/newsfirstlive-kannada/media/post_attachments/wp-content/uploads/2024/10/PASSANGER-ATTTTACKED-CONDUCTOR.jpg)
ಬೆಂಗಳೂರು: ಕರ್ತವ್ಯ ನಿರತ ಬಿಎಂಟಿಸಿ ಕಂಟಕ್ಟರ್​​ನನ್ನು ಪ್ರಯಾಣಿಕನೊಬ್ಬ ಚಾಕುವಿನಿಂದ ಇರಿದ ಘಟನೆ ಸಂಜೆ ವೈಟ್​ಫಿಲ್ಡ್​ನ ಐಟಿಪಿಎಲ್​ ಬಸ್​ ಸ್ಟಾಪ್ ಬಳಿ ನಡೆದಿದೆ. ವೋಲ್ವೋ ಬಸ್​ ಕಂಡಕ್ಟರ್ ಯೋಗೇಶ್​​​ ಅವರಿಗೆ ಆಗಂತುಕನೊಬ್ಬ ಎರಡು ಮೂರು ಬಾರಿ ಅಮಾನುಷವಾಗಿ ಚಾಕುವಿನಿಂದ ಇರಿದಿದ್ದಾನೆ.
ಇದನ್ನೂ ಓದಿ:ಸೈಟ್​ ವಾಪಸ್​ ಮಾಡಿದ್ರೂ ಸಿಎಂ ಸಿದ್ದರಾಮಯ್ಯಗೆ ತಪ್ಪದ ಸಂಕಷ್ಟ; ಮುಂದೇನು?
ಡಿಪೋ-13ರ ವೋಲ್ವೋ ಬಸ್​ನಲ್ಲಿ ಈ ಘಟನೆ ನಡೆದಿದ್ದು. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಅಕ್ಷರಶಃ ಹುಚ್ಚನಂತೆ ವರ್ತಿಸಿದ್ದಾನೆ ಕಂಡಕ್ಟರ್​ಗೆ ಎರಡು ಮೂರು ಬಾರಿ ಚಾಕುವಿನಿಂದ ಇರಿದಿದ್ದಲ್ಲದೆ, ಬಸ್​ನಲ್ಲಿದ್ದ ಸುತ್ತಿಗೆಯಿಂದ ಬಸ್​ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾನೆ.
/newsfirstlive-kannada/media/post_attachments/wp-content/uploads/2024/10/PASSANGER-ATTTTACKED-CONDUCTOR-1.jpg)
ಇದನ್ನೂ ಓದಿ:ಮುಡಾ ಕಂಟಕದಿಂದ ಸಿಎಂ ಪತ್ನಿ ಪಾರಾಗ್ತಾರಾ? ದೈವ ಭಕ್ತೆ ಪಾರ್ವತಮ್ಮನ ಕಾಪಾಡುವನೇ ಮಾದಪ್ಪ?
ಬಸ್ ಡೋರ್​ನ್ನು ಕಾಲಿನಿಂದ ಒದ್ದು ಹುಚ್ಚನಂತೆ ವರ್ತಿಸಿದ್ದಾನೆ. ಸದ್ಯ ಆರೋಪಿಯನ್ನು ವೈಟ್​​ಫೀಲ್ಡ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕಂಡಕ್ಟರ್​ ಯೋಗೇಶ್​ರನ್ನು ನನ್ನ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us