Advertisment

ನೀಟ್ ಪರೀಕ್ಷೆ ಪಾಸ್ ಮಾಡಿ MBBSಗೆ ಆಯ್ಕೆಯಾದ ಬುಡಕಟ್ಟು ವಿದ್ಯಾರ್ಥಿ; ದೇಶದ ಇತಿಹಾಸದಲ್ಲೇ ಮೊದಲು!

author-image
Bheemappa
Updated On
ನೀಟ್ ಪರೀಕ್ಷೆ ಪಾಸ್ ಮಾಡಿ MBBSಗೆ ಆಯ್ಕೆಯಾದ ಬುಡಕಟ್ಟು ವಿದ್ಯಾರ್ಥಿ; ದೇಶದ ಇತಿಹಾಸದಲ್ಲೇ ಮೊದಲು!
Advertisment
  • ಈ ಸಮುದಾಯದಲ್ಲೇ ನೀಟ್ ಪರೀಕ್ಷೆ ಬರೆದ ಮೊಟ್ಟ ಮೊದಲ ಯುವಕ
  • ಯಾವ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡಿದ್ದಾನೆ ಈ ವಿದ್ಯಾರ್ಥಿ?
  • ವಿದ್ಯಾರ್ಥಿ ಪ್ರತಿಭೆ ಗುರುತಿಸಿ 1.2 ಲಕ್ಷ ರೂ. ಫೀಸು ತೆಗೆದುಕೊಂಡಿಲ್ಲ

ಭುವನೇಶ್ವರ್: ಬೋಂಡಾ ಬುಡಕಟ್ಟು ಸಮುದಾಯದ ಯುವಕನೊಬ್ಬ ಎಂಬಿಬಿಎಸ್​ ಕೋರ್ಸ್​ಗಾಗಿ ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಎಕ್ಸಾಂ​ ಪಾಸ್ ಮಾಡಿದ್ದಾನೆ. ಈ 19 ವರ್ಷದ ಯುವಕ ಇತಿಹಾಸದಲ್ಲೇ ಬೋಂಡಾ ಸಮುದಾಯದಲ್ಲೇ ನೀಟ್​ ಪರೀಕ್ಷೆ ಪಾಸ್ ಮಾಡಿದ ಮೊಟ್ಟ ಮೊದಲಿಗ ಎನಿಸಿಕೊಂಡಿದ್ದಾನೆ.

Advertisment

ಇದನ್ನೂ ಓದಿ: SEBI ಸಂಸ್ಥೆಯಲ್ಲಿ ಕೆಲಸ ಮಾಡಲು ಇಷ್ಟ ಇದ್ಯಾ? ಕೂಡಲೇ ಅಪ್ಲೇ ಮಾಡಿ; ಸಂಬಳ ₹70 ಸಾವಿರ!

ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯ ಮುದುಳಿಪದವು ಪಂಚಾಯತ್‌ನ ಬದಬೆಲ್ ಗ್ರಾಮದ ಮಂಗಳ ಮುದುಳಿ (19) ನೀಟ್ ಅನ್ನು ಪಾಸ್ ಮಾಡಿದ ವಿದ್ಯಾರ್ಥಿ. ಸದ್ಯ ಎಂಬಿಬಿಎಸ್ ಕೋರ್ಸ್​​ಗಾಗಿ ಬೆರ್ಹಾಂಪುರದ MKCG ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಡ್ಮಿಷನ್ ಪಡೆದುಕೊಂಡಿದ್ದಾನೆ. ಇಡೀ ಬೋಂಡಾ ಬುಡಕಟ್ಟು ಸಮುದಾಯದ ಬಡ ಕುಟುಂಬದ ವಿದ್ಯಾರ್ಥಿ ಈ ಸಾಧನೆ ಮಾಡಿ ಮೊದಲಿಗ ಎಂದು ಗುರುತಿಸಿಕೊಂಡಿದ್ದಾನೆ.

ಇದನ್ನೂ ಓದಿ: ಐವರು ಟ್ರೈನಿ ಪೊಲೀಸ್​ ಸಬ್​​ ಇನ್​ಸ್ಪೆಕ್ಟರ್​​ಗಳು ಅರೆಸ್ಟ್​​; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

Advertisment

publive-image

ವಿದ್ಯಾರ್ಥಿ ಮಂಗಳ ಮುದುಳಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪ್ರಮುಖವಾಗಿ ಕಾರಣರಾದವರು ಅವರ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಉತ್ಕಲ್ ಕೇಶರಿ ದಾಸ್. ಮಂಗಳ ಮುದುಳಿಯ ಓದಿನಲ್ಲಿ ಯಾವಾಗಲೂ ಚುರುಕಾಗಿದ್ದರಿಂದ ಓದನ್ನು ಮುಂದುವರೆಸುವಂತೆ ಶಿಕ್ಷಕ ಹೇಳುತ್ತಿದ್ದರು. ಹೀಗಾಗಿ ಅವರ ಮಾರ್ಗದರ್ಶನದಂತೆ ಓದು ಮುಂದುವರೆಸಿದ ವಿದ್ಯಾರ್ಥಿ ನೀಟ್​ನಲ್ಲಿ 348 ಮಾರ್ಕ್ಸ್​ ಪಡೆದುಕೊಂಡಿದ್ದನು. ಇಂದು ಡಾಕ್ಟರ್ ಆಗಲು ಎಂಬಿಬಿಎಸ್​ಗೆ ಪ್ರವೇಶ ಪಡೆದುಕೊಂಡಿದ್ದಾನೆ. ಅವರ ಸಮುದಾಯಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ.

ವಿದ್ಯಾರ್ಥಿಯನ್ನು ಬಾಲೇಶ್ವರದಲ್ಲಿರುವ ಕೋಚಿಂಗ್ ಸೆಂಟರ್‌ಗೆ ನನ್ನ ಹಣದಲ್ಲೇ ಸೇರಿಸಿದ್ದೆ. ಆದರೆ ವಿದ್ಯಾರ್ಥಿಯ ಪ್ರತಿಭೆ ಗುರುತಿಸಿದ ಸಂಸ್ಥೆಯು 1.2 ಲಕ್ಷ ರೂಪಾಯಿಗಳನ್ನು ಮನ್ನಾ ಮಾಡಿ, ಉಚಿತವಾಗಿ ಕೋಚಿಂಗ್ ಕೊಟ್ಟಿದೆ ಎಂದು ಶಿಕ್ಷಕ ಹೇಳಿದ್ದಾರೆ. ಇನ್ನು ರ್ಯಾಂಕಿಂಗ್​ನಲ್ಲಿ ರಾಜ್ಯದ ಬುಡಕಟ್ಟು ಪಟ್ಟಿಯಲ್ಲಿ ವಿದ್ಯಾರ್ಥಿ 348 ಮಾರ್ಕ್ಸ್ ಗಳಿಸಿ 261ನೇ Rank  ಪಡೆದುಕೊಂಡಿದ್ದಾರೆ. ಜೊತೆಗೆ ಸರ್ಕಾರಿ ಶಾಲೆಯಲ್ಲಿ ಓದಿದ ಕಾರಣ ಇನ್ನಷ್ಟು ಅಂಕ ನೀಡಿದ್ದರಿಂದ ಸ್ಥಾನ ಪಡೆದುಕೊಂಡಿದ್ದಾರೆ. ನೀಟ್ ಎಕ್ಸಾಂ ಪಾಸ್ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದು ವಿದ್ಯಾರ್ಥಿ ಮಂಗಳ ಮುದುಳಿ ಹೇಳಿಕೊಂಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment