ಕಾರ್ಮಿಕರು 8 ಜನ, ಷೇರು ಮಾರುಕಟ್ಟೆಯಲ್ಲಿ ಮಾಡಿದ್ದು ಚಮತ್ಕಾರ
12 ಕೋಟಿ ಐಪಿಒ ಗುರಿಯಿಟ್ಟ ಸಾನ್ವಿ ಶೋರೂಂ ಗಳಸಿದ್ದೆಷ್ಟು ಗೊತ್ತಾ?
ಸಣ್ಣ ಉದ್ಯಮವಲಯ ಷೇರು ಮಾರುಕಟ್ಟೆಯಲ್ಲಿ ಮಾಡಿದೆ ಮ್ಯಾಜಿಕ್!
ಮುಂಬೈ: ಷೇರುಪೇಟೆ ಅಂದ್ರೆನೇ ಏಳು ಬೀಳುಗಳ ಆಟ. ಈ ಹಾವು ಏಣಿ ಆಟದಲ್ಲಿ ಪರಿಣಿತರಿದ್ದವರು ಮಾತ್ರ ಪ್ರವೇಶ ತೆಗೆದುಕೊಂಡರೆ ಮಾತ್ರ ಚಮತ್ಕಾರ ಮಾಡಬಹುದು. ಈ ಏಳು ಬೀಳಿನ ಭಾರತೀಯ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಚಮತ್ಕಾರವೊಂದು ನಡೆದಿದೆ. ಅದು ಯಮಹಾ ಟೂ ವೀಲ್ಹರ್ ಶೋ ರೂಮ್ನಿಂದ.
ಇದನ್ನೂ ಓದಿ: BSNL: ಗ್ರಾಹಕರ ಕಣ್ಣಿಗೆ ಬಿದ್ದ 397 ರೂಪಾಯಿಯ ಪ್ಲಾನ್! 2GB ಡೇಟಾ, 5 ತಿಂಗಳ ವ್ಯಾಲಿಡಿಟಿ ಜೊತೆಗೆ ಹಲವು ಲಾಭಗಳು!
ದೆಹಲಿಯ ದ್ವಾರಕಾದ ಪಾಲಂನಲ್ಲಿರುವ ಸಾನ್ವಿ ಆಟೋಮೊಬೈಲ್ ಕಂಪನಿ ಕೇವಲ ಎಂಟು ಜನ ಕಾರ್ಮಿಕರರನ್ನು ಹೊಂದಿದ ಕಂಪನಿ ಷೇರು ಮಾರುಕಟ್ಟೆಯಲ್ಲೊಂದು ಚಮತ್ಕಾರ ಮಾಡಿದೆ. ಎರಡೇ ಎರಡು ಶೋ ರೂಮ್ ಹೊಂದಿರುವ ಈ ಆಟೋಮೊಬೈಲ್ ಕಂಪನಿ ಇತ್ತೀಚೆಗೆ ಷೇರು ಮಾರುಕಟ್ಟೆ ಪ್ರವೇಶಿಸಿ ಇನ್ಷಿಯಲ್ ಪ್ರೈಸ್ ಆಫರಿಂಗ್ನ ಅಂದ್ರೆ ಐಪಿಒ ಅದನ್ನು ಕನ್ನಡದಲ್ಲಿ ಸರಳವಾಗಿ ಹೇಳಬೇಕು ಅಂದ್ರೆ ಆರಂಭಿಕ ಸಾರ್ವಜನಿಕ ಕೊಡುಗೆಯ ಗುರಿಯಿಟ್ಟುಕೊಂಡಿತ್ತು. ಆದ್ರೆ ಆಗಿದ್ದು ಅಕ್ಷರಶಃ ಮಿರಾಕಲ್.
ಯಮಹಾ ಶೋರೂಂ ತಾನಿಟ್ಟುಕೊಂಡಿದ್ದಕ್ಕಿಂತ 400 ಪಟ್ಟು ಜಾಸ್ತಿ IPO ಪಡೆದುಕೊಂಡಿದೆ, ಐಪಿಓ ಬಿಡುಗಡೆ ಮಾಡಿದ ಮೊದಲ ದಿನವೇ ಬರೋಬ್ಬರಿ 2700 ಕೋಟಿ ರೂಪಾಯಿ ಸಂಗ್ರಹವಾಗಿದೆ. ಸಣ್ಣ ಕಂಪನಿಯ ವಿಸ್ತರಣೆಗೆ ಭಾರಿ ಪ್ರಮಾಣದ ಬಂಡವಾಳ ಹರಿದು ಬಂದಿದ್ದು ಇದೇ ಮೊದಲಾಗಿದ್ದು, ಭಾರೀ ಅಚ್ಚರಿಗೆ ಕಾರಣವಾಗಿದೆ
ಇದನ್ನೂ ಓದಿ: ಇದು ಗೋವಾ ಟ್ರಿಪಾ? ಜೈಲಿನ ಮತ್ತೊಂದು ಫೋಟೋ ವೈರಲ್; ರೌಡಿಗಳ ಬ್ರ್ಯಾಂಡೆಡ್ ಲೈಫ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!
ಸಾನ್ವಿ ಆಟೋ ಮೊಬೈಲ್ಸ್ ಕಂಪನಿ 117 ರೂಪಾಯಿಗೆ ಒಂದರಂತೆ ಒಟ್ಟು 10.2 ಲಕ್ಷ ಷೇರುಗಳನ್ನು ಆಫರ್ ನೀಡಿತ್ತು. ಆಗಸ್ಟ್ 22 ರಂದು ಶುರುವಾದ ಈ ಆಫರ್ ಆಗಸ್ಟ್ 26ಕ್ಕೆ ಕೊನೆಗೊಂಡಿತ್ತು . ಬಾಂಬೆ ಸ್ಟಾಕ್ ಎಕ್ಸ್ಚೆಂಜ್ ದಾಖಲೆಯ ಪ್ರಕಾರ ಸೋಮವಾರ ಸಂಜೆ ವೇಳೆಗೆ ಸಾನ್ವಿ ಷೇರ್ನ ಬಿಡ್ 40.8 ಕೋಟಿ ಷೇರ್ಗೆ ತಲುಪಿದೆ.
ಸದ್ಯ ಸಾನ್ವಿ ಶೋರೂಂ ಷೇರು ಪೇಟೆಗೆ ಎಂಟ್ರಿ ಪಡೆದ ಕೆಲವೇ ದಿನಗಳಲ್ಲಿ ಮಾಡಿದ ಈ ಸಾಧನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈ ರೀತಿಯ ಸಾಧನೆಗಳಿಗೆ ತೆರೆದುಕೊಳ್ಳುವುದು ತೀರಾ ಅಪರೂಪ. ಅಂತಹ ಅಪರೂಪದ ಸಾಧನೆ ಮಾಡಿದೆ ಸಾನ್ವಿ ಶೋರೂಂ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