/newsfirstlive-kannada/media/post_attachments/wp-content/uploads/2024/09/BODY-LANGAUGE-1.jpg)
ನಮ್ಮ ಬದುಕಿನಲ್ಲಿ ಬಾಡಿ ಲಾಂಗವೇಜ್ ಅಂದ್ರೆ ನಮ್ಮ ನಡುವಳಿಕೆ ನಮ್ಮ ದೇಹಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ವೈಯಕ್ತಿಕವಾಗಿ ಹಾಗೂ ನಮ್ಮ ವೃತ್ತಿ ಬದುಕಿನಲ್ಲಿ ಇದು ಬಹಳ ಪ್ರಭಾವ ಬೀರುವ ಅಂಶ. ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆ ಜೊತೆಗೆ ನಿಮ್ಮ ವ್ಯಕ್ತಿತ್ವ ವಿಕಸನದಲ್ಲಿಯೂ ಕೂಡ ಇದು ತುಂಬಾ ಸಹಾಯಕಾರಿ ಆಗಬಲ್ಲದು. ಪ್ರತಿಯೊಬ್ಬರಿಗೂ ಅವರದೇ ಆದ ಬಾಡಿ ಲಾಂಗವೇಜ್ ಇರುತ್ತದೆ. ಆದ್ರೆ ನಮ್ಮ ವೃತ್ತಿ ಹಾಗೂ ನಮ್ಮ ವೈಯಕ್ತಿಕ ಬದುಕಿಗೆ ಸಹಾಯಕವಾಗಬಲ್ಲ ನಮ್ಮ ದೇಹ ಭಾಷೆ ಹೇಗಿರಬೇಕು ಅನ್ನೊದರ ಬಗ್ಗೆ ಕೆಲವು ಅಂಶಗಳನ್ನು ಗಮನಿಸುವುದುದಾದ್ರೆ.
ಇದನ್ನೂ ಓದಿ:Fatty Liver ನಿಂದ ಉಂಟಾಗುವ ಸಮಸ್ಯೆಗಳೇನು ಗೊತ್ತಾ? ಇದನ್ನು ತಡೆಯುವುದು ಹೇಗೆ..?
EYE Contact ಚೆನ್ನಾಗಿರಬೇಕು
/newsfirstlive-kannada/media/post_attachments/wp-content/uploads/2024/09/BODY-LANGAUGE-EYE-CONTACT.jpg)
ನಾವು ಒಬ್ಬರೊಂದಿಗೆ ಮಾತನಾಡುವಾಗ ನಮ್ಮ ಐ ಕಂಟ್ಯಾಕ್ಟ್​ ಚೆನ್ನಾಗಿರಬೇಕು. ಅಂದಾಗ ಎದುರಲ್ಲಿ ಇರುವವರು ನೀವು ಅವರ ಮಾತನ್ನು ಗಮನವಿಟ್ಟು ಕೇಳುತ್ತಿದ್ದೀರಾ ಅಂತನಿಸೋದು ಅದು ಮಾತ್ರವಲ್ಲ ಸರಿಯಾಗಿ ಗಮನವನ್ನು ಕೊಡುತ್ತಿದ್ದಿರಾ ಅಂತ ಅವರು ಗ್ರಹಿಸುತ್ತಾರೆ. ಆದ್ರೆ ನಿಮ್ಮ ನೋಟದಲ್ಲಿ ಸಮತೂಕ ಇರಬೇಕು. ಎದುರಿಗಿರುವವರನ್ನು ಹೆದರಿಸುವಂತೆ ಇರಬಾರದು. ಒಂದು ಸಮತೋಲಿತ ನೋಟ ನಿಮ್ಮದಾಗಿದ್ದರೆ ಒಳ್ಳೆಯದು
/newsfirstlive-kannada/media/post_attachments/wp-content/uploads/2024/09/BODY-LANGAUGE-TALL-STAND.jpg)
ನಿಲ್ಲುವ ವಿಧಾನ ಸರಿಯಾಗಿರಬೇಕು
ನೀವು ನಿಲ್ಲುವ ಭಂಗಿಯೂ ಕೂಡ ನಿಮ್ಮ ದೇಹಭಾಷೆಯನ್ನು ಪ್ರತಿನಿಧಿಸುತ್ತದೆ. ನೀವು ನಿಲ್ಲುವ ಭಂಗಿ ನಿಮ್ಮ ಎತ್ತರದ ನಿಲುವಿಗೆ ತಕ್ಕ ಹಾಗೆ ಇರಬೇಕು ಹಾಗೆಯೇ ಭುಜಗಳು ಹಿಂದಕ್ಕೆ ಸರಿದು ತಲೆ ಒಂದು ಮಟ್ಟಕ್ಕೆ ಎತ್ತರವಾಗಿ ಇರುವಂತೆ ನೋಡಕೊಳ್ಳಬೇಕು. ಗೂನುಬೆನ್ನು ಮಾಡಿಕೊಂಡು ನಿಲ್ಲುವುದು ಅಷ್ಟು ಸರಿಯಾದ ಭಂಗಿಯಲ್ಲ. ನೀವು ನಿಲ್ಲುವ ಭಂಗಿಯಲ್ಲಿ ನಿಮ್ಮ ಆತ್ಮವಿಶ್ವಾಸ ಎದ್ದು ಕಾಣುವಂತಿರಬೇಕು. ನೀವು ಒಂದು ರೂಮಿನೊಳಗಡೆ ಇಂಟರ್​ವ್ಯೂವ್​ಗೆ ಅಂತ ಹೋದಾಗ ಬಾಗಿಲು ತೆಗೆದು ಒಳಗಡೆ ಹೋಗಿ ನಿಂತಾಗ ನಿಮ್ಮ ಸುತ್ತ ಒಂದು ಧನಾತ್ಮಕ ಪ್ರಭಾವ ಕಾಣಿಸಿಕೊಳ್ಳಬೇಕು. ಹೀಗಿದ್ದಾಗ ನಿಮ್ಮೆಡೆಗೆ ಒಂದು ಸಹಜವಾದ ಒಂದು ಗಮನ ಅವರಿಂದ ಬರುತ್ತದೆ.
