newsfirstkannada.com

×

ಈ ಕೆಲಸ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗಲಿದೆ; ನೀವು ಓದಲೇಬೇಕಾದ ಸ್ಟೋರಿ!

Share :

Published September 29, 2024 at 6:24am

    ನಿಮ್ಮ ಮೆದುಳನ್ನು ಸದಾ ಚಟುವಟಿಕೆಯಿಂದ ಇಡಲು ಮಾಡಬೇಕಾಗಿದ್ದೇನು

    ಈ ಅಭ್ಯಾಸಗಳು ನಿಮ್ಮದಾದದಲ್ಲಿ ಆರೋಗ್ಯಕರ ಮೆದುಳು ನಿಮ್ಮದಾಗಲಿದೆ

    ದೇಹಕ್ಕೆ ಬೇಕಾದಂತೆ ಮೆದುಳಿಗೂ ಬೇಕು ಕೆಲವು ಎಕ್ಸ್​ಸೈಸ್​ಗಳು, ಯಾವುವು?

ಮೆದುಳು ಇಡೀ ನಮ್ಮ ದೇಹವನ್ನ ನಿಯಂತ್ರಿಸುವ ಶಕ್ತಿ ಕೇಂದ್ರ. ಒಂದು ಸೊಳ್ಳೆ ಕಚ್ಚಿದರೂ ಕೂಡ ದೇಹದಲ್ಲಿ ಮೊದಲು ಪ್ರತಿಕ್ರಿಯಿಸಿವುದೇ ನಮ್ಮ ಮೆದಳು. ದೇಹದ ಪ್ರತಿ ಸ್ಪಂದನೆಯೂ ಮೆದುಳಿನಿಂದಲೇ ಶುರುವಾಗುತ್ತದೆ. ಉಳಿದ ದೇಹಭಾಗಗಳಿಗೆ ನಾವು ವ್ಯಾಯಾಮದ ಮೂಲಕ ಬಲಗೊಳಿಸುತ್ತವೆ. ವಜ್ರಕಾಯವನ್ನಾಗಿಸುತ್ತೇವೆ. ಆದ್ರೆ ಮೆದುಳನ್ನು ಕೂಡ ನಾವು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ಅದು ಎಂದಿಗೂ ಜಡತ್ವಕ್ಕೆ ಒಳಗಾದದಂತೆ ನಾವು ನೋಡಿಕೊಳ್ಳಬೇಕು. ಮೆದುಳು ಎಷ್ಟು ಚುರುಕಾಗಿರುತ್ತದೆಯೋ ಅಷ್ಟು ಒಳ್ಳೆಯ ಆರೋಗ್ಯ ಹಾಗೂ ಕ್ರಿಯಾಶೀಲತೆ ಸಂವೇದನಾಶೀಲತೆ ನಮ್ಮದಾಗುತ್ತದೆ. ಹೀಗಾಗಿ ಮೆದುಳಿಗೂ ಕೂಡ ಕೆಲವು ವ್ಯಾಯಾಮಗಳಿವೆ. ಕೆಲವು ಅಭ್ಯಾಸಗಳನ್ನು ನಮ್ಮದಾಗಿಸಿಕೊಳ್ಳುವ ಮೂಲಕ ನಾವು ಮೆದುಳನ್ನು ಟ್ರೇನ್ ಮಾಡಬಹುದು.

ಹೊಸ ಹೊಸ ಅಭ್ಯಾಸಗಳನ್ನು ಕಲಿಯಿರಿ
ನಾವು ಒಂದು ವೃತ್ತಿಗೆ ಅಂಟಿಕೊಂಡರೇ, ಅದೊಂದೇ ನಮ್ಮ ಬದುಕಿನ ಭಾಗವಾಗಿಸಿಕೊಂಡರೆ ನೀವು ನಿಮ್ಮ ಕ್ರಿಯಾಶೀಲತೆಯಿಂದ ವಂಚಿತರಾಗುತ್ತಿದ್ದೀರಿ. ನಿಮ್ಮ ಮೆದುಳನ್ನು ಜಡತ್ವಕ್ಕೆ ನೂಕುತ್ತಿದ್ದೀರಿ ಎಂದೇ ಅರ್ಥ. ನಿಮ್ಮಲ್ಲಿ ಕ್ರಿಯಾಶೀಲತೆ ಬೆಳೆಯಬೇಕಾದರೆ ಕೆಲವು ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಕೆಲಸ ಜೊತೆಗೆ ಬೇರೆ ಕೆಲಸಗಳಲ್ಲೂ ಆಸಕ್ತಿ ಬೆಳಸಿಕೊಳ್ಳಬೇಕು. ಪೇಟಿಂಗ್​, ಅಡುಗೆ ಮಾಡುವುದು ಹೊಸ ಆಟ ಇವೆಲ್ಲವೂ ನಿಮ್ಮ ಮೆದುಳನ್ನು ಮತ್ತಷ್ಟು ಚಟುವಟಿಕೆಯಿಂದ ಇಡಲು ಅನುಕೂಲಕರವಾಗಿವೆ.

