newsfirstkannada.com

×

Fatty Liver ನಿಂದ ಉಂಟಾಗುವ ಸಮಸ್ಯೆಗಳೇನು ಗೊತ್ತಾ? ಇದನ್ನು ತಡೆಯುವುದು ಹೇಗೆ..?

Share :

Published September 30, 2024 at 11:39am

Update September 30, 2024 at 12:08pm

    ಫ್ಯಾಟಿ ಲಿವರ್​, ಕೇವಲ ಮದ್ಯಪಾನಿಗಳಲ್ಲಿ ಮಾತ್ರ ಕಾಣಿಸುವ ಸಮಸ್ಯೆಯಾ?

    ಫ್ಯಾಟಿ ಲಿವರ್​ಗೆ ಚಿಕಿತ್ಸೆ ಇದೆಯಾ? ಬರದಂತೆ ತಡೆಯುವ ಮಾರ್ಗಗಳು ಯಾವುವು?

    ಫ್ಯಾಟಿ ಲಿವರ್​ನಿಂದಾಗಿ ದೇಹದಲ್ಲಿ ಸೃಷ್ಟಿಯಾಗುವ ಇತರ ಕಾಯಿಲೆಗಳಾವುವು?

ಫ್ಯಾಟಿ ಲೀವರ್ ಅಂದ ತಕ್ಷಣ ಇದು ಕೇವಲ ಮದ್ಯಪಾನದಿಂದ ಬರುವಂತ ಸಮಸ್ಯೆ ಎನ್ನುವ ಒಂದು ನಂಬಿಕೆ ಎಲ್ಲರಲ್ಲಿ ಮನೆ ಮಾಡಿದೆ. ಆದ್ರೆ ಫ್ಯಾಟಿ ಲೀವರ್ ಕೇವಲ ಮದ್ಯಪಾನದಿಂದ ಬರುವ ಸಮಸ್ಯೆಯಲ್ಲ. ಈ ಆರೋಗ್ಯ ಸಮಸ್ಯೆ ಅನೇಕ ಕಾರಣಗಳಿಂದಾಗಿ ಬರುತ್ತದೆ.ಅತಿಯಾದ ಬೊಜ್ಜು, ಅತಿಯಾದ ಮದ್ಯಪಾನ, ಮಧಮೇಹ ಸೇರಿದಂತೆ ಹಲವು ಕಾರಣಗಳಿಂದಾಗಿ ಈ ಸಮಸ್ಯೆ ಉತ್ಪತ್ತಿಯಾಗುತ್ತದೆ.

ಈ ಒಂದು ಸಮಸ್ಯೆಗೆ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ನೀಡದೇ ಇದ್ದರೆ ಮುಂದೆ ದೊಡ್ಡ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಲಿದೆ. ಫ್ಯಾಟಿ ಲೀವರ್ ಲೀವರ್ ಕ್ಯಾನ್ಸರ್​ನಂತಹ, ಲಿವರ್ ಫೆಲ್ಯೂವರ್​ನಂತಹ ಸಮಸ್ಯೆಗಳನ್ನೂ ಕೂಡ ತಂದೊಡ್ಡುತ್ತದೆ. ಹೀಗಾಗಿ ಇದನ್ನು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ನೀಡಬೇಕು. ಇಲ್ಲವೇ ಅದು ಬರದಂತೆ ತಡೆಯುವ ಅನೇಕ ದಾರಿಗಳಿವೆ. ಅವುಗಳನ್ನು ನಮ್ಮದಾಗಿಸಿಕೊಳ್ಳಬೇಕು. ತೂಕವನ್ನು ಸರಿಯಾಗಿ ನಿರ್ವಹಣೆ ಮಾಡುವ ಮೂಲಕ ನಾವು ಈ ಫ್ಯಾಟಿ ಲಿವರ್​ನ್ನು ತಡೆಯಲು ಸಾಧ್ಯವಿದೆ. ಸ್ಥೂಲಕಾಯದವರಲ್ಲಿ ಇದು ಹೆಚ್ಚು ಕಂಡು ಬರುವುದರಿಂದ ಅವರು ನಿತ್ಯ ವ್ಯಾಯಾಮ ತಮ್ಮದಾಗಿಸಿಕೊಂಡು ಈ ಫ್ಯಾಟಿ ಲಿವರ್​ನಿಂದ ಮುಕ್ತಿ ಪಡೆಯಬಹುದು ಅಥವಾ ಅದು ಬರದಂತೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Trending ನಲ್ಲಿದೆ ಬೆಂಡೆಕಾಯಿ ನೆನೆಯಿಟ್ಟು ನೀರು ಕುಡಿಯುವ ವಿಡಿಯೋ; ನಿಜಕ್ಕೂ ಇದರಿಂದ ಚರ್ಮದ ಕಾಂತಿ ಹೆಚ್ಚುತ್ತಾ?

