ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ನಲ್ಲಿ ಬೆಂಡೆಕಾಯಿಯ ಹೊಸ ಹೆಲ್ತ್ಡ್ರಿಂಕ್
ಬೆಂಡೆಕಾಯಿ ರಾತ್ರಿಯಿಡಿ ನೆನೆಯಿಟ್ಟು ಅದರ ನೀರು ಕುಡಿದರೆ ಪ್ರಯೋಜನೆಗಳೇನು
ಇದರಿಂದ ಚರ್ಮದ ಕಾಂತಿ ನಿಜಕ್ಕೂ ಹೆಚ್ಚುತ್ತಾ, ತೂಕ ಇಳಿಸುತ್ತಾ ಈ ಹೆಲ್ತ್ಡ್ರಿಂಕ್
ನಿಮಗೆ ಬೆಂಡೆಕಾಯಿ ಅಡುಗೆಯಲ್ಲಿ ಎಷ್ಟು ಇಷ್ಟವಾಗುತ್ತೊ ಗೊತ್ತಿಲ್ಲ. ಆದರೆ ಬೆಂಡೆಕಾಯಿ ಆರೋಗ್ಯದ ವಿಷಯದಲ್ಲಿ ಎಷ್ಟು ಉತ್ತಮ ಅನ್ನೋದರ ಚರ್ಚೆಯಂತೂ ಆಗುತ್ತಲೇ ಇರುತ್ತದೆ. ಈಗ ಬೆಂಡೆಕಾಯಿ ವಿಷಯ ಆನ್ಲೈನ್ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಹೊಸ ಹೆಲ್ತ್ ಡ್ರಿಂಕ್ ವಿಚಾರದಲ್ಲಿ ಬೆಂಡೆಕಾಯಿ ಈಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಬೆಂಡೆಕಾಯಿಯಿಂದ ಸಿದ್ಧಪಡಿಸಲಾಗುವು ಹೆಲ್ತ್ ಡ್ರಿಂಕ್ನಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಹೊಸ ಚರ್ಚೆಯೊಂದು ಶುರುವಾಗಿದೆ. ಅದರ ಬಗ್ಗೆ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: ಈ ಕೆಲಸ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗಲಿದೆ; ನೀವು ಓದಲೇಬೇಕಾದ ಸ್ಟೋರಿ!
View this post on Instagram
ನೀವು ಕಾಂತಿಯುತ ತ್ವಚೆ ಹೊಂದಬೇಕಾ? ನಿಮ್ಮ ದೇಹದ ತೂಕ ಇಳಿಯಬೇಕಾ ಹಾಗಿದ್ರೆ ಈ ನೈಸರ್ಗಿಕ ಹೆಲ್ತ್ ಡ್ರಿಂಕ್ ಕುಡಿಯಿರಿ ಅನ್ನೋ ಮಾತುಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಹರಿದು ಬರುತ್ತಿವೆ. ಬೆಂಡೆಕಾಯಿಯಿಂದಲೇ ಒಂದು ಶುದ್ಧ ಹೆಲ್ತ್ಡ್ರಿಂಕ್ನ್ನು ತಯಾರಿಸಲಾಗುತ್ತಿದೆ. ಅವುಗಳ ವಿಡಿಯೋಗಳು ಈಗ ದೊಡ್ಡದಾಗಿ ಹರಿದಾಡುತ್ತಿವೆ. ಬೆಂಡೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ. ಒಂದು ಜಾರ್ನಲ್ಲಿ ನೀರು ಹಾಕಿ ಅದರಲ್ಲಿ ಕತ್ತರಿಸಿದ ಬೆಂಡೆಕಾಯಿಯ ತುಣುಕುಗಳನ್ನು ಹಾಕಿ ರಾತ್ರಿಯಿಡಿ ನೆನೆಯಿಟ್ಟು ಬೆಳಗ್ಗೆ ಬೆಂಡೆಕಾಯಿಯನ್ನು ಪ್ರತ್ಯೇಕಿಸಿ ಆ ನೀರನ್ನು ಕುಡಿಯುವುದರಿಂದ ಅನೇಕ ಆರೋಗ್ಯದ ಪ್ರಯೋಜನಗಳಿವೆ ಎಂದು ಹೇಳಲಾಗುತ್ತಿದೆ. ಇದರಿಂದ ನಮ್ಮ ತ್ವಚೆ ಇನ್ನಷ್ಟು ಕಾಂತಿಯುತವಾಗಿ ಹೊಳೆಯುತ್ತದೆ. ತೂಕ ಇಳಿಸಿಕೊಳ್ಳಬೇಕು ಅನ್ನುವವರಿಗೆ ಇದು ವರವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ರೇಬೀಸ್ ಬಗ್ಗೆ ಸಾರ್ವಜನಿಕರಲ್ಲಿರುವ ಐದು ತಪ್ಪು ಕಲ್ಪನೆಗಳೇನು? ಸತ್ಯಗಳೇನು..?
