ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಾಮರ್ ಇದೆಯಾ?
ನೆಟ್ವರ್ಕ್ ಜಾಮರ್ ಜೈಲಿನಲ್ಲಿ ಹೇಗೆ ಕೆಲಸ ಮಾಡುತ್ತೆ?
ಜಾಮರ್ ಇದ್ರೂ ಜೈಲಿನಲ್ಲಿ ಸ್ಮಾರ್ಟ್ಫೋನ್ ಹೇಗೆ ಬಂತು
ಕೈದಿಗಳ ನಿಯಂತ್ರಣಕ್ಕೆ ಅನುಗುಣವಾಗಿ ಜೈಲು ಜಾಮರ್ ಎಂಬ ತಂತ್ರಜ್ಞಾನ ಬಂದಿದೆ. ಇದೊಂದು ಸ್ಮಾರ್ಟ್ ತಂತ್ರಜ್ಞಾನವಾಗಿದ್ದು, ಇದರ ಮೂಲಕ ಜೈಲಿನ ಒಳಕ್ಕೆ ಬರುವ ಅನಧಿಕೃತ ಕರೆಗಳನ್ನು ನಿರ್ಬಂಧಿಸಬಹುದಾಗಿದೆ. ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಜಾಮರ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಕೇವಲ ಕರೆಗಳ ನಿರ್ಬಂಧ ಮಾತ್ರವಲ್ಲದೆ, ಅನಧಿಕೃತ ಕರೆಗಳನ್ನು ಪತ್ತೆಹಚ್ಚಲು ಇದರಿಂದ ಸಾಧ್ಯವಿದೆ.
ಜೈಲು ಜಾಮರ್ ಹೇಗೆ ಕಾರ್ಯನಿರ್ವಹಿಸುತ್ತದೆ
ಜೈಲಿನ ಒಳಕ್ಕೆ ಸೆಲ್ಫೋನ್ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ ಜೈಲು ಜಾಮರ್ ಅಳವಡಿಸಲಾಗಿದೆ. ಈ ಸೆಲ್ಯುಲರ್ ಜ್ಯಾಮಿಂಗ್ ಸಾಧನವನ್ನು ಯಾವುದೇ ಸಮಯದಲ್ಲಿ ಬೇಕಾದರೂ ಸಂವಹನಕ್ಕೆ ಅನುಮತಿಸುವ ಮತ್ತು ನಿರಾಕರಿಸುವ ಆಯ್ಕೆಯನ್ನು ಹೊಂದಿದೆ.
ಇದನ್ನೂ ಓದಿ: ಒಂದಲ್ಲಾ, ಎರಡಲ್ಲಾ, 14 OTT ಸೇವೆ ಸಂಪೂರ್ಣ ಉಚಿತ! 154 ರೂಪಾಯಿಯ ಪ್ಲಾನ್ನಲ್ಲಿ ಇಷ್ಟೆಲ್ಲಾ ಸಿಗುತ್ತಾ?
ಅಂದಹಾಗೆಯೇ ಸೆಲ್ಯುಲರ್ ಜ್ಯಾಮಿಂಗ್ ಸಾಧನ ರಿಮೋಟ್ ಕಂಟ್ರೋಲ್ ಕಾರ್ಯಾಚರಣೆ ಪ್ರಯೋಜನವನ್ನು ಹೊಂದಿದೆ. ರಿಮೋಟ್ ಆನ್/ಆಫ್ ಮಾಡುವ ಮೂಲಕ ಇದನ್ನು ಸಕ್ರಿಯಗೊಳಿಸಬಹುದಾಗಿದೆ.
ಇನ್ನು ದರ್ಶನ್ ವಿಡಿಯೋ ಕರೆ ವಿಚಾರವನ್ನು ಗಮನಿಸುವುದಾದರೆ, ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿಯೂ ಸಹ ನೆಟ್ವರ್ಕ್ ಜಾಮರ್ ಅಳವಡಿಸಲಾಗಿದೆ. ಇದು ಹೈ ಫ್ರೀಕ್ವೆನ್ಸಿ ಜಾಮರ್ ಆಗಿದ್ದು, ಜೈಲಿನ ಆಸುಪಾಸಿನಲ್ಲಿರುವ ಮನೆಗಳು ಇದರಿಂದ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯರು ನೆಟ್ ವರ್ಕ್ ಸಮಸ್ಯೆ ಬಗ್ಗೆ ಆಗಾಗ ಮನವಿ ಮಾಡುತ್ತಿರುತ್ತಾರೆ.
ಇದನ್ನೂ ಓದಿ: 50MP, 8MP ಕ್ಯಾಮೆರಾ, 55000mAh ಬ್ಯಾಟರಿ.. ಇಂದು ಬಜೆಟ್ ಬೆಲೆಯ Vivo T3 Pro 5G ಸ್ಮಾರ್ಟ್ಫೋನ್ ರಿಲೀಸ್!
ಸ್ಥಳೀಯರ ಸಮಸ್ಯೆಯನ್ನು ಆಳಿಸಿದ ಅಧಿಕಾರಿಗಳು ಜೈಲು ಜಾಮರನ್ನು ಸ್ವಲ್ಪ ಮಟ್ಟಿಗೆ ಸಡಿಲಿಕೆ ಮಾಡಿದ್ದರು ಎನ್ನಲಾಗುತ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೈದಿಗಳು ಸ್ಮಾರ್ಟ್ಫೋನ್ ಬಳಕೆಯ ಜೊತೆಗೆ ವಿಡಿಯೋ ಕರೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಆದರೀಗ ನೆಟ್ವರ್ಕ್ ಜಾಮರ್ ಇದ್ದರೂ ಇಲ್ಲದಿದ್ದರೂ ಜೈಲಿನ ಒಳಕ್ಕೆ ಸ್ಮಾರ್ಟ್ಫೋನ್ ಹೇಗೆ ಬಂತು ಎಂಬ ಅನುಮಾನ ದೊಡ್ಡದಾಗಿ ಕಾಡುತ್ತಿದೆ. ಸ್ಥಳೀಯರಿಗೆ ಆಗುವ ನೆಟ್ವರ್ಕ್ ಸಮಸ್ಯೆ ಕೈದಿಗಳಿಗೆ ಯಾಕಾಗುತ್ತಿಲ್ಲ ಎಂಬ ಮತ್ತೊಂದು ಅನುಮಾನ ಹುಟ್ಟಿಕೊಂಡಿದೆ. ಆದರೆ ಇವೆಲ್ಲದ್ದಕ್ಕೆ ಸರಿಯಾದ ತನಿಖೆ ಮೇಲೆ ಉತ್ತರ ಸಿಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