newsfirstkannada.com

ನವಜಾತ ಶಿಶುಗಳ ಪಾಲಿಗೆ ನರರಾಕ್ಷಸಿ ಈ ನರ್ಸ್​.. 7 ಮುಗ್ಧ ಕಂದಮ್ಮಗಳ ಹಿಸುಕಿ ಕೊಂದ ಪಾಪಿ ಈಕೆ..!

Share :

Published August 19, 2023 at 7:30am

Update August 19, 2023 at 11:29am

    ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ನರ್ಸ್​ ಆಗಿದ್ದ ಲೂಸಿ

    ​ಬಾಣಂತಿಯರು ಶೌಚಾಲಯಕ್ಕೆ ಹೋದಾಗ ಮಕ್ಕಳ ಹತ್ಯೆ

    ಸೀರಿಯಲ್​ ಕಿಲ್ಲರ್​ ನರ್ಸ್​ಗೆ ಶಿಕ್ಷೆ ನೀಡಿದ ಕೋರ್ಟ್​

ನರ್ಸ್​ ಕೆಲಸದಂತ ಪುಣ್ಯದ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನವಜಾತ ಶಿಶುಗಳ ಪಾಲಿಗೆ ನರರಾಕ್ಷಸಿಯಾಗಿದ್ದಾಳೆ. ಏನೂ ಅರಿಯದ 7 ಮುಗ್ಧ ಕಂದಮ್ಮಗಳನ್ನ ಕೊಂದು ಸೀರಿಯಲ್ ಕಿಲ್ಲರ್​ ಹಣೆಪಟ್ಟಿ ಕಟ್ಟಿಕೊಂಡಿದ್ದಾಳೆ. ಈ ಮಕ್ಕಳ ಸೀರಿಯಲ್​ ಕಿಲ್ಲರ್​ಗೆ ಭಾರತ ಮೂಲದ ಸಿಬ್ಬಂದಿಯೂ ಒಬ್ಬರು ಸಾಥ್​ ನೀಡಿರೋದು ಶಾಕ್​ ಉಂಟುಮಾಡಿದೆ.

ನರರಾಕ್ಷಸಿ ನರ್ಸ್

ಇಂಗ್ಲೆಂಡ್​ನ ಆಸ್ಪತ್ರೆಯೊಂದರ ಹೆರಿಗೆ ವಾರ್ಡ್​ನಲ್ಲಿ ಈ ಲೂಸಿ ಲೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಳು. ಈ ವೇಳೆ ಹಲವು ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಕೆಲಸವನ್ನು ಈ ಲೂಸಿ ಮಾಡುತ್ತಿದ್ದಳು. ಆದರೆ ಆ ಮೇಲೆ ಈಕೆಗೆ ಅದೇನಾಗ್ತಿತ್ತೋ ಗೊತ್ತಿಲ್ಲ. ಬಾಣಂತಿಯರು ಮಗುವನ್ನು ಬಿಟ್ಟು ಶೌಚಾಲಯಕ್ಕೆ ಹೋದಾಗ ಯಾರಿಗೂ ತಿಳಿಯಂದಂತೆ ಕೊಲೆ ಮಾಡುತ್ತಿದ್ದಳು.. ಹೀಗೆ ಈ ಲೂಸಿ ಲೆಟ್ಟಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ನವಜಾತ ಶಿಶುಗಳನ್ನ ಹತ್ಯೆಮಾಡಿದ್ದಳು. ಸಿರಿಯಲ್​ ಮಕ್ಕಳ ಕಿಲ್ಲರ್​ ಆಗಿ ಎಲ್ಲರಿಗೂ ಶಾಕ್​ ನೀಡಿದ್ದಾಳೆ.

7 ಮಕ್ಕಳನ್ನ ಕೊಂದ ರಾಕ್ಷಸಿಗೆ ಜೀವಾವಧಿ ಶಿಕ್ಷೆ ಪ್ರಕಟ

ಬಾಳಿ ಬದುಕಬೇಕಿದ್ದ 7 ಮಕ್ಕಳ ಜೀವವನ್ನು ಕಿತ್ತುಕೊಂಡ ಲೂಸಿ ಲೆಟ್ಟಿ ಎಂಬ ರಾಕ್ಷಸಿಗೆ ಲಂಡನ್​ನ ಮ್ಯಾಂಚೆಸ್ಟರ್​​ ಕ್ರೌನ್​ ಕೋರ್ಟ್​ ಜೀವಾವಧಿ ಶಿಕ್ಷೆ ನೀಡಿದೆ. ಕೋರ್ಟ್​​ ಈ ಬಗ್ಗೆ ತೀರ್ಪು ಪ್ರಕಟಿಸುತ್ತಿದ್ದಂತೆ ಇಂಗ್ಲೆಂಡ್​ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.. ಅಲ್ಲದೇ ಪೊಲೀಸರ ವಿಚಾರಣೆ ವೇಳೆ ಲೂಸಿ ಇನ್ನೂ ಹಲವರ ಹತ್ಯೆಗೆ ಪ್ರಯತ್ನಿಸಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಮಾತ್ರವಲ್ಲದೇ ಈಕೆ ಇನ್ನೂ 6 ಮಕ್ಕಳ ಹತ್ಯೆಗೆ ಸಂಚು ರೂಪಿಸಿದ್ದು ಪೋಷಕರನ್ನ ಬೆಚ್ಚಿ ಬೀಳುವಂತೆ ಮಾಡಿದೆ.

ಒಟ್ನಲ್ಲಿ ನವಜಾತ ಶಿಶುಗಳ ಪಾಲಿಗೆ ಎರಡನೇ ತಾಯಾಗಿ ಆಸ್ಪತ್ರೆ ವಾರ್ಡ್​ನಲ್ಲಿ ಮಮತೆ ನೀಡಬೇಕಿದ್ದ ಓರ್ವ ನರ್ಸ್​ ನಡೆಸಿರೋ ಕೃತ್ಯ 7 ತಾಯಂದಿರ ಕಣ್ಣೀರಿಗೆ ಕಾರಣವಾಗಿದೆ. ಈ ಘಟನೆ ಬಳಿಕ ಯಾರನ್ನ ನಂಬಬೇಕು ಯಾರನ್ನ ನಂಬಬಾರದು ಅನ್ನೋ ಯಕ್ಷ ಪ್ರಶ್ನೆ ಎಲ್ಲರನ್ನ ಕಾಡತೊಡಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನವಜಾತ ಶಿಶುಗಳ ಪಾಲಿಗೆ ನರರಾಕ್ಷಸಿ ಈ ನರ್ಸ್​.. 7 ಮುಗ್ಧ ಕಂದಮ್ಮಗಳ ಹಿಸುಕಿ ಕೊಂದ ಪಾಪಿ ಈಕೆ..!

https://newsfirstlive.com/wp-content/uploads/2023/08/NURSE.jpg

Load More