ಈ ಬಗ್ಗೆ ಆರೋಗ್ಯ ತಜ್ಞರನ್ನು ಕೇಳಿದಾಗ ಬೆಂಡೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಇರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಮ್ಯಾಗ್ನೆಷಿಯಮ್ ಮತ್ತು ಪೋಟ್ಯಾಷಿಯಮ್ ಕೂಡ ಈ ಒಂದು ತರಕಾರಿ ಹೊಂದಿದೆ. ಫೈಬರ್ ಜೊತೆಗೆ ಅತಿ ಕಡಿಮೆ ಕೊಲಾಸ್ಟ್ರಾಲ್ ಹೊಂದಿರುವ ತರಕಾರಿ ಇದು. ಆದರೆ, ಸದ್ಯ ಟ್ರೆಂಡಿಂಗ್ನಲ್ಲಿರುವ ಹೆಲ್ತ್ ಡ್ರಿಂಕ್ ಅಷ್ಟು ರುಚಿಕರವಲ್ಲದ್ದು ಹಾಗೂ ಅವರು ಹೇಳುವ ಹಾಗೆ ತ್ವಚೆಯ ಕಾಂತಿಯಲ್ಲಿ ಹೊಳಪು ನೀಡುವಂತಹ ಯಾವುದೇ ಮ್ಯಾಜಿಕ್ ಇದರಿಂದ ಆಗುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ನವದೆಹಲಿಯ ಧರ್ಮಶಿಲಾ ನಾರಾಯಣ ಆಸ್ಪತ್ರೆಯ ಸಿನಿಯರ್ ಡಯಟಿಷಿಯನ್ ಪಾಯಲ್ ಶರ್ಮಾ ಬೆಂಡೆಕಾಯಿ ನೆನೆಯಿಟ್ಟ ನೀರು ಬೆಳಗ್ಗೆ ಕುಡಿಯುವುದು ಅಷ್ಟು ರುಚಿಕರವಾಗಿರುವುದಿಲ್ಲ. ಇದರಿಂದ ಒಂದು ಮಟ್ಟಕ್ಕೆ ಮಧಮೇಹವನ್ನು ನಿಯಂತ್ರಿಸಬಹುದು. ಬೆಂಡೆಕಾಯಿಯಲ್ಲಿ ಫೈಬರ್ ಅಂಶ ಹೆಚ್ಚು ಇರುವುದರಿಂದ ಪಚನಕ್ರಿಯೆಯೂ ಕೂಡ ಉತ್ತಮವಾಗುತ್ತದೆ. ಆದ್ರೆ ಈ ಒಂದು ನೀರು ಕುಡಿಯುವುದರಿಂದಲೇ ತೂಕ ಇಳಿದು ಬಿಡುತ್ತೆ. ಚರ್ಮದ ಕಾಂತಿ ಹೆಚ್ಚುತ್ತದೆ ಅನ್ನುವುದು ಕೇವಲ ಭ್ರಮೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