/newsfirstlive-kannada/media/post_attachments/wp-content/uploads/2024/10/Dhanraj-achar-BBK11-3.jpg)
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಶುರುವಾಗಿ 4 ದಿನ ಕಳೆದಿದೆ. ಜೊತೆಗೆ ಮೊದಲ ವಾರದ ಅಂತ್ಯಕ್ಕೂ ಮುನ್ನವೇ ಬಿಗ್ ಬಾಸ್ನಲ್ಲಿ ನಾಮಿನೇಶನ್ ಬಿಸಿ ಜೋರಾಗಿದೆ. ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ. ಇದರ ನಡುವೆ ಜಗಳಗಳು ನಡೆಯುತ್ತಿವೆ.
ಚೈತ್ರಾ ಕುಂದಾಪುರ, ಗೌತಮಿ, ಭವ್ಯಾ, ಹಂಸ, ಶಿಶಿರ್, ಯಮುನಾ, ಜಗದೀಶ್, ಮಾನಸ, ಮೋಕ್ಷಿತಾ ಅವರು ಮೊದಲ ವಾರ ನಾಮಿನೇಟ್ ಆಗಿದ್ದಾರೆ. ಆದರೆ ನಾಮಿನೇಟ್ ಆದ ಸ್ಪರ್ಧಿಗಳಿಗೆ ಬಿಗ್ ಬಾಸ್ ಟಾಸ್ಕ್ವೊಂದನ್ನು ಕೊಟ್ಟಿದ್ದು, ಪಾರಾಗಲು ಮೊದಲ ಅವಕಾಶ ನೀಡಿದ್ದಾರೆ.
ಇದನ್ನೂ ಓದಿ: BBK11 ಮನೆಯಲ್ಲಿ ನಾಮಿನೇಷನ್ ತಾಪ; ಭವ್ಯ ಗೌಡ ವಿರುದ್ಧ ಮುಗಿಬಿದ್ದ ಸ್ಪರ್ಧಿಗಳು..!
ಧನ್ರಾಜ್ ಆಚಾರ್ ಟಾಸ್ಕ್ ರೆಫ್ರಿಯಾಗಿದ್ದು, ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್ ಸಂಯೋಜನೆ ಮಾಡಿದ್ದಾರೆ. ಆದರೆ ಈ ವೇಳೆ ಜಗದೀಶ್ ಮತ್ತು ಯಮುನಾ ಟಾಸ್ಕ್ ವೇಳೆ ಡಿಕ್ಕಿ ಹೊಡೆದಿದ್ದು, ಯಮುನಾ ನೆಲಕ್ಕೆ ಬಿದ್ದಿದ್ದಾರೆ. ಇಲ್ಲಿಂದ ಟಾಸ್ಕ್ ರೆಫ್ರಿ ಮತ್ತು ಜಗದೀಶ್ ನಡುವೆ ಜಗಳ ಶುರುವಾಗಿದೆ.
ನಾಮಿನೇಷನ್ ಪಿಕ್ಚರ್ ವಾರ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಪ್ರತಿರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/grbzTIkWWI— Colors Kannada (@ColorsKannada)
ನಾಮಿನೇಷನ್ ಪಿಕ್ಚರ್ ವಾರ್!
ಬಿಗ್ ಬಾಸ್ ಕನ್ನಡ ಸೀಸನ್ 11 | ಪ್ರತಿರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/grbzTIkWWI— Colors Kannada (@ColorsKannada) October 2, 2024
">October 2, 2024
ಇದನ್ನೂ ಓದಿ: ರಜನಿಕಾಂತ್ ಅಭಿನಯದ ವೆಟ್ಟೈಯಾನ್ ಬಗ್ಗೆ ಬಿಗ್ ಅಪ್ಡೇಟ್.. ಸೂಪರ್ ಸ್ಟಾರ್ ಆರೋಗ್ಯ ಈಗ ಹೇಗಿದೆ?
ಧನ್ರಾಜ್ ಮತ್ತು ಜಗದೀಶ್ ಮಾತು ಮಾತು ಬೆಳೆಸಿದ್ದಾರೆ. ಈ ವೇಳೆ ಜಗದೀಶ್ ಅರ್ಹವಾದ ರೆಫ್ರಿ ಇವನಲ್ಲ ಎಂದು ಧನ್ರಾಜ್ಗೆ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಧನ್ರಾಜ್ ಸುಮ್ಮೆ ಕೂತ್ಕೊತೀಯಾ.. ನೀನು ಯಾರು ಹೇಳೋಕೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಇಂದಿನ ಎಪಿಸೋಡ್ ಮಜವಾಗಿದ್ದು, ನಾಮಿನೇಶನ್ನಿಂದ ಪಾರಾಗಲು ಟಾಸ್ಕ್ನಲ್ಲಿ ಗೆಲ್ಲೋದು ಯಾರು ಎಂಬ ಕುತೂಹಲ ವೀಕ್ಷಕರನ್ನು ಕೆರಳಿಸಿದೆ. ಜೊತೆಗೆ ಮಾತು, ಜಗಳ, ಆಟ, ಬಿಗ್ ಬಾಸ್ ಮನೆಯಲ್ಲಿ ಏನೇನಾಯ್ತು ಎಂಬುದನ್ನು ಕಾಣುವ ತವಕ ಎಲ್ಲರಲ್ಲೂ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