/newsfirstlive-kannada/media/post_attachments/wp-content/uploads/2024/05/DEVARAJEGOWDA-1-1.jpg)
ಹಾಸನದಲ್ಲಿ ಹಲ್ ಚಲ್ ಎಬ್ಬಿಸಿರೋ ಪೆನ್ಡ್ರೈವ್ ಪ್ರಕರಣದಲ್ಲಿ ವಕೀಲ ದೇವರಾಜೇಗೌಡರನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ. ಅಶ್ಲೀಲ ವಿಡಿಯೋ ಬಗ್ಗೆ ಅವರು ನೀಡಿದ ಕೆಲವು ಮಾಹಿತಿಗಳಿಂದಾಗಿ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು. ಆದ್ರೆ ಹೊಳೆನರಸೀಪುರದಲ್ಲಿ ದಾಖಲಾದ ಮತ್ತೊಂದು ಕೇಸ್ ಸದ್ಯ ದೇವರಾಜೇಗೌಡರ ಬಾಯಿ ಮುಚ್ಚಿಸಿದೆ. ಜೊತೆಗೆ ಬಿಜೆಪಿ ನಾಯಕನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಇದನ್ನೂ ಓದಿ:ಆರ್ಸಿಬಿ ಪ್ಲೇ ಆಫ್ ಕನಸು! ಅಂದುಕೊಂಡಷ್ಟು ಸುಲಭ ಅಲ್ಲವೇ ಅಲ್ಲ.. ಹೀಗಾದರೆ ಮಾತ್ರ ಸಾಧ್ಯ..!
ಹಾಸನದ ಹೊಳೆನರಸೀಪುರ ಲೈಂಗಿಕ ಕಿರುಕುಳ ಪ್ರಕರಣ
ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಕೀಲ ದೇವರಾಜೇಗೌಡಗೆ ಸಂಕಷ್ಟ ಎದುರಾಗಿದೆ. ವಿಡಿಯೋ ಕಾಲ್ನಲ್ಲಿ ಖಾಸಗಿ ಅಂಗ ಪ್ರದರ್ಶಿಸಿ ಮಹಿಳೆಗೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ ದೂರು ದಾಖಲಾಗ್ತಿದ್ದಂತೆ ಕಣ್ಮರೆಯಾಗಿದ್ದ ಬಿಜೆಪಿ ಮುಖಂಡ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೇವರಾಜೇಗೌಡ ಮಾತನಾಡಿದ್ದ ವಿಡಿಯೋ ಆಧರಿಸಿ ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇವರಾಜೇಗೌಡ ವಶಕ್ಕೆ!
- ಏಪ್ರಿಲ್ 1 ರಂದು ಸಂತ್ರಸ್ತೆಯೊಬ್ಬರಿಂದ ದಾಖಲಾಗಿದ್ದ ಪ್ರಕರಣ
- ಅದೇ ಮಹಿಳೆ ವಿರುದ್ಧ ಹೆಬ್ಬಾಳದಲ್ಲಿ ದೇವರಾಜೇಗೌಡ ದೂರು
- ಕೇಸ್ ದಾಖಲಾಗ್ತಿದ್ದಂತೆ ಎಸ್ಕೇಪ್ ಆಗಿದ್ದ ದೇವರಾಜೇಗೌಡ
- ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿ ಪೊಲೀಸರ ವಶಕ್ಕೆ
- ಗುಹಿಳಾಳ್ ಟೋಲ್ನಲ್ಲಿ ದೇವರಾಜೇಗೌಡ ಪೊಲೀಸರ ವಶಕ್ಕೆ
- ಹೊಳೆನರಸೀಪುರದ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ವಶಕ್ಕೆ
ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!
ತಮ್ಮ ಮೇಲೆ ಕೇಳಿಬಂದಿದ್ದ ಆರೋಪದ ಬಗ್ಗೆ ದೇವರಾಜೇಗೌಡ ವಿಡಿಯೋ ಹೇಳಿಕೆಯನ್ನ ಹರಿಬಿಟ್ಟಿದ್ದರು. ಈ ವಿಡಿಯೋವನ್ನ ಆಧರಿಸಿ ಹಾಸನ ಪೊಲೀಸರು ಇನೋವಾ ಕಾರಿನಲ್ಲಿ ದೇವರಾಜೇಗೌಡ ಹಿರಿಯೂರು ಕಡೆ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ ಹೊಳೆನರಸೀಪುರಕ್ಕೆ ದೇವರಾಜೇಗೌಡನನ್ನ ಪೊಲೀಸರು ಕರೆತಂದಿದ್ದಾರೆ.
ಒಟ್ಟಾರೆ, ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಮಧ್ಯಸ್ಥಿಕೆ ವಹಿಸಿ ರಾಜಕೀಯ ಕಲಹಕ್ಕೆ ಕಾರಣವಾಗಿದ್ದವರು ದೇವರಾಜೇಗೌಡ. ಆದ್ರೀಗ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಬೆನ್ನುಬಿದ್ದಿರೋದು ನಿಜಕ್ಕೂ ಈ ಕೇಸ್ ಮತ್ಯಾರಿಗೆಲ್ಲಾ ಸುತ್ತಾಕಿಕೊಳ್ಳುತ್ತೋ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