newsfirstkannada.com

ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಬಿರಿಯಾನಿ ಊಟ; ಕೊಲೆ ಕೇಸ್‌ ವಿಚಾರಣೆ ಎಲ್ಲಿಗೆ ಬಂತು?

Share :

Published June 11, 2024 at 10:16pm

Update June 11, 2024 at 10:18pm

    ಎಲ್ಲಾ ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಠಾಣೆಗೆ ಕರೆತಂದ ಪೊಲೀಸರು

    ಕೊಲೆ ಪ್ರಕರಣದ 17 ಮಂದಿ ಬಂಧಿತ ಆರೋಪಿಗಳು ಪೊಲೀಸ್ ಕಸ್ಟಡಿಗೆ

    ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ಕೊಲೆ ಕೇಸ್‌ನ ಸಂಪೂರ್ಣ ವಿಚಾರಣೆ

ಬೆಂಗಳೂರು: ಯುವಕನ ಬರ್ಬರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ 17 ಮಂದಿ ಬಂಧಿತ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕೋರ್ಟ್ ಆದೇಶದ ಬಳಿಕ ಪ್ರಕರಣದ ಎಲ್ಲಾ ಆರೋಪಿಗಳನ್ನು ಪೊಲೀಸರು ಅನ್ನಪೂರ್ಣೇಶ್ವರಿನಗರ ಠಾಣೆಗೆ ಕರೆತಂದಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಕೊಲೆ ಕೇಸ್‌ನಲ್ಲಿ ದರ್ಶನ್ ಸೇರಿ 17 ಆರೋಪಿಗಳು ಇಂದಿನಿಂದ 6 ದಿನಗಳ ಕಾಲ ಪೊಲೀಸರ ವಿಚಾರಣೆ ಎದುರಿಸಬೇಕು. ವಿಚಾರಣೆಯ ಹಿನ್ನೆಲೆಯಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಬಿರಿಯಾನಿ ಊಟ ತರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ವಾರ್ನಿಂಗ್ ಮಾಡಿ ಬಿಟ್ಟಿದ್ರೆ ಸಾಕಿತ್ತು.. ನಾನು ತಾಯಿ ಆಗ್ತಿದ್ದೀನಿ; ಬಿಕ್ಕಿ ಬಿಕ್ಕಿ ಅತ್ತ ರೇಣುಕಾಸ್ವಾಮಿ ಪತ್ನಿ 

ಅನ್ನಪೂರ್ಣೇಶ್ವರಿನಗರ ಠಾಣೆಗೆ ‌ಡಿಸಿಪಿ ಗಿರೀಶ್ ಅವರು ಆಗಮಿಸಿದ್ದಾರೆ ಬಂಧನದಲ್ಲಿರುವ ದರ್ಶನ್ ಮತ್ತವರ ಗ್ಯಾಂಗ್ ಊಟ ಮುಗಿಸಿದ ಬಳಿಕ ವಿಚಾರಣೆ ಶುರು ಮಾಡಲಿದ್ದಾರೆ. ಕೊಲೆ ಪ್ರಕರಣದಲ್ಲಿ ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಸಿಕ್ಕ ಸಾಕ್ಷ್ಯಗಳಿಗೆ ಸಂಬಂಧಪಟ್ಟಂತೆ ಆರೋಪಿಗಳಿಂದ ಪೊಲೀಸರು ಮಾಹಿತಿ ಪಡೆಯಲಿದ್ದಾರೆ.

ಇದನ್ನೂ ಓದಿ: ಕಾಟೇರನಿಗೆ ‘ಪವಿತ್ರಾ’ ಕಂಟಕ ಇದೇ ಮೊದಲಲ್ಲ.. ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದೇಕೆ? ಅಸಲಿ ಕಾರಣವೇನು? 

ಬೆಂಗಳೂರಿನಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನಾಪ್ & ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಅಂಡ್ ಟೀಂ ಅನ್ನು ಇಂದು ಮಧ್ಯಾಹ್ನ ಬಂಧಿಸಲಾಯಿತು. ಮೆಡಿಕಲ್ ಚೆಕಪ್ ಮಾಡಿದ ಬಳಿಕ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರ ಮುಂದೆ ದರ್ಶನ್ ಅಂಡ್ ಗ್ಯಾಂಗ್ ಕೈ ಕಟ್ಟಿ ನಿಂತಿದ್ದು, ಜಡ್ಜ್ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಅವರೀಗ ವಿಚಾರಣೆಯನ್ನು ಎದುರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಬಿರಿಯಾನಿ ಊಟ; ಕೊಲೆ ಕೇಸ್‌ ವಿಚಾರಣೆ ಎಲ್ಲಿಗೆ ಬಂತು?

https://newsfirstlive.com/wp-content/uploads/2024/06/darshan7.jpg

Load More