ಲಾ ಅಷ್ಟು ಕರಾರುವಕ್​ ದಾಳಿ ಸಂಘಟಿಸಿತು. 2ನೇ ಇನ್ನಿಂಗ್ಸ್​ನಲ್ಲಿ ಮೆಹಿದಿ ಹಸನ್ ಮಿರಜ್ ಹಾಗೂ ಶಕೀಬ್ ಅಲ್​ ಹಸನ್ ಸ್ಪಿನ್ ದಾಳಿಗೆ ವಿಲವಿಲ ಅಂತಾ ಒದ್ದಾಡಿದ ಪಾಕ್​, ಹೀನಾಯವಾಗಿ ಸೋಲು ಒಪ್ಪಿಕೊಳ್ತು. ಈ ಸ್ಪಿನ್ನರ್​ಗಳೇ ಟೀಮ್ ಇಂಡಿಯಾಗೆ ಮುಪ್ಪಾಗ್ತಾರಾ ಅನ್ನೋ ಚರ್ಚೆ ಇದೀಗ ಶುರುವಾಗಿದೆ.

ಟೀಮ್ ಇಂಡಿಯಾಗೆ ಸ್ಪಿನ್ ವೀಕ್ನೆಸ್
ಟೀಮ್ ಇಂಡಿಯಾ ಸದ್ಯ ಸ್ಪಿನ್​​ ವೀಕ್ನೆಸ್​​ನಿಂದ ಬಳಲುತ್ತಿದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಈ ಹಿಂದಿನ ಶ್ರೀಲಂಕಾ ಸರಣಿ. ಲಂಕಾ ಪ್ರವಾಸದಲ್ಲಿ ಇಂಡಿಯನ್​ ಬ್ಯಾಟರ್ಸ್​ ಸ್ಪಿನ್​ ಎದುರು ತಿಣುಕಾಡಿದ್ರು. ಈ ತಿಣುಕಾಟವೇ ಅಂತಿಮವಾಗಿ ಹೀನಾಯ ಸರಣಿ ಸೋಲಿಗೆ ಕಾರಣವಾಯ್ತು.

ರೋಹಿತ್ ಅಂಡ್ ವಿರಾಟ್​ಗೆ ಟ್ರಬಲ್ ಫಿಕ್ಸ್​
2020ರ ಬಳಿಕ ಟೀಮ್ ಇಂಡಿಯಾದ ಮೇನ್ ಪಿಲ್ಲರ್​ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೂಡ ಸ್ಪಿನ್​ ಬಲೆಯಲ್ಲಿ ನರಳ್ತಿದ್ದಾರೆ. ಮಾಡ್ರನ್ ಡೇ ಬ್ಯಾಟರ್​ಗಳಾಗಿ 2020ರಿಂದ ಅತಿ ಹೆಚ್ಚು ಬಾರಿ ಸ್ಪಿನ್ನರ್​​ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ರೋಹಿತ್ ಆ್ಯಂಡ್ ವಿರಾಟ್​ಗೂ ಬಾಂಗ್ಲಾ ಸ್ಪಿನ್ನರ್​​ಗಳು ಟ್ರಬಲ್ ಆಗ್ತಾರಾ ಎಂದು ಆತಂಕ ಶುರುವಾಗಿದೆ.

ಇದನ್ನೂ ಓದಿ:KL ರಾಹುಲ್ ಆರ್ಭಟದ ಮುಂದೆ ಮಂಕಾಗಿದ್ದ ಧವನ್; ‘ರಾಹುಲ್​​ ವಿಲನ್ ಆದರು’ ಎಂದ ಫ್ಯಾನ್ಸ್..!

2020ರಿಂದ ಸ್ಪಿನ್ ಎದುರು ಕೊಹ್ಲಿ-ರೋಹಿತ್
2020ರಿಂದ ವಿರಾಟ್ ಕೊಹ್ಲಿ​, ಸ್ಪಿನ್ನರ್​ಗಳ ಎದುರು ಆಡಿದ 31 ಇನ್ನಿಂಗ್ಸ್​ಗಳಿಂದ 680 ರನ್ ಗಳಿಸಿದ್ದು, ಬರೋಬ್ಬರಿ 21 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ರೋಹಿತ್ ಶರ್ಮಾ 32 ಇನ್ನಿಂಗ್ಸ್​​ಗಳಿಂದ 810 ರನ್ ಗಳಿಸಿದ್ದು, 20 ಸಲ ಸ್ಪಿನ್ ಖಡ್ಡಾಗೆ ಸಿಲುಕಿದ್ದಾರೆ. ಒಟ್ಟಾರೆಯ ಲೆಕ್ಕ, ಇನ್ನು ಭಾರತದ ಪಿಚ್​ನಲ್ಲಿ ಇವರಿಬ್ಬರ ಆಟ ಮತ್ತಷ್ಟು ಸ್ಪಿನ್​ ಎದುರು ಮತ್ತಷ್ಟು ಕಳಪೆಯಾಗಿದೆ.

2020ರಿಂದ ಭಾರತದಲ್ಲಿ ಸ್ಪಿನ್ ಎದುರು ಕೊಹ್ಲಿ-ರೋಹಿತ್
2020ರಿಂದ ಭಾರತದಲ್ಲಿ 17 ಇನ್ನಿಂಗ್ಸ್​ಗಳಲ್ಲಿ 454 ರನ್ ಗಳಿಸಿರುವ ವಿರಾಟ್, 15 ಬಾರಿ ಸ್ಪಿನ್​ಗೆ ಔಟಾಗಿದ್ದಾರೆ. ರೋಹಿತ್ 22 ಇನ್ನಿಂಗ್ಸ್​ಗಳಿಂದ 662 ರನ್ ಗಳಿದ್ದು, 16 ಸಲ ಸ್ಪಿನ್​ ಖೆಡ್ಡಾಗೆ ಬಿದ್ದಿದ್ದಾರೆ. ಕೆ.ಎಲ್.ರಾಹುಲ್, ಶುಭ್​ಮನ್​ ಗಿಲ್​ ಕೂಡ ಸ್ಪಿನ್ನರ್​ಗಳ ಎದುರು ಪರದಾಡಿದ್ದಾರೆ. ಒಂದೆಡೆ, ಟೀಮ್ ಇಂಡಿಯಾ ಸ್ಪಿನ್ ವೀಕ್ನೆಸ್​ನಿಂದ ಪರದಾಡ್ತಿದ್ರೆ, ಅತ್ತ ಬಾಂಗ್ಲಾ ಬತ್ತಳಿಕೆಯಲ್ಲಿ ಸ್ಪಿನ್ನರ್​ಗಳೇ ಮ್ಯಾಚ್ ವಿನ್ನರ್​​ಗಳಾಗಿದ್ದಾರೆ. ಪಾಕ್ ಎದುರಿನ ಪಂದ್ಯ ಮಾತ್ರವಲ್ಲ.. 2023ರಿಂದ ಸಾಲಿಡ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್​​ಗೆ ಮಾತ್ರ ವಾರ್ನಿಂಗ್.. ಬುಮ್ರಾ ವಿಚಾರದಲ್ಲಿ ಸೈಲೆಂಟ್.. BCCI ಅಸಲಿ ಕತೆ ರಿವೀಲ್..!

WTCನಲ್ಲಿ ಬಾಂಗ್ಲಾ ಸ್ಪಿನ್ನರ್ಸ್
2023-25ರ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​​ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ತೇಜುಲ್ ಇಸ್ಲಾಂ 18 ವಿಕೆಟ್ ಉರುಳಿಸಿದ್ರೆ ಮೆಹಿದಿ ಹಸನ್ 5 ಪಂದ್ಯಗಳಿಂದ 18 ವಿಕೆಟ್ ಉರುಳಿಸಿದ್ದಾರೆ. ಶಕೀಬ್ ಅಲ್ ಹಸನ್ 2 ಪಂದ್ಯಗಳಿಂದ 8 ವಿಕೆಟ್ ಉರುಳಿಸಿದ್ದಾರೆ.

ಭಾರತದಲ್ಲಿ ಚಮಕ್..?
ಭಾರತ ಹಾಗೂ ಬಾಂಗ್ಲಾ ಪಿಚ್ ಕಂಡೀಷನ್ಸ್​ ಒಂದೇ. ಆದ್ರೆ ಟೀಮ್ ಇಂಡಿಯಾಗೆ ಹೋಲಿಸಿದ್ರೆ ಬಾಂಗ್ಲಾ ಟೆಸ್ಟ್​ ಸರಣಿಯನ್ನಾಡಿ ಭಾರತಕ್ಕೆ ಕಾಲಿಡ್ತಿದೆ. ಟೀಮ್ ಇಂಡಿಯಾ ಪರ ಕೆಲ ಆಟಗಾರರು ತಯಾರಿಗಾಗಿ ದುಲೀಪ್ ಟ್ರೋಪಿ ಆಡ್ತಿದ್ರೆ, ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ನೇರವಾಗಿ ಅಗ್ನಿಪರೀಕ್ಷೆಗೆ ಧುಮುಕುತ್ತಿದ್ದಾರೆ. ಭಾರತದ ಪಿಚ್​ಗಳು ಸ್ಪಿನ್​ಗೆ ಹೆಚ್ಚು ಸಹಾಯಕಾರಿ ಬೇರೆ. ಹೀಗಾಗಿ ಸಾಲಿಡ್​ ಫಾರ್ಮ್​ನಲ್ಲಿರೋ ಬಾಂಗ್ಲಾ ಸ್ಪಿನ್ನರ್ಸ್​, ಭಾರತದ ಬ್ಯಾಟರ್ಸ್​ಗೆ ಸವಾಲಾಗೋದ್ರಲ್ಲಿ ಅನುಮಾನ ಇಲ್ಲ.

ಇದನ್ನೂ ಓದಿ:16 ಬಾರಿ ಮೂಳೆ ಮುರಿತ, 8 ಸಲ ಸರ್ಜರಿ.. ಆದರೂ ಛಲ ಬಿಡಲಿಲ್ಲ; IAS ಅಧಿಕಾರಿಯಾದ ಯಶೋಗಾಥೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ, ರೋಹಿತ್​​ಗೆ ಎಚ್ಚರಿಕೆ ಕೊಟ್ಟ ಬಾಂಗ್ಲಾದೇಶದ ತ್ರಿಮೂರ್ತಿಗಳು..!

https://newsfirstlive.com/wp-content/uploads/2023/07/Rohit_Kohli_Test-1.jpg

Load More