ಇದನ್ನೂ ಓದಿ: Trending ನಲ್ಲಿದೆ ಬೆಂಡೆಕಾಯಿ ನೆನೆಯಿಟ್ಟು ನೀರು ಕುಡಿಯುವ ವಿಡಿಯೋ; ನಿಜಕ್ಕೂ ಇದರಿಂದ ಚರ್ಮದ ಕಾಂತಿ ಹೆಚ್ಚುತ್ತಾ?
/newsfirstlive-kannada/media/post_attachments/wp-content/uploads/2024/09/BODY-LANGAUGE-TALL-STAND-1.jpg)
ಮಾತಿನಲ್ಲಿ ದೃಢತೆ ಹಾಗೂ ಸ್ಪಷ್ಟತೆ ಇರಲಿ
ನೀವು ಸಂದರ್ಶನದಲ್ಲಿಯೇ ಆಗಲಿ, ಆಫೀಸ್​ ಮೀಟಿಂಗ್​ಗಳಲ್ಲಿಯೇ ಆಗಲಿ ಮಾತನಾಡುವಾಗ ಒಂದು ದೃಢತೆ ಹಾಗೂ ಸ್ಪಷ್ಟತೆ, ಧ್ವನಿಯಲ್ಲಿ ಒಂದು ಸ್ಪುಟತೆ ಇರಬೇಕು. ಆದಷ್ಟು ಹ್ಮು, ಮತ್ತೆ, ಒಂದು ರೀತಿಯಲ್ಲಿ ಅನ್ನುವಂತ ಪದಗಳ ಬಳಕೆ ಕಡಿಮೆ ಇರಬೇಕು. ಮಾತಿನ ವೇಗದ ಕಡೆಯೂ ಗಮನವಿರಬೇಕು. ಮಾತನಾಡುವ ಭರದಲ್ಲಿ ಅತಿವೇಗವಾಗಿ ಮಾತನಾಡಿ ಅಭಾಸಕ್ಕೀಡಾಗುವುದಕ್ಕಿಂತ. ನಿಧಾನವಾಗಿ ಸ್ಪಷ್ಟವಾಗಿ ಹೇಳುವುದನ್ನು ಆದಷ್ಟು ಚಿಕ್ಕದಾಗಿ ಸ್ಪಷ್ಟವಾಗಿ ಹೇಳಿ ಮುಗಿಸಿಬಿಡಬೇಕು.
ಮುಖದ ಭಾವದ ಕಡೆಗಿರಲಿ ಗಮನ
/newsfirstlive-kannada/media/post_attachments/wp-content/uploads/2024/09/BODY-LANGAUGE-FE.jpg)
ನಾವು ಮಾತನಾಡುವಾಗ ಒಂದು ಮಂದಹಾಸ ನಮ್ಮ ಮುಖದ ಮೇಲೆ ಸದಾ ಇಟ್ಟುಕೊಳ್ಳಬೇಕು. ಭಾವನೆಗಳನ್ನು ಆದಷ್ಟು ನಿಯಂತ್ರಣದಲ್ಲಿಟ್ಟುಕೊಂಡು ಮಾತನಾಡಬೇಕು. ಅತೀ ಭಾವುಕತೆಗೆ, ಭಾವೋದ್ವೇಕ್ಕೆ ಒಳಗಾಗಿ ಮಾತನಾಡುವುದು ಸರಿಯಲ್ಲ. ನಗು ಮುಖದೊಂದಿಗೆ ಒಂದು ಸಂಭಾಷಣೆ ನಡೆದಾಗ ಅದು ನಿಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ತುಂಬುತ್ತದೆ ಜೊತೆಗೆ ಎದುರಿಗಿರುವವರಿಗೆ ನಿಮ್ಮ ಮೇಲೆ ಒಂದು ಸರಿಯಾದ ಭಾವ ಹುಟ್ಟುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us