newsfirstkannada.com

ವಾರ್ನಿಂಗ್ ಮಾಡಿ ಬಿಟ್ಟಿದ್ರೆ ಸಾಕಿತ್ತು.. ನಾನು ತಾಯಿ ಆಗ್ತಿದ್ದೀನಿ; ಬಿಕ್ಕಿ ಬಿಕ್ಕಿ ಅತ್ತ ರೇಣುಕಾಸ್ವಾಮಿ ಪತ್ನಿ

Share :

Published June 11, 2024 at 9:32pm

    ನಟ ದರ್ಶನ್ ವಿರುದ್ಧ ರೇಣುಕಾಸ್ವಾಮಿ ಕುಟುಂಬಸ್ಥರ ಆಕ್ರೋಶ

    ನಮ್ಮ ಮನೆಯವ್ರಿಗೆ ಹಿಂಗೆ ಆಗೈತೆ ನ್ಯಾಯ ಕೊಡಿಸ್ರಿ..

    ‘ನನ್ನ ಜೀವನದಲ್ಲಿ ಮಗು ಬೇರೆ ಬರ್ತಾ ಇದೆ ನಾನೇನು ಮಾಡಲಿ’

ಬೆಂಗಳೂರಲ್ಲಿ ಭೀಕರವಾಗಿ ಕೊಲೆಯಾದ ರೇಣುಕಾಸ್ವಾಮಿ ಅವರ ಮೃತದೇಹವನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗಲಾಗಿದೆ. ರೇಣುಕಾಸ್ವಾಮಿ ಅವರ ಶವವನ್ನು ನೋಡಿದ ಕುಟುಂಬಸ್ಥರು, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಟ ದರ್ಶನ್ ವಿರುದ್ಧ ಕೊಲೆ ಆರೋಪ ಕೇಳಿ ಬಂದಿರೋದ್ರಿಂದ ರೇಣುಕಾಸ್ವಾಮಿ ಕುಟುಂಬಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ‘ನಟ ದರ್ಶನ್​​, ಪವಿತ್ರ ಅಮಾಯಕರು, ಪಾಪ! ಕೊಲೆ ಬಗ್ಗೆ ಏನು ಗೊತ್ತೇ ಇಲ್ಲ’- ವಕೀಲ 

ಗಂಡನ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾರೋ ರೇಣುಕಾಸ್ವಾಮಿ ಅವರ ಪತ್ನಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಮನೆಯವ್ರಿಗೆ ಹಿಂಗೆ ಆಗೈತೆ ನ್ಯಾಯ ಕೊಡಿಸ್ರಿ. ನಾನು ಪ್ರೆಗ್ನೆಂಟಿ ಇದ್ದೀನಿ. ಹಿಂಗೆ ಆಗಬಾರದಿತ್ತು. ದಯಮಾಡಿ ನನಗೆ ನ್ಯಾಯ ಕೊಡ್ಸಿ ಎಂದು ಬೇಡಿಕೊಂಡಿದ್ದಾರೆ.

ನಾನು ಮದುವೆ ಆಗಿ ಒಂದು ವರ್ಷ ಆಗಿದೆ. ತಾಯಿ ಆಗುತ್ತಾ ಇರೋವಾಗ ನನ್ನ ಗಂಡನಿಗೆ ಹೀಗೆ ಆಗಿದೆ ನಾನು ಏನ್ ಮಾಡೋದು ಹೇಳಿ. ನನ್ನ ಜೀವನದಲ್ಲಿ ಮಗು ಬೇರೆ ಬರ್ತಾ ಇದೆ ನಾನೇನು ಮಾಡಲಿ. ಕೊನೆಯ ಬಾರಿ ನನ್ನ ಗಂಡ ತಾಯಿಗೆ ಕಾಲ್ ಮಾಡಿ ಊಟಕ್ಕೆ ಬರ್ತೀನಿ ಅಂತ ಹೇಳಿದ್ರು. ಅದು ಬಿಟ್ಟು ಬೇರೆ ಏನು ಮಾಹಿತಿ ನನಗಿಲ್ಲ. ರೇಣುಕಾಸ್ವಾಮಿ ಅವರು ದರ್ಶನ್ ಅವರ ಅಭಿಮಾನಿ ಆಗಿರಲಿಲ್ಲ. ತಪ್ಪಿತಸ್ಥರು ಯಾರೇ ಆಗಲಿ ನನಗೆ ನ್ಯಾಯ ಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇದನ್ನೂ ಓದಿ: ಕಾಟೇರನಿಗೆ ‘ಪವಿತ್ರಾ’ ಕಂಟಕ ಇದೇ ಮೊದಲಲ್ಲ.. ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದೇಕೆ? ಅಸಲಿ ಕಾರಣವೇನು? 

ನಟ ದರ್ಶನ್​ ಮತ್ತು ಗ್ಯಾಂಗ್​ಗೆ ಎಷ್ಟು ದಿನ ಕಸ್ಟಡಿ?

ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ 24ನೇ ಆರ್ಥಿಕ ಅಪರಾಧಗಳ ಕೋರ್ಟ್​ ಬಿಗ್​ ಶಾಕ್​ ನೀಡಿದೆ. ದರ್ಶನ್​ ಮತ್ತು ಗ್ಯಾಂಗ್​​ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ 2 ದಿನಕ್ಕೊಮ್ಮೆ ಕೋರ್ಟ್​ಗೆ ವರದಿ ಒಪ್ಪಿಸಿ ಎಂದು ಪೊಲೀಸರಿಗೆ ಕೋರ್ಟ್​​ ಸೂಚನೆ ನೀಡಿದೆ.

ರೇಣುಕಾ ಸ್ವಾಮಿ ಎಂಬ ಯುವಕನ ಕೊಲೆ ಕೇಸಲ್ಲಿ ನಟ ದರ್ಶನ ಅರೆಸ್ಟ್​ ಮಾಡಲಾಗಿದೆ. ಸತತ 4 ಗಂಟೆಗಳ ವಿಚಾರಣೆ ಬಳಿಕ ಮೆಡಿಕಲ್​​ ಚೆಕಪ್​ ಮಾಡಿಸಿ ದರ್ಶನ್​ ಅವರನ್ನು ಕೋರ್ಟ್​​ನಲ್ಲಿ ಹಾಜರು ಪಡಿಸಲಾಗಿದೆ. ಇನ್ನು, ಕೋರ್ಟ್​​ನಲ್ಲಿ ಜಡ್ಜ್​ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ದರ್ಶನ್​ ಉತ್ತರ ನೀಡಿದ್ದಾರೆ.

ದರ್ಶನ್​​​ ಪರ ವಕೀಲರಾದ ಅನಿಲ್​​​ ಅವರು, ಕೊಲೆಗೂ ದರ್ಶನ್​ ಅವರಿಗೂ ಯಾವುದೇ ಸಂಬಂಧ ಇಲ್ಲ. ಇದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ವಾದ ಮಂಡಿಸಿದ್ರು. ದರ್ಶನ್​ ಮತ್ತು ಸರ್ಕಾರಿ ಪರ ವಲೀಕರ ವಾದ ಕೇಳಿ ನ್ಯಾಯಧೀಶ ವಿಶ್ವನಾಥ್​​​ ಸಿ. ಗೌಡರ್​​ ಆದೇಶ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರ್ನಿಂಗ್ ಮಾಡಿ ಬಿಟ್ಟಿದ್ರೆ ಸಾಕಿತ್ತು.. ನಾನು ತಾಯಿ ಆಗ್ತಿದ್ದೀನಿ; ಬಿಕ್ಕಿ ಬಿಕ್ಕಿ ಅತ್ತ ರೇಣುಕಾಸ್ವಾಮಿ ಪತ್ನಿ

https://newsfirstlive.com/wp-content/uploads/2024/06/Renukaswamy-Wife-On-Darshan.jpg

Load More