ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ.. ಕೋಟ್ಯಾಂತರ ಮನಸ್ಸುಗಳನ್ನು ಗೆದ್ದ ಪಟಾಕಿ‌ ಪೋರಿ..!

ಬಿಗ್‌ ಬಾಸ್‌ ಸೀಸನ್‌ 12ಕ್ಕೆ ಇವತ್ತು ತೆರೆ ಬಿದ್ದಿದೆ. 112 ದಿನಗಳ ಕಾಲ ನಡೆದ ಮನರಂಜನೆಯ ಮಸ್ತ್‌ ಮಹಾ ಮೇಳವು ವೀಕ್ಷಕರನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೊನೆಗೂ ಕರ್ನಾಟಕದ ಜನರು ತಮ್ಮ ಅಂತಿಮ ತೀರ್ಪು ನೀಡಿದ್ದಾರೆ. ಗಿಲ್ಲಿ ಬಿಗ್‌ ಬಾಸ್‌ ವಿನ್ನರ್‌ ಆದ್ರೆ ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆಗಿದ್ದಾರೆ.

author-image
Ganesh Kerekuli
BBK-Rakshitha

Photograph: (colors kannada)

Advertisment

ಬಿಗ್‌ ಬಾಸ್‌ ಸೀಸನ್‌ 12ಕ್ಕೆ ಇವತ್ತು ತೆರೆ ಬಿದ್ದಿದೆ. 112 ದಿನಗಳ ಕಾಲ ನಡೆದ ಮನರಂಜನೆಯ ಮಸ್ತ್‌ ಮಹಾ ಮೇಳವು ವೀಕ್ಷಕರನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕೊನೆಗೂ ಕರ್ನಾಟಕದ ಜನರು ತಮ್ಮ ಅಂತಿಮ ತೀರ್ಪು ನೀಡಿದ್ದಾರೆ. ಇನ್ನು, ಸೀಸನ್‌ ಪೂರ್ತಿ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದ್ದ ಮಾತಿನ ಮಲ್ಲಿ ರಕ್ಷಿತಾ ಶೆಟ್ಟಿ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದಾರೆ.

ಹೃದಯಗೆದ್ದ ರಕ್ಷಿತಾ..!

ಪಟ ಪಟ ಪಟಾಕಿ ಟಾಕಿಂಗ್ ಪೋರಿ ಅಂತಲೇ ಫೇಮಸ್‌ ಆಗಿರುವ ರಕ್ಷಿತಾ ಸಾದಾ ಸೀದಾ ಹುಡುಗಿ. ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಬಿಗ್‌ ಬಾಸ್‌ ಬೆಡಗಿ ಆಗಿದ್ದಾರೆ. ರಕ್ಷಿತಾ ಗೆಲ್ಲಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಮಹದಾಸೆ ಆಗಿತ್ತು. ಆದರೆ ಕೊನೆಯ ಹಂತದಲ್ಲಿ ಬಿಗ್‌ ಬಾಸ್‌ ಟೈಟಲ್‌ನಿಂದ ರಕ್ಷಿತಾ ವಂಚಿತರಾಗಿದ್ದಾರೆ. ಆದರೆ ಕರ್ನಾಟಕದ ಕೋಟ್ಯಾಂತರ ಮನಸ್ಸುಗಳನ್ನು ಗೆಲ್ಲುವಲ್ಲಿ ರಕ್ಷಿತಾ ಶೆಟ್ಟಿ ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ:  Bigg Boss Finale: ಹೃದಯಗೆದ್ದ ಮ್ಯೂಟಂಟ್ ರಘು.. ಶಾಕಿಂಗ್‌ ಎವಿಕ್ಷನ್..!

Rakshita Shetty (4)

ಬಿಗ್‌ ಬಾಸ್‌ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದ ರಕ್ಷಿತಾ ಶೆಟ್ಟಿ ಮೂಲತಃ ಮಂಗಳೂರಿನವರು. ರಕ್ಷಿತಾ ಶೆಟ್ಟಿ ಹುಟ್ಟಿದ್ದು ಮಂಗಳೂರಿನ ಪಡುಬಿದ್ರೆಯಲ್ಲಿ. ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಮನೆಯಲ್ಲಿ ರಕ್ಷಿತಾ ಶೆಟ್ಟಿ ಮಾತನಾಡುವುದು ತುಳು. ರಕ್ಷಿತಾ ಶೆಟ್ಟಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಕನ್ನಡ ಸರಿಯಾಗಿ ಬರದಿದ್ದರೂ, ಕನ್ನಡದಲ್ಲೂ ರಕ್ಷಿತಾ ಶೆಟ್ಟಿ ವ್ಲಾಗ್ಸ್ ಮಾಡುತ್ತಾರೆ. ಬರೀ ಕನ್ನಡ ಅಲ್ಲ, ತುಳು, ಹಿಂದಿ, ಇಂಗ್ಲಿಷ್‌ನಲ್ಲಿ ವ್ಲಾಗ್ಸ್ ರೀಲ್ಸ್ ಮಾಡುತ್ತಾರೆ. ಈ ಯೂಟ್ಯೂಬರ್, ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ನೀಡಿದ್ದರು. ಇದೀಗ ಬಿಗ್‌ ಬಾಸ್‌ ವೇದಿಕೆ ಮೂಲಕ ಕರ್ನಾಟಕದ ಮೂಲೆ ಮೂಲೆಗೂ ತಲುಪುವ ಮೂಲಕ ಜನಪ್ರಿಯತೆ ಪಡೆದು ಹೊರ ಬಂದಿದ್ದಾರೆ.


ಟಿವಿ ವಾಹಿನಿಗಳ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​ಗೆ ಭಾರೀ ಜನಪ್ರಿಯತೆ ಇದೆ. ದೇಶದಲ್ಲಿ ಬಿಗ್ ಬಾಸ್ ಮೊದಲು ಆರಂಭವಾಗಿದ್ದು, ಹಿಂದಿಯಲ್ಲಿ. ಆ ಬಳಿಕ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಆರಂಭಿಸಲಾಯಿತು. ಬಿಗ್​ ಬಾಸ್ ಅಂದ್ರೆ ವ್ಯಕ್ತಿತ್ವದ ಆಟ. ಪ್ರತಿಭೆಯನ್ನು ಶೋಧಿಸುತ್ತ ವ್ಯಕ್ತಿತ್ವವನ್ನು ಅನಾವರಣ ಮಾಡುವ ಕಲೆಗಾರಿಕೆಯೇ ಬಿಗ್​ ಬಾಸ್​ನ ತಾಖತ್ತು. ವ್ಯಕ್ತಿತ್ವದ ಆಟದಲ್ಲಿ ಈ ವರ್ಷ ಒಟ್ಟು 24 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದರು.

ಇದನ್ನೂ ಓದಿ: ಗಿಲ್ಲಿ ನಟ ಬಿಗ್​ ಬಾಸ್​ ಗೆದ್ದರೆ 20 ಲಕ್ಷ ರೂಪಾಯಿ ಕೊಡ್ತೀನಿ -ಶರವಣ ಘೋಷಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Ashwini Gowda Bigg Boss Rakshita Shetty Bigg Boss Finale
Advertisment