ಇದನ್ನೂ ಓದಿ: ರೇಬೀಸ್​ ಬಗ್ಗೆ ಸಾರ್ವಜನಿಕರಲ್ಲಿರುವ ಐದು ತಪ್ಪು ಕಲ್ಪನೆಗಳೇನು? ಸತ್ಯಗಳೇನು..?

ಸಂಗೀತವ ವಾದ್ಯಗಳನ್ನು ನುಡಿಸಲು ಕಲಿಯಿರಿ
ಸಂಗೀತ ಬದುಕಿಗೆ ಹೊಸ ರಂಗು ತುಂಬುವ ಒಂದು ಸಾಧನ. ಯಾವುದೋ ನದಿಯ ಇಲ್ಲವೇ ಸಮುದ್ರ ತೀರದಲ್ಲಿ ಕುಳಿಲು. ಕೊಳಲು, ಪಿಯಾನೋ, ವಾಯಲಿನ್​ನ ಸಂಗೀತಗಳನ್ನು ಕೇಳುತ್ತಾ ಕುಳಿತರೆ ಅದರ ಸಂತಸವೇ ಬೇರೆ. ಸಂಗೀತಕ್ಕೆ ಮನಸ್ಸನ್ನು ಪ್ರಫುಲ್ಲಗೊಳಿಸುವ ಆಹ್ಲಾದಗೊಳಿಸುವ ಶಕ್ತಿ ಇದೆ, ಹೀಗಾಗಿ ನೀವು ಕೂಡ ಸಂಗೀತ ವಾದ್ಯಗಳನ್ನು ನುಡಿಸುವುದನ್ನು ಕಲಿತರೆ, ಅದು ಮೆದುಳಿಗೆ ನೀಡುವ ವ್ಯಾಯಾಮ ಇದರಿಂದ ನಿಮ್ಮ ಮೆದುಳು ಹೆಚ್ಚು ಶಾಂತವಾಗಿರುತ್ತದೆ. ಹೆಚ್ಚು ಕ್ರಿಯಾಶೀಲವಾಗಿರುತ್ತದೆ.

ಇದನ್ನೂ ಓದಿ:ನಿತ್ಯ ಪ್ರಾಣಾಯಾಮದಿಂದ ಮಾಡುವುದರಿಂದ ಇವೆ 8 ಪ್ರಯೋಜನಗಳು; ಯಾವುವು?

ಹೊಸ ಭಾಷೆಗಳನ್ನು ಕಲಿಯಿರಿ
ಹೊಸ ಭಾಷೆಗಳನ್ನು ಕಲಿಯೋದು ಕೂಡ ಒಂದು ಸವಾಲು. ಇದನ್ನು ನಾವು ರೂಢಿಯಲ್ಲಿಟ್ಟುಕೊಳ್ಳಬೇಕು ಹೊಸ ಹೊಸ ಭಾಷೆಗಳನ್ನು ಕಲಿಯುವ ಮೂಲಕ ಮೆದುಳಿಗೆ ಹೊಸ ಸವಾಲುಗಳನ್ನು ನೀಡಬೇಕು. ಇದು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮನ್ನು ನೀವು ಹೊಸ ರೀತಿಯಲ್ಲಿ ಅಭಿವ್ಯಕ್ತಿಪಡಿಸುವ ಹೊಸ ಹಾದಿಯನ್ನು ತೆರೆಯುತ್ತದೆ.

ದೈಹಿಕ ವ್ಯಾಯಾಮಗಳು ರೂಢಿಯಲ್ಲಿರಲಿ
ಸದೃಢ ಮನಸ್ಸಿದ್ದಲ್ಲಿ ಸದೃಢ ದೇಹವಿರುತ್ತದೆ ಎಂಬ ಗಾದೆ ಮಾತು ಇದೆ. ಅದರಂತೆ ನಾವು ನಮ್ಮ ದೇಹವನ್ನು ಸದೃಢವಾಗಿಟ್ಟಷ್ಟು ನಮ್ಮ ಮೆದುಳು ಕೂಡ ಆರೋಗ್ಯಕರವಾಗಿರುತ್ತದೆ. ದೈಹಿಕ ಕಸರತ್ತಿನಿಂದ ಮೆದುಳಿಗೆ ಹೆಚ್ಚಿನ ರಕ್ತದ ಹರಿವು ಉಂಟಾಗುವುದರಿಂದ ಮೆದುಳು ಹೆಚ್ಚು ಆರೋಗ್ಯಕರವಾಗಿರುತ್ತದೆ.

ಇದನ್ನೂ ಓದಿ: ICMR ನಿಂದ ಭಾರತೀಯರ ಡಯಟ್​ ಬಗ್ಗೆ ಮಾರ್ಗಸೂಚಿ ಬಿಡುಗಡೆ; ನಾವು ಸೇವಿಸುವ ಆಹಾರ ಹೇಗಿರಬೇಕು ಗೊತ್ತಾ?

