/newsfirstlive-kannada/media/post_attachments/wp-content/uploads/2024/06/Delhi.jpg)
ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಮತ್ತೆ ಗದ್ದುಗೆ ಏರಿದೆ. ದೆಹಲಿಯಲ್ಲಿ ಎಲ್ಲಾ 7 ಲೋಕಸಭಾ ಕ್ಷೇತಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ವ್ಯಕ್ತಿಯೊಬ್ಬನ ತಲೆ ಬೋಳಿಸಿದ್ದಾರೆ. ಆ ಮೂಲಕ ಆಮ್​ ಆದ್ಮಿ ಪಕ್ಷದ ನಾಯಕ ಸೋಮನಾಥ್​ ಭಾರ್ತಿ ನೀಡಿದ ಹೇಳಿಕೆಯನ್ನು ಅಣಕಿಸಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್ ಆಗಿದೆ. ನವದೆಹಲಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದಂತೆ ಕಾರ್ಯಕರ್ತರು ವ್ಯಕ್ತಿಯ ತಲೆ ಬೋಳಿಸುವ ಮೂಲಕ ಸೋಮನಾಥ್​ ಭಾರ್ತಿ ಹೇಳಿದ ಪ್ರತಿಜ್ಞೆಯನ್ನು ಅಣಕಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/06/Somanath.jpg)
ತಲೆ ಬೋಳಿಸ್ತೇನೆ ಎಂದಿದ್ದ ಸೋಮನಾಥ್​ ಭಾರ್ತಿ
ಜೂನ್​ 1ರಂದು ಆಮ್​ ಆದ್ಮಿ ಪಕ್ಷದ ನಾಯಕ ಸೋಮನಾಥ್​ ಭಾರ್ತಿಯವರು, ನರೇಂದ್ರ ಮೋದಿ ಅವರು ಪ್ರಧಾನಿ ಸ್ಥಾನವನ್ನು ಉಳಿಸಿಕೊಂಡರೆ ತಲೆ ಬೋಳಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು. "ಮೋದಿ 3ನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಮಾತನ್ನು ನೆನಪಿಟ್ಟುಕೊಳ್ಳಿ. ಎಲ್ಲಾ ಎಕ್ಸಿಟ್ ಪೋಲ್‌ಗಳು ಜೂನ್ 4 ರಂದು ತಪ್ಪಾಗುತ್ತವೆ ಮತ್ತು ಮೋದಿ ಜಿ 3ನೇ ಬಾರಿಗೆ ಪ್ರಧಾನಿಯಾಗುವುದಿಲ್ಲ" ಎಂದು ಹೇಳಿದ್ದರು.
ಆದರೆ ಇಂದು ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸೋಮನಾಥ್​ ಭಾರ್ತಿ ನೀಡಿರುವ ಹೇಳಿಕೆಯನ್ನು ನೆನಪಿಸಿದ್ದಾರೆ. ನೀವು ತಲೆ ಬೋಳಿಸಬೇಕು ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ರಾಜೀನಾಮೆ ಕೊಡ್ತೇನೆ ಎಂದ ಪ್ರದೀಪ್​ ಈಶ್ವರ್​
ಚಿಕ್ಕಬಳ್ಲಾಪುರದ ಶಾಸಕ ಪ್ರದೀಪ್​ ಈಶ್ವರ್​ ಕೂಡ ಇದೇ ರೀತಿಯ ಪ್ರತಿಜ್ಞೆ ಮಾಡಿ ಸೋತಿದ್ದಾರೆ. ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ಡಾ. ಸುಧಾಕರ್​ಗೆ ಒಂದು ಮತ ಹೆಚ್ಚಿಗೆ ಬಂದರು ನಾನು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಡಾ. ಸುಧಾಕರ್​ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ನಾಯಕರುಗಳು ಪ್ರದೀಪ್​ ಈಶ್ವರ್​ ಹೇಳಿಕೆಯನ್ನು ನೆನಪಿಸಿದ್ದಾರೆ. ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us