/newsfirstlive-kannada/media/post_attachments/wp-content/uploads/2024/08/BSNL-3.jpg)
ಸರ್ಕಾರಿ ಸ್ವಾಮ್ಯದ BSNL ಮತ್ತು ಖಾಸಗಿ ಟೆಲಿಕಾಂ ಕಂಪನಿಗಳ ಯೋಜನೆಗಳನ್ನು ಜನರು ಹೋಲಿಕೆ ಮಾಡುತ್ತಿದ್ದಾರೆ. ಅದರಲ್ಲಿ ಬೆಸ್ಟ್​ ಯೋಜನೆಯನ್ನು ನೀಡುವ ಕಂಪನಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಸದ್ಯ ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟ ಗ್ರಾಹಕರು BSNLನತ್ತ ಮೊರೆ ಹೋಗುತ್ತಿದ್ದಾರೆ.
BSNL ಕಂಪನಿಯ ಹಲವು ಯೋಜನೆಗಳು ಸದ್ಯ ಟ್ರೆಂಡಿಂಗ್​ನಲ್ಲಿವೆ. ಆ ಪೈಕಿ 397 ರೂಪಾಯಿ ಪ್ರಿಪೇಯ್ಡ್​ ಯೋಜನೆ ಗ್ರಾಹಕರ ಮನಗೆದ್ದಿದೆ. ಒಂದು ಬಾರಿ ರೀಚಾರ್ಜ್​ ಮಾಡಿದ್ರೆ ಸಾಕು 5 ತಿಂಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿದೆ.
397 ರೂಪಾಯಿ ಬೆಲೆಯ ಈ ಯೋಜನೆಯ ಮೂಲಕ 30 ದಿನಗಳವರೆಗೆ ಅನಿಯಮಿತ ಕರೆ ಒದಗಿಸುತ್ತದೆ. ದೇಶದ ಮೂಲೆ ಮೂಲೆಗೆ ಕರೆ ಮಾಡಬಹುದಾಗಿದೆ. ಜೊತೆಗೆ ರಾಷ್ಟ್ರವ್ಯಾಪಿ ಉಚಿತ ರೋಮಿಂಗನ್ನು ಆನಂದಿಸಬಹುದಾಗಿದೆ. ಆದರೆ 30 ದಿನಗಳ ನಂತರ ಬಳಕೆದಾರರು ಹೊರ ಹೋಗುವ ಕರೆಗಳಿಗೆ ಟಾಪ್​-ಅಪ್​​ ರೀಚಾರ್ಜ್​ ಮಾಡಬೇಕಾಗುತ್ತದೆ. ರೀಚಾರ್ಜ್​ ಮಾಡಿದ ಬಳಿಕ ಒಳಬರುವ ಕರೆಗಳು 150 ದಿನಗಳವರೆಗೆ ಮುಂದುವರೆಯುತ್ತದೆ.
ಇದನ್ನೂ ಓದಿ: ಒಂದಲ್ಲಾ, ಎರಡಲ್ಲಾ, 14 OTT ಸೇವೆ ಸಂಪೂರ್ಣ ಉಚಿತ! 154 ರೂಪಾಯಿಯ ಪ್ಲಾನ್​ನಲ್ಲಿ ಇಷ್ಟೆಲ್ಲಾ ಸಿಗುತ್ತಾ?
ಈ ಯೋಜನೆ ಮೂಲಕ ಮೊದಲ 30 ದಿನಗಳವರೆಗೆ 2ಜಿಬಿ ಡೇಟಾ ನೀಡುತ್ತದೆ. ಆ ಬಳಿಕ 40kbps ವೇಗದಲ್ಲಿ ಅನಿಯಮಿತ ಡೇಟಾ ಒದಗಿಸುತ್ತದೆ. ಮೊದಲ 30 ದಿನಗಳವರೆಗೆ 100 ಉಚಿತ ಎಸ್​​ಎಮ್​ಎಸ್​ ನೀಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us