ಪ್ರಕೃತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ
ಈ ಜಗದ ಪ್ರತಿ ಜೀವಿಯೂ ಕೂಡ ಪ್ರಕೃತಿಯ ಮಾತೆಯ ಮಕ್ಕಳೇ. ನಾವು ಆ ಪ್ರಕೃತಿಯೊಂದಿಗೆ ನಾವು ಕೆಲವು ಸಮಯ ಕಳೆಯಬೇಕು. ಚಾರಣ, ಹಿಮಪಯಣ, ಹೆಚ್ಚು ಹೆಚ್ಚು ಮರಗಳು ಇರುವ ಜಾಗದಲ್ಲಿ ಮಾಡುವ ವಾಕಿಂಗ್​ ಇವೆಲ್ಲವೂ ನಮ್ಮ ಮೆದುಳನ್ನು ಹೆಚ್ಚು ಚಟುವಟಿಕೆಯಿಂದ ಇರುವಂತೆ ಮಾಡುತ್ತವೆ.

 ಈ ರೀತಿಯ ಕೆಲವು ಆಟಗಳನ್ನು ಆಡಿ
ನಿಮ್ಮ ಮೆದುಳಿಗೆ ಸವಾಲನ್ನೊಡ್ಡಬಲ್ಲಂತ ಆಟಗಳಲ್ಲಿ ನೀವು ತೊಡುವುದು ಕೂಡ ನಿಮ್ಮ ಮೆದುಳಿಗೆ ನೀಡುವ ಎಕ್ಸ್​ಸೈಸ್​. ಚೆಸ್, ಲುಡೊನಂತಹ ಸಮಸ್ಯೆಗಳನ್ನು ಬಗೆಹರಿಸುವಂತ ಆಟಗಳನ್ನು ಆಡುವುದು ಒಳ್ಳೆಯದು. ಚೆಸ್​ ಇದರಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತದೆ. ಪಜಲ್ ಸುಡುಕೋದಂತಹ ಆಟಗಳನ್ನು ಆಡುವುದು ಒಳ್ಳೆಯದುನೀವು ನಿತ್ಯ ಸುದ್ದಿ ಪತ್ರಿಕೆ ಓದುತ್ತಿದ್ದಲ್ಲಿ ಅಲ್ಲಿ ಬರುವ ಪದಬಂಧ ಹಾಗೂ ಪಜಲ್​ಗಳಂತಹ ಆಟಗಳನ್ನು ಆಡಿ. ಅದರಿಂದ ನಿಮ್ಮ ಮೆದುಳಿಗೆ ಒಳ್ಳೆಯ ವ್ಯಾಯಾಮ ನೀಡಿದಂತೆ ಆಗುತ್ತದೆ. ನಿಮ್ಮಲ್ಲಿ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತಹ ಗುಣಗಳು. ಲೀಡರ್​ಶಿಪ್ ಕ್ವಾಲಿಟಿಗಳು ನಿಮ್ಮದಾಗುತ್ತವೆ.

ಕಥೆ ಕವನಗಳನ್ನು ಓದುವ ಬರೆಯುವ ಹವ್ಯಾಸ ಇಟ್ಟುಕೊಳ್ಳಿ
ಬದುಕು ಭಾವನೆಗಳ ಗುಚ್ಚಗಳು ಅನೇಕರು ಅನೇಕ ರೀತಿ ಹೊರ ಹಾಕುತ್ತಾರೆ. ಆದ್ರೆ ಅಕ್ಷರಗಳ ಮೂಲಕ ಭಾವನೆಗಳನ್ನು ಹೊರಹಾಕುವುದು ಇದೆಯಲ್ಲ ಅದರ ಮೋಡಿಯೇ ಬೇರೆ. ಅಲ್ಲೊಂದು ಚೆಂದದ ಅಭಿವ್ಯಕ್ತಿ ಇರುತ್ತದೆ. ನಿಮ್ಮ ಕಲ್ಪನೆಗಳಿಗೆ ಹೊಸ ರೆಕ್ಕೆ ಪುಕ್ಕಗಳನ್ನು ಬೆಳೆಸುವ ಶಕ್ತಿ ಕವನ ಕಥೆಗಳಲ್ಲಿವೆ. ಇದು ನಿಮ್ಮ ಭಾಷಾಜ್ಞಾನದ ಕೌಶಲ್ಯವನ್ನು ವೃದ್ಧಿಸುವುದು ಮಾತ್ರವಲ್ಲ ನಿಮ್ನ ಕ್ರಿಯಾಶೀಲತೆಯನ್ನು ಕೂಡ ವೃದ್ಧಿಗೊಳಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಕೆಲಸ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗಲಿದೆ; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/09/brain-exercises.jpg

Load More