ನಿತ್ಯ ವ್ಯಾಯಾಮ ಮಾಡುವ ಮೂಲಕ ಬೊಜ್ಜು ಕರಗುತ್ತದೆ. ಬೊಜ್ಜು ಕರಗುವುದರಿಂದಾಗಿ ಫ್ಯಾಟಿ ಲಿವರ್​ನಂತಹ ಸಮಸ್ಯೆಗಳು ನಮ್ಮನ್ನು ಬಾಧಿಸುವುದಿಲ್ಲ. ಇನ್ಸೂಲಿನ್​ ಸೆನ್ಸಿಟಿವಿಟಿಯಿಂದ ನಮ್ಮನ್ನು ನಿತ್ಯ ವ್ಯಾಯಾಮ ದೂರ ಇಡುತ್ತದೆ. ದಿನಕ್ಕೆ ಕನಿಷ್ಠ 150 ನಿಮಿಷ ವ್ಯಾಯಾಮ ನಮ್ಮದಾಗಿಸಿಕೊಂಡರೆ ನಾವು ಫ್ಯಾಟಿ ಲಿವರ್​ನ್ನು ತಡೆಯಬಹುದು ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: ಐಶ್ವರ್ಯ ರೈ ಮತ್ತೊಂದು ವಿಡಿಯೋ ವೈರಲ್, ಐಫಾ ಅವಾರ್ಡ್ ಪಡೆದುಕೊಂಡ ಐಶ್ ಮಾಡಿದ್ದೇನು?

ಸಂಸ್ಕರಿಸಿದ ಆಹಾರ, ಹೆಚ್ಚು ಸಕ್ಕರೆ ತಿನ್ನುವುದು ಇವು ಲಿವರ್​​ನ ಭಾಗದಲ್ಲಿ ಬೊಜ್ಜನ್ನು ಬೆಳೆಸುವ ಸಾಧ್ಯತೆ ಇರುತ್ತದೆ. ನಾವು ಸರಿಯಾದ ಆಹಾರ ಪದ್ಧತಿ ಪಾಲನೆಯಿಂದ, ಬೊಜ್ಜುರಹಿತ ಆಹಾರ ಸೇವನೆಯಿಂದ ಈ ರೀತಿಯ ಫ್ಯಾಟಿ ಲಿವರನ್ನು ಬರದಂತೆ ತಡೆಯಬಹುದು.
ಮಿತಿಯಾದ ಮದ್ಯಪಾನ ಇಲ್ಲವೇ ಅದರಿಂದ ದೂರ ಇರುವುದರಿಂದಲೂ ನಾವು ಫ್ಯಾಟಿ ಲೀವರ್ ಸಮಸ್ಯೆಯನ್ನು ಬರದಂತೆ ತಡೆಯಬಹುದು. ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದಾಗಿ ನಾವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವದೂ ಕೂಡ ಫ್ಯಾಟಿ ಲಿವರ್ ಸಮಸ್ಯೆಯಿಂದ ದೂರ ಉಳಿಯುವ ಮಾರ್ಗ.

ಇದನ್ನೂ ಓದಿ: ಸುಬ್ಬ-ಸುಬ್ಬಿಗೆ ಬೇಲಾ? ಜೈಲಾ? ಇಂದು ನಟ ದರ್ಶನ್‌ಗೆ ನಿರ್ಣಾಯಕ ದಿನ; ಜಾಮೀನು ಸಿಗುತ್ತಾ?

ಹೆಚ್ಚು ಹೆಚ್ಚು ಫೈಬರ್ ಅಂಶವಿರುವ ಅಂದ್ರೆ ತರಕಾರಿ, ಹಣ್ಣುಗಳು, ಕಾಳುಗಳಂತಹ ಸರಳವಾಗಿ ಜೀರ್ಣವಾಗುವ ಆಹಾರ ಸೇವಿಸುವುದರಿಂದಲೂ ನಾವು ಈ ಸಮಸ್ಯೆಯಿಂದ ಪಾರಾಗಬಹುದು. ಹೀಗಾಗಿ ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆ ಹಿಡಿಯಲು ಇವೆಲ್ಲಾ ಮಾರ್ಗಗಳನ್ನು ನಮ್ಮದಾಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅದರ ಜೊತೆ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಕಿಡ್ನಿಗೆ ಸಂಬಂಧಿಸಿದ ರೋಗಗಳು ಕೂಡ ನಮ್ಮನ್ನು ಆವರಿಸಿಕೊಳ್ಳುತ್ತವೆ. ಆದ್ದರಿಂದ ಅದು ಬರದಂತೆ ಕಾಪಾಡುವುದು ನಮ್ಮ ಕೈಯಲ್ಲಿಯೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Fatty Liver ನಿಂದ ಉಂಟಾಗುವ ಸಮಸ್ಯೆಗಳೇನು ಗೊತ್ತಾ? ಇದನ್ನು ತಡೆಯುವುದು ಹೇಗೆ..?

https://newsfirstlive.com/wp-content/uploads/2024/09/FATTY-LIVER.jpg

Load More