newsfirstkannada.com

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಶಿಲ್ಪಾ ಶೆಟ್ಟಿ ತಂಗಿ; ಶಮಿತಾ ಶೆಟ್ಟಿಗೆ ಏನಾಗಿದೆ ಗೊತ್ತಾ?

Share :

Published May 14, 2024 at 6:28pm

  ಎಲ್ಲಾ ಮಹಿಳೆಯರಿಗೂ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಸಲಹೆ

  ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ ಶಮಿತಾ ಶೆಟ್ಟಿಗೆ ಆಗಿದ್ದೇನು?

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಬೆಡ್​ ಮೇಲಿನ ವಿಡಿಯೋ

ಬಾಲಿವುಡ್​ ಖ್ಯಾತ​ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ಶಮಿತಾ ಶೆಟ್ಟಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ನಟಿ ಶಮಿತಾ ಶೆಟ್ಟಿ ಅವರು ಎಂಡೊಮೆಟ್ರಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಅದಕ್ಕಾಗಿ ಸೂಕ್ತವಾದ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಎಲ್ಲಾ ಮಹಿಳೆಯರಿಗೂ ಈ ಬಗ್ಗೆ ಜಾಗೃತರಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಅಂತ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!

ನನಗೆ ಎಂಡೊಮೆಟ್ರಿಯೊಸಿಸ್ ಇದೆ. ಅದು ಏನೆಂದು ನನಗೂ ಗೊತ್ತಿರಲಿಲ್ಲ. ಎಲ್ಲ ಮಹಿಳೆಯರು ಇದನ್ನು ಗೂಗಲ್​ ಮಾಡಿ ಎಂಡೊಮೆಟ್ರಿಯೊಸಿಸ್ ಸಮಸ್ಯೆ ಎಂದರೆ ಏನೆಂದು ತಿಳಿದುಕೊಳ್ಳಿ. ಅನೇಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮಗೂ ಈ ಸಮಸ್ಯೆ ಇರಬಹುದು. ಇದೆಲ್ಲಾ ನನ್ನ ದೇಹದ ನೋವಿನಿಂದಾಗಿ ಆಗುತ್ತಿದೆ ಅಂತಾ ಹೇಳಿಕೊಂಡಿದ್ದಾರೆ.

ಈ ವಿಡಿಯೋ ಜೊತೆಗೆ ಇಂದು ಸುಮಾರು 40% ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆಯೇ. ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ತಿಳಿದಿಲ್ಲ. ನನ್ನ ನೋವಿನ ಮೂಲ ಕಾರಣವನ್ನು ಕಂಡುಕೊಳ್ಳುವವರೆಗೂ ಶ್ರಮವಹಿಸಿದ ನನ್ನ ವೈದ್ಯರಾದ ನನ್ನ ಸ್ತ್ರೀರೋಗತಜ್ಞ ಡಾ ನೀತಾ ವರ್ತಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ನನ್ನ ರೋಗವನ್ನು ತೆಗೆಯಲಾಗಿದೆ. ನಾನು ಈಗ ಆರೋಗ್ಯವಾಗಿ ಇದ್ದೇನೆ. ದೈಹಿಕವಾಗಿ ನೋವು-ಮುಕ್ತ ದಿನಗಳನ್ನು ಎದುರು ನೋಡುತ್ತಿದ್ದೇನೆ ಅಂತ ಬರೆದುಕೊಂಡಿದ್ದಾರೆ. ಇನ್ನು, ಮಂಗಳೂರು ಮೂಲದ ಶಮಿತಾ ಶೆಟ್ಟಿಗೆ ಸದ್ಯ 45 ವರ್ಷ. ಆದರೆ ನಟಿಗೆ ಇನ್ನೂ ಮದುವೆಯಾಗಿಲ್ಲ. ನಟಿ ಶಮಿತಾ ಅವರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯ ವೀರಯೋಧ ಕೋಲ್ಕತ್ತಾದಲ್ಲಿ ನಿಗೂಢ ಸಾವು; ಹುಟ್ಟೂರಲ್ಲಿ ನೋವಿನ ವಿದಾಯ

ಏನಿದು ಎಂಡೊಮೆಟ್ರಿಯೊಸಿಸ್‌?
ಎಂಡೊಮೆಟ್ರಿಯೊಸಿಸ್ ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತದೆ. ಈ ಕಾಯಿಲೆಯಿಂದ ಸೊಂಟದಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಜೊತೆಗೆ ಗರ್ಭಿಣಿಯಾಗಲು ಮಹಿಳೆಯರಿಗೆ ಕಷ್ಟವಾಗುತ್ತದೆ. ಎಂಡೊಮೆಟ್ರಿಯೊಸಿಸ್​ಗೆ ತುತ್ತಾದ ಮಹಿಳೆಯರ ಮೊದಲ ಮುಟ್ಟಿನ ಅವಧಿಯಲ್ಲಿ ಪ್ರಾರಂಭವಾಗಬಹುದು ಅದು ಋತುಬಂಧದವರೆಗೆ ಇರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ ಶಿಲ್ಪಾ ಶೆಟ್ಟಿ ತಂಗಿ; ಶಮಿತಾ ಶೆಟ್ಟಿಗೆ ಏನಾಗಿದೆ ಗೊತ್ತಾ?

https://newsfirstlive.com/wp-content/uploads/2024/05/shamita-shetty.jpg

Load More