/newsfirstlive-kannada/media/post_attachments/wp-content/uploads/2024/08/BSNL-3.jpg)
ಪ್ರಿಪೇಯ್ಡ್​ ಬಳಕೆದಾರರು ದೈನಂದಿನ ಬಳಕೆಗಾಗಿ ಡೇಟಾ, ಅನಿಯಮಿತ ಕರೆ ಇರುವ ಪ್ಲಾನ್​ಗಳನ್ನು ಹುಡುಕುತ್ತಿರುತ್ತಾರೆ. ಅದರಲ್ಲೂ ಹೆಚ್ಚಿನ ಬೆನಿಫಿಟ್​​ ಒದಗಿಸುವ ಪ್ಲಾನ್​ಗಳ ಮೊರೆ ಹೋಗುತ್ತಾರೆ. ಸದ್ಯ ದಿನಕ್ಕೆ 7 ರೂಪಾಯಿಗಿಂತ ಕಡಿಮೆ ಬೆಲೆಯ 75 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್​​ಗಳ ಮೊರೆ ಹೋಗುತ್ತಿದ್ದಾರೆ. ಅದರಂತೆ ಇಲ್ಲೊಂದು ಬಿಎಸ್​​​ಎನ್​​ಎಲ್​ ಪ್ಲಾನ್​ ಕೂಡ ಗ್ರಾಹಕರ ಮನಗೆದ್ದಿದ್ದು ಟ್ರೆಂಡಿಂಗ್​ನಲ್ಲಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್​​ಎನ್​ಎಲ್​ 499 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ ಜನರ ಮನಗೆದ್ದಿದೆ. ಈ ಪ್ಲಾನ್​​ 75 ದಿನಗಳ ಸಿಂಧುತ್ವ ಹೊಂದಿದೆ. ಈ ಪ್ಲಾನ್​ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್​ಟಿಡಿ ಕರೆಗಳನ್ನು ಆನಂದಿಸಬಹುದಾಗಿದೆ. ದಿನಕ್ಕೆ 100 ಉಚಿತ ಎಸ್​​ಎಮ್​​ಎಸ್​​ ನೀಡುತ್ತಿದೆ.
499 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​​ ದಿನಕ್ಕೆ 2ಜಿಬಿ ಡೇಟಾ ಒದಗಿಸುತ್ತದೆ. ಮಾತ್ರವಲ್ಲದೆ ಈ ರೀಚಾರ್ಜ್​ ಯೋಜನೆಯೊಂದಿಗೆ ಬಳಕೆದಾರರು 3ಜಿಬಿ ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ.
ಇದನ್ನೂ ಓದಿ: ಪೇಜರ್​ ಎಂದರೇನು? ​ಹಿಜ್ಬುಲ್ಲಾಗಳು 1980ರ ಹಳೆಯ ಸಾಧನವನ್ನು ಈಗಲೂ ಬಳಸುತ್ತಿರೋದೇಕೆ?
ಬಿಎಸ್​​ಎನ್​ಎಲ್​ 2025ರ ವೇಳೆಗೆ 1 ಲಕ್ಷದಷ್ಟು 4ಜಿ ಟವರ್​​ ನಿಯೋಜಿಸಲು ಯೋಚಿಸಿದೆ. 25 ಸಾವಿರ ಹಳ್ಳಿಗಳಿಗೆ ಟೆಲಿಕಾಂ ಟವರ್​ ಸ್ಥಾಪಿಸಲು ಸಿದ್ಧವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us