Advertisment

ಅಪ್ಪ ಐ ಲವ್ ಯು ಪಾ.. ಡ್ರೋನ್​ ಪ್ರತಾಪ್ ಜೀವನದಲ್ಲಿ ಹೊಸ ಬೆಳಕು; ಈ ಪುಣ್ಯ ಕಿಚ್ಚನಿಗೆ ಹೋಗಲಿ ಎಂದ ಫ್ಯಾನ್ಸ್​!

author-image
Veena Gangani
Updated On
ಒಂದೇ ವೇದಿಕೆ ಮೇಲೆ ಬಿಗ್​ಬಾಸ್​ ಸ್ಪರ್ಧಿಗಳ ದರ್ಬಾರ್;​ ಡ್ರೋನ್​ ಪ್ರತಾಪ್​, ರಕ್ಷಕ್ ಬುಲೆಟ್ ಹವಾ!
Advertisment
  • ತಮ್ಮ ಮುಗ್ಧ ನಗುವಿನಿಂದಲೇ ಕರ್ನಾಟಕ ಜನತೆಯ ಮನಸ್ಸು ಗೆದ್ದ ಡ್ರೋನ್
  • ಯಾರ ದೃಷ್ಟಿ ಕೂಡ ನಿಮ್ಮ ಮೇಲೆ ಬೀಳದಿರಲಿ ಪ್ರತು ಎಂದ ಅಭಿಮಾನಿಗಳು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ ತಂದೆ, ಮಗನ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಬಿಗ್​ಬಾಸ್​ ಸೀಸನ್​​ 10ರ ಮಾಜಿ ಸ್ಪರ್ಧಿಯಾಗಿದ್ದ ಡ್ರೋನ್​​ ಪ್ರತಾಪ್​ ಅವರ ಸಮಾಜ ಸೇವೆ, ತನ್ನ ತಂದೆಗೆ ಸಹಾಯ ಮಾಡುವುದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Advertisment

ಇದನ್ನೂ ಓದಿ: ಲೋಕವೇ ಮೆಚ್ಚುವ ಕಾರ್ಯಕ್ಕೆ ಮುಂದಾದ ಡ್ರೋನ್​ ಪ್ರತಾಪ್​.. ಏನದು?

publive-image

ಹೌದು, ಬಿಗ್​ಬಾಸ್ ರಿಯಾಲಿಟಿ ಶೋ​ ಸ್ಪರ್ಧಿಗಳ ಬದುಕಿಗೆ ಹೊಸ ಸ್ಪರ್ಶ ಹಾಗೂ ಭರವಸೆ ನೀಡುತ್ತೆ. ಒಂದೇ ಒಂದು ಶೋನಿಂದ ಡ್ರೋನ್​ ಪ್ರತಾಪ್ ಅವರ ಬದುಕು ಬದಲಾಗಿ ಬಿಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಬೆಟ್ಟದಷ್ಟು ನೆಗೆಟಿವಿಟಿಯನ್ನ ಹೊತ್ತು ಬಿಗ್​​ಬಾಸ್​ ಮನೆಗೆ ಕಾಲಿಟ್ಟಿದ್ದ ಡ್ರೋನ್​ ಪ್ರತಾಪ್​, ತಮ್ಮ ವಿಭಿನ್ನ ವ್ಯಕ್ತಿತ್ವದ ಮೂಲಕ ಅದೆಷ್ಟೋ ಜನರ ಅಭಿಪ್ರಾಯಗಳನ್ನ ಬದಲಾಯಿಸಿದ್ದರು.

ಇದನ್ನೂ ಓದಿ:ಮುಡಾ ಕೇಸ್​; ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವ್ಯಾವ IPC ಸೆಕ್ಷನ್​ ಏನ್ ಹೇಳುತ್ತೆ?

ಅದೆಷ್ಟೋ ವರ್ಷಗಳಿಂದ ಕುಟುಂಬಸ್ಥರ ಜೊತೆಗೆ ಮಾತನ್ನು ಬಿಟ್ಟಿದ್ದ ಡ್ರೋನ್​ ಪ್ರತಾಪ್​ ಸದ್ಯ ತಂದೆ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಈಗ ನನ್ನ ದೇವರು ಅಪ್ಪಾ ಅಂತ ಬರೆದುಕೊಂಡು ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಪ್ರತಾಪ್​ ಗದ್ದೆಯಲ್ಲಿ ತಂದೆಯ ಜೊತೆಗೆ ಕೆಲಸ ಮಾಡುತ್ತಿದ್ದಾರೆ.

Advertisment

ತಂದೆಯ ಜೊತೆಗೆ ಕುಳಿತು ಊಟ ಮಾಡಿದ್ದಾರೆ. ಇದೇ ವಿಡಿಯೋ ನೋಡಿದ ನೆಟ್ಟಿಗರು, ಕೈ ಕೆಸರಾದರೆ ಮಾತ್ರ ಬಾಯಿ ಮೊಸರು ಆಗೋದು, ಕಷ್ಟ ಪಟ್ಟು ದುಡಿದು ತಂದೆಗೆ ತಕ್ಕ ಮಗ ಎಂದು ಅನಿಸಿಕೊಳ್ಳಿ ಪ್ರತಾಪ್, ನಮ್ಮ ಅಪ್ಪ ಅಮ್ಮನ ಜೊತೆ ಯಾವಾಗಲೂ ಹೀಗೆ ಖುಷಿಯಾಗಿ ಇರಿ, ನಿಜವಾದ ಮಣ್ಣಿನ ಮಗ, ಈ ಪುಣ್ಯ ಬಿಗ್​ಬಾಸ್ ಮತ್ತು ಕಿಚ್ಚ ಸುದೀಪ್ ಅವರಿಗೆ ಸಲ್ಲಬೇಕು ಅಂತ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment