newsfirstkannada.com

×

ಆನ್​ಲೈನ್​ ಗೇಮ್​ ಚಟಕ್ಕೆ ಬಿದ್ದ ತಮ್ಮ.. ಅಣ್ಣನ ಮದುವೆಗೆ ಇಟ್ಟಿದ್ದ ಚಿನ್ನಾಭರಣ ಕದ್ದು ಪರಾರಿ.. ಆಮೇಲೇನಾಯ್ತು?

Share :

Published September 13, 2024 at 12:26pm

Update September 13, 2024 at 1:12pm

    ತಮ್ಮನಿಗೆ ಆನ್​ಲೈನ್ ರಮ್ಮಿ ಗೇಮ್​ ಚಟ

    ಗೇಮಿಂಗ್​ ಚಟಕ್ಕೆ ಬಿದ್ದ ಸಾಲ ಮಾಡಿಕೊಂಡಿದ್ದ ತಮ್ಮ

    ಅಣ್ಣನ ಮದುವೆಗೆ ಇಟ್ಟಿದ್ದ ಹಣ, ಚಿನ್ನ ಕದ್ದ ತಮ್ಮ ಸಿಕ್ಕಿದ್ದೆಲ್ಲಿ?

ಆನ್​ಲೈನ್ ರಮ್ಮಿ ಗೇಮ್​​ನಿಂದ ಸೋತ ತಮ್ಮ ತನ್ನ ಅಣ್ಣನ ಮದುವೆಗಾಗಿ ಇಟ್ಟಿದ್ದ ಚಿನ್ನಾಭರಣ ಕದ್ದ ಘಟನೆ ಬೆಂಗಳೂರಿನಲ್ಲಿ  ಬೆಳಕಿಗೆ ಬಂದಿದೆ. ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆದಿತ್ಯ ಬಂಧಿತ ಆರೋಪಿ. ಇದೇ ತಿಂಗಳ 15ಕ್ಕೆ ಅಣ್ಣನ ಮದುವೆ ಫಿಕ್ಸ್ ಆಗಿತ್ತು. ಇದಕ್ಕಾಗಿ ಮನೆಯಲ್ಲಿ ಚಿನ್ನಾಭರಣ ಹಾಗೂ ಹಣ ಇಟ್ಟಿದ್ದರು. ಆದರೆ ಅದನ್ನು ಆದಿತ್ಯ ಕದ್ದು ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: 2nd PU ಪರೀಕ್ಷೆಯಲ್ಲಿ ಭಾರೀ ಬದಲಾವಣೆ; ಹೊಸ ನಿಯಮ ಜಾರಿಗೆ ತಂದ ಸರ್ಕಾರ

ಊಬರ್ ಚಾಲಕನಾಗಿದ್ದ ಆದಿತ್ಯ ವಿಪರೀತ ಆನ್​ಲೈನ್ ಗೇಮ್ ಚಟಕ್ಕೆ ಬಿದ್ದಿದ್ದನು. ಮನೆಯಲ್ಲಿದ್ದ ಎಲ್ಲರೂ ಮದುವೆ ಕಾರ್ಡ್ ಹಂಚಲು ಕೋಲಾರ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಕದ್ದ ತಮ್ಮ ಆದಿತ್ಯ ಆಂಧ್ರಪ್ರದೇಶಕ್ಕೆ ಟ್ರೈನ್​​ ಹತ್ತಿದ್ದಾನೆ.

ಇತ್ತ ಮನೆಗೆ ಬಂದ ಅಣ್ಣನಿಗೆ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ಹಣ ಕಣ್ಮರೆಯಾಗಿರೋದನ್ನು ಕಂಡು ಅನುಮಾನ ಬಂದಿದೆ. ಕೊನೆಗೆ ಪೋಷಕರು ಆದಿತ್ಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ಕೂಡಲೇ ಟವರ್ ಡಂಪ್ ಲೊಕೇಷನ್ ಆಧರಿಸಿ ಆರೋಪಿ ಬಂಧಿಸಿದ್ದಾರೆ.

ಇದನ್ನೂ ಓದಿ: ಒಂದು ಬಾರಿ ಚಾರ್ಜ್​ ಮಾಡಿದ್ರೆ 500km ಕ್ರಮಿಸುತ್ತೆ! ಮಾರುತಿ ಸುಜುಕಿ ಪರಿಚಯಿಸಲು ಸಜ್ಜಾಗಿದೆ ಹೊಸ ಎಲೆಕ್ಟ್ರಿ ವಾಹನ

ಪ್ರಕರಣ ದಾಖಲಾದ 5 ಗಂಟೆಗಳಲ್ಲೇ ಆರೋಪಿ ಆದಿತ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 7 ಲಕ್ಷ ಬೆಲೆ ಬಾಳುವ 100 ಗ್ರಾಂ ಬೆಳ್ಳಿ 102 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್​ಲೈನ್​ ಗೇಮ್​ ಚಟಕ್ಕೆ ಬಿದ್ದ ತಮ್ಮ.. ಅಣ್ಣನ ಮದುವೆಗೆ ಇಟ್ಟಿದ್ದ ಚಿನ್ನಾಭರಣ ಕದ್ದು ಪರಾರಿ.. ಆಮೇಲೇನಾಯ್ತು?

https://newsfirstlive.com/wp-content/uploads/2024/09/Aditya.jpg

Load More