ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ವೇಳೆ ಹಳಿ ಮೇಲೆ ಬಿದ್ದ ಬಿಜೆಪಿ ಶಾಸಕಿ; ಆಮೇಲೆ ಆಗಿದ್ದೇನು?

author-image
Gopal Kulkarni
Updated On
ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ವೇಳೆ ಹಳಿ ಮೇಲೆ ಬಿದ್ದ ಬಿಜೆಪಿ ಶಾಸಕಿ; ಆಮೇಲೆ ಆಗಿದ್ದೇನು?
Advertisment
  • ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ವೇಳೆ ನಡೆದ ಘಟನೆ
  • ಬಿಜೆಪಿ ಶಾಸಕಿ ಸರಿತಾ ಬದೋರಿಯಾ ರೈಲು ಹಳಿಯ ಮೇಲೆ ಬಿದ್ದಿದ್ದೇಕೆ
  • ವಿಪರೀತ ಜನಜಂಗುಳಿ, ನೂಕುನುಗ್ಗಲಿನಿಂದಾಗಿ ಟ್ರ್ಯಾಕ್​ ಮೇಲೆ ಬಿದ್ದ ಸರಿತಾ

ಲಖನೌ: ವಂದೇ ಭಾರತ್ ಹೊಸ ರೈಲಿಗೆ ಚಾಲನೆ ನೀಡುವ ವೇಳೆ ನೂಕುನುಗ್ಗಲಿನಿಂದಾಗಿ ಶಾಸಕಿಯೊಬ್ಬರು ರೇಲ್ವೆ ಟ್ರ್ಯಾಕ್​ ಮೇಲೆ ಬಿದ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಇತಾವಾದಲ್ಲಿ ನಡೆದಿದೆ. ಇತಾವಾದಲ್ಲಿ ಆಗ್ರಾ ವಾರಾಣಸಿ ವಂದೇ ಭಾರತ್​ ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಬಿಜೆಪಿ ಎಂಎಲ್​ಎ ಸರಿತಾ ಬದೋರಿಯಾ ಭಾಗಿಯಾಗಿದ್ದರು. ಈ ವೇಳೆ ವಿಪರೀತ ಜನಜಂಗುಳಿ ಇದ್ದ ಕಾರಣ ಕೈಯಲ್ಲಿ ಬಾವುಟ ಹಿಡಿದು ರೈಲಿಗೆ ಚಾಲನೆ ನೀಡುವ ವೇಳೆ ಸರಿತಾ ನೂಕುನುಗ್ಗಲಿನಿಂದಾಗಿ ರೇಲ್ವೆ ಟ್ರ್ಯಾಕ್​ ಮೇಲೆ ಬಿದ್ದಿದ್ದಾರೆ.

ಇದನ್ನೂ ಓದಿ:ನ್ಯೂಯಾರ್ಕ್​ನಲ್ಲಿ ಸ್ವಾಮಿ ನಾರಾಯಣ ಮಂದಿರ ಧ್ವಂಸ, ಆಕ್ರೋಶ ವ್ಯಕ್ತಪಡಿಸಿದ ಅಮೆರಿಕಾದ ಹಿಂದೂಗಳು

ಸರಿತಾ ರೈಲು ಕಂಬಿಯ ಮೇಲೆ ಬಿದ್ದ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಂಥವರನ್ನು ಕೂಡ ಬೆಚ್ಚಿ ಬೀಳಿಸುವಂತಿದೆ. ಶಾಸಕಿ ಸರಿತಾ ಕೆಳಕ್ಕೆ ಬಿದ್ದ ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಭದ್ರತಾ ಸಿಬ್ಬಂದಿ ಹಾಗೂ ಪಕ್ಷದ ಕಾರ್ಯಕರ್ತರು ಅವರಿಗೆ ಸಹಾಯ ನೀಡಿ ಮೇಲೆಕ್ಕೆ ಕರೆದುಕೊಂಡು ಬಂದಿದ್ದಾರೆ.


">September 16, 2024


ಇದನ್ನೂ ಓದಿ:ಸಿಎಂ ಅರವಿಂದ್​​ ಕೇಜ್ರಿವಾಲ್​​​ ದಿಢೀರ್​ ರಾಜೀನಾಮೆಗೆ ಮುಂದಾಗಿದ್ದೇಕೆ? ಇಲ್ಲಿವೆ 5 ಕಾರಣಗಳು!

ಅದೃಷ್ಟವಷಾತ್ ಸರಿತಾ ಅವರಿಗೆ ದೊಡ್ಡ ಪ್ರಮಾಣದ ಗಾಯಗಳು ಆಗಿಲ್ಲ. ಈ ಘಟನೆ ನಡೆದ ಬಳಿಕ ಅಂದಕೊಂಡಂತೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಬಳಿಕ ಅದು ಹಳಿಯ ಮೇಲೆ ಸರಾಗವಾಗಿ ತನ್ನ ಗುರಿಯತ್ತ ತಲುಪಿತು. ಸದ್ಯ ಈ ಒಂದು ಘಟನೆ ಶುಭ ಸಂದರ್ಭದ ವೇಳೆ ದೊಡ್ಡ ಆತಂಕವನ್ನುಂಟು ಮಾಡಿದ್ದಂತ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment