newsfirstkannada.com

ಅದ್ಭುತ ಕ್ಯಾಮೆರಾ, ದೀರ್ಘಾವಧಿಯ ಬ್ಯಾಟರಿ.. ಆಕರ್ಷಕ Vivo T3 Pro 5G ಸ್ಮಾರ್ಟ್​ಫೋನ್​ ರಿಲೀಸ್​​!

Share :

Published August 27, 2024 at 7:10am

Update August 27, 2024 at 12:14pm

    ಇಂದು Vivo T3 Pro 5G ಸ್ಮಾರ್ಟ್​ಫೋನ್​ ರಿಲೀಸ್​

    ಆಕರ್ಷಕ ಕ್ಯಾಮೆರಾ, ಅದ್ಭುತ ಬ್ಯಾಟರಿ.. ಹೇಗಿದೆ ಸ್ಮಾರ್ಟ್​ಫೋನ್?

    ಇಷ್ಟೊಂದು ಕಡಿಮೆ ಬೆಲೆಗೆ ಸಿಗುತ್ತಾ Vivo T3 Pro 5G ಸ್ಮಾರ್ಟ್​ಫೋನ್?

ಹೊಸ ಸ್ಮಾರ್ಟ್​ಫೋನ್​ ಹುಡುಕಾಡುತ್ತಿದ್ದೀರಾ? ಬಜೆಟ್​ ಬೆಲೆಯ ಸ್ಮಾರ್ಟ್​​ಫೋನ್​ಗಾಗಿ ಸರ್ಚ್​ ಮಾಡುತ್ತಿದ್ದೀರಾ? ಹಾಗಿದ್ರೆ ಅಂತವರಿಗಾಗಿ ಸಿಹಿಸುದ್ದಿಯೊಂದಿದೆ. ಜನಪ್ರಿಯ ವಿವೋ (Vivo) ಕಂಪನಿ ಇಂದು ನೂತನ ಸ್ಮಾರ್ಟ್​ಫೋನನ್ನು ಪರಿಚಯಿಸುತ್ತಿದೆ. ಸ್ಮಾರ್ಟ್​​ಫೋನ್ (Smartphone)​ ಪ್ರಿಯರಂತೂ ಹೊಸ ಸ್ಮಾರ್ಟ್​ಫೋನ್​ಗಾಗಿ ಕಾಯುತ್ತಿದ್ದಾರೆ.

ವಿವೋ T3 ಪ್ರೊ 5G (Vivo T3 Pro 5G) ಸ್ಮಾರ್ಟ್​ಫೋನನ್ನು ಇಂದು ಬಿಡುಗಡೆ ಮಾಡುತ್ತಿದೆ. ನೂತನ ಸ್ಮಾರ್ಟ್​ಫೋನ್​​ 120Hz ರಿಫ್ರೆಶ್​​ ದರ ಮತ್ತು 4,500nits ಗರಿಷ್ಠ ಬ್ರೈಟ್​​ನೆಸ್​​ನೊಂದಿಗೆ ಅಮೋಲ್ಡ್​​ ಡಿಸ್​​ಪ್ಲೇಯನ್ನು ಹೊಂದಿದೆ.

ಇದನ್ನೂ ಓದಿ: ವಾರೆವ್ಹಾ.. ಉಚಿತ ಕರೆ, ಪ್ರತಿದಿನ 2GB ಡೇಟಾ.. ಗ್ರಾಹಕರ ಮನಗೆದ್ದ 197 ರೂಪಾಯಿಯ​​ ಪ್ಲಾನ್​​!

ವಿವೋ T3 ಪ್ರೊ 5G ಹಿಂಭಾಗ ಲೆದರ್​ ಫಿನಿಶ್​ನಲ್ಲಿ ಮತ್ತು ಮೆಟಾಲಿಕ್​​ ಪ್ರೇಮ್​​ನಲ್ಲಿ ಬರುತ್ತಿದೆ. ಇನ್ನು ಕ್ಯಾಮೆರಾ ಮೋಡೆಲ್​ ಕೂಡ ಭಿನ್ನವಾಗಿದೆ.

ಚಿಪ್​ಸೆಟ್​? ಬ್ಯಾಟರಿ?

ವಿವೋ T3 ಪ್ರೊ 5G ಸ್ಮಾರ್ಟ್​​ಫೋನ್​​ ಸ್ನಾಪ್​​ಡ್ರ್ಯಾಗನ್​​ 7 ಜನರೇಶನ್​ 3 ಚಿಪ್​​ಸೆಟ್​ ಹೊಂದಿದೆ. 80 ವ್ಯಾಟ್​​ ಚಾರ್ಜಿಂಗ್​​​ ಬೆಂಬಲದೊಂದಿಗೆ 55000mAh ಬ್ಯಾಟರಿ ಪ್ಯಾಕ್​​ ಅನ್ನು ಅಳವಡಿಸಿಕೊಂಡಿದೆ. ಗ್ರಾಹಕರಿಗಾಗಿ ಸ್ಯಾಂಡ್​​ಟೋನ್​​ ಆರೆಂಜ್​ ಮತ್ತು ಎಮೆರಾಲ್ಡ್​​ ಗ್ರೀನ್​ ಆಯ್ಕೆಯಲ್ಲಿ ಪರಿಚಯಿಸಲಿದೆ.

ಇದನ್ನೂ ಓದಿ: ಅನಿಯಮಿತ ಕರೆ, 10GB ಡೇಟಾ.. BSNL 147 ರೂಪಾಯಿಯ​ ಪ್ಲಾನ್​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​

ಕ್ಯಾಮೆರಾ ವಿಶೇಷತೆ:

ಕ್ಯಾಮೆರಾ ಗಮಮನಿಸುವುದಾದರೆ. ಇದರಲ್ಲಿ 50 ಮೆಗಾಫಿಕ್ಸೆಲ್​​​ ಪ್ರೈಮರಿ ಕ್ಯಾಮೆರಾ, 8MP ವೈಡ್​ ಆ್ಯಂಗಲ್​ ಕ್ಯಾಮೆರಾ ಹೊಂದಿದೆ. ಜೊತೆಗೆ ಚೆನ್ನಾಗಿ ಫೋಟೋ ಕ್ಲಿಕ್ಕಿಸುವ ಸಾಮರ್ಥ್ಯವನ್ನು ನೂತನ ವಿವೋ T3 ಪ್ರೊ 5G ಸ್ಮಾರ್ಟ್​ಫೋನ್​ ಹೊಂದಿದೆ. ಸೆಲ್ಫಿ ಕ್ಯಾಮೆರಾದ ಬಗ್ಗೆ ಇನ್ನೂ ಮಾಹಿತಿ ಬಹಿರಂಗಗೊಂಡಿಲ್ಲ. ಸದ್ಯ ಹರಿದಾಡುತ್ತಿರುವ ಮಾಹಿತಿಯಂತೆ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 16 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ ಎಂಬ ವದಂತಿಗಳಿವೆ.

ಇದನ್ನೂ ಓದಿ: ಪಾಕಿಸ್ತಾನದ ಒಳಗೆ ರಣಭೀಕರ ಮಾರಣಹೋಮ.. ಸಾವಿನ ಸಂಖ್ಯೆ 60ಕ್ಕೂ ಹೆಚ್ಚು; ಕಾರಣವೇನು?

ವಿವೋ T3 ಪ್ರೊ 5G ಸ್ಮಾರ್ಟ್​ಫೋನ್​​ನಲ್ಲಿ 12GB RAM ಮತ್ತು 256GB ಆಂತರಿಕ ಸಂಗ್ರಹಣೆಯನ್ನು ನೀಡಲಾಗಿದೆ. ಇದರಲ್ಲದೆ ಫನ್​​ಟಚ್​​​​​ OS14 ಬೆಂಬಲವನ್ನು ಪಡೆದಿದೆ. ಆ್ಯಂಡ್ರಾಯ್ಡ್​​ 15ನಿಂದ ಕಾರ್ಯನಿರ್ವಹಿಸುತ್ತದೆ.

ಬೆಲೆ ಎಷ್ಟಿದೆ?

ಗ್ರಾಹಕರಿಗೆ ನೂತನ ಸ್ಮಾರ್ಟ್​ಫೋನಿನ ಬೆಲೆಯ ಬಗ್ಗೆ ಬಾರಿ ಕುತೂಹಲವಿದೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ 19,999 ರೂಗೆ ವಿವೋ T3 ಪ್ರೊ 5G ಸಿಗಲಿದೆ ಎನ್ನಲಾಗುತ್ತಿದೆ. ಆದರೆ ಹೆಚ್ಚಿನ ಮಾಹಿತಿ ಬಿಡುಗಡೆಗೊಂಡ ಬಳಿಕವಷ್ಟೇ ಹೊರಬೀಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದ್ಭುತ ಕ್ಯಾಮೆರಾ, ದೀರ್ಘಾವಧಿಯ ಬ್ಯಾಟರಿ.. ಆಕರ್ಷಕ Vivo T3 Pro 5G ಸ್ಮಾರ್ಟ್​ಫೋನ್​ ರಿಲೀಸ್​​!

https://newsfirstlive.com/wp-content/uploads/2024/08/Vivo-T30-pro-1.jpg

Load More